'ರಾಹುಲ್ ಗಾಂಧಿ ಭಾಷಣದ ಹಿಂದಿನ ಶಕ್ತಿ ಈಗ ಗೊತ್ತಾಯ್ತು'
ನವದೆಹಲಿ, ಆಗಸ್ಟ್. 13: ಸಂಸತ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಈ ಬಾರಿ ಮಾತನಾಡಿದ್ದನ್ನು ನೋಡಿ ಸ್ವತಃ ಕಾಂಗ್ರೆಸ್ಸಿಗರೇ ಬೆಚ್ಚಿಬಿದ್ದಿದ್ದರು. ಇದು ಕಾಂಗ್ರೆಸ್ ಮುಖಂಡರಲ್ಲಿ ಹೊಸ ಹುರುಪನ್ನು ತಂದಿತ್ತು. ಅಲ್ಲದೇ ಸಂಸತ್ ಭವನದ ಎದುರು ನಡೆದ ಪ್ರತಿಭಟನೆಯಲ್ಲೂ ರಾಹುಲ್ ಮುಂದಾಳತ್ವ ವಹಿಸಿದ್ದರು.
ರಾಹುಲ್ ಗಾಂಧಿ ಸಂಸತ್ ನಲ್ಲಿ ಈ ಬಗೆಯ ವಾಕ್ ಪ್ರಹಾರ ಮಾಡಲು ಚೀಟಿಯೊಂದನ್ನು ಇಟ್ಟುಕೊಳ್ಳುತ್ತಿದ್ದರು ಎಂಬ ಸಂಗತಿ ಗುರುವಾರ ಗೊತ್ತಾಗಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಹರಿದು ಬರಲು ಆರಂಭಿಸಿವೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಮಾತನಾಡುತ್ತ ರಾಹುಲ್ ಗಾಂಧಿಯವರೇ ನಿಮ್ಮ ಕುಟುಂಬದ ಇತಿಹಾಸವನ್ನು ಮೊದಲು ತಿಳಿದುಕೊಳ್ಳಿ ಎಂದು ಹೇಳಿದ್ದರು. ವಿದೇಶದಿಂದ ಹಿಂದಿರುಗಿದ ಮೇಲೆ ರಾಹುಲ್ ಗಾಂಧಿ ಮಾತಿನ ಭರಾಟೆ ಜೋರಾಗಿದ್ದಕ್ಕೆ ಇದೀಗ ಕಾರಣ ಗೊತ್ತಾಗುತ್ತಿದೆ ಎಂದು ಟ್ವಿಟ್ಟಿಗರು ಹೇಳುತ್ತಿದ್ದಾರೆ. ಕೆಲ ಟ್ವೀಟ್ ಸ್ಯಾಂಪಲ್ ಗಳು ಇಲ್ಲಿವೆ. #PappuSoDuffer ಎಂಬ ಹಾಶ್ ಟ್ಯಾಗ್ ಸದ್ಯ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್.

3 ಮಂಗಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು
ರಾಹುಲ್ ಗಾಂಧಿ ಭಾಷಣ ಮಾಡುವಾಗ ಚೀಟಿ ಇಟ್ಟುಕೊಂಡಿದ್ದರಲ್ಲಿ ತಪ್ಪಿಲ್ಲ. ಮಹಾತ್ಮ ಗಾಂಧೀಜಿಯವರ 3 ಮಂಗಗಳ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಬೇಕಿತ್ತು.

ನೋಟ್ಸ್ ತಯಾರು ಮಾಡಿದ್ರೆ ತಪ್ಪಿಲ್ಲ
ಇದನ್ನು ಟೀಕೆ ಮಾಡುವುದು ಸರಿಯಲ್ಲ. ಪರೀಕ್ಷೆಗೆ ತೆರಳುವ ಮುನ್ನ ನಾವು ಹೀಗೆ ನೋಟ್ಸ್ ತಯಾರು ಮಾಡಿಕೊಳ್ಳುತ್ತೇವೆ!

ವಿಧೇಯ ವಿದ್ಯಾರ್ಥಿ
ರಾಹುಲ್ ಗಾಂಧಿ ಒಬ್ಬ ವಿಧೇಯ ವಿದ್ಯಾರ್ಥಿ ಎಂಬುದು ಗೊತ್ತಾಯಿತು. ಹೀಗಾದರೂ ಒಂದಷ್ಟು ತಿಳಿವಳಿಕೆ ಬೆಳೆಸಿಕೊಂಡರಲ್ಲ.
|
ಹಿಂದಿಯಲ್ಲಿ ರೋಮನ್ ಓದಿದ ಸಾಧನೆ
ಅಂತೂ ಇಂತೂ ರಾಹುಲ್ ಗಾಂಧಿ ಹಿಂದಿಯನ್ನು ರೋಮನ್ ನಲ್ಲಿ ಓದಿದರು.
ಈ ವಿಡಿಯೋ ನೋಡಿ
ರಾಹುಲ್ ಗಾಂಧಿ ಚೀಟಿ ಇಟ್ಟುಕೊಂಡ ಕತೆ ಹೇಳುವ ವಿಡಿಯೋ ನೋಡಿ












Click it and Unblock the Notifications