Get Updates
Get notified of breaking news, exclusive insights, and must-see stories!

India VS Canada: ಭಾರತ ಬೇಕಾ? ಇಲ್ಲ ಕೆನಡಾ ಬೇಕಾ? ಅಂತಾ ಕೇಳಿದ್ದಕ್ಕೆ ಅಮೆರಿಕ ಹೇಳಿದ್ದೇನು?

ಭಾರತ ಹಾಗೂ ಕೆನಡಾ ನಡುವೆ ಬೆಂಕಿ ಹೊತ್ತಿ ಉರಿಯುವ ಸಂದರ್ಭಕ್ಕೇ ಅಮೆರಿಕ ಮಧ್ಯ ಪ್ರವೇಶ ಮಾಡಿದೆ. ಉಕ್ರೇನ್ & ರಷ್ಯಾ ಯುದ್ಧ ನಡೆಯುವಾಗ ಭಾರತದ ವಿರುದ್ಧ ಕೆನಡಾ ಕೆಂಡ ಕಾರಿದೆ. ಪರಿಸ್ಥಿತಿ ಹೀಗಿದ್ದಾಗ ನ್ಯಾಟೋ ದೇಶಗಳಿಗೆ ಯಾರ ಪರವಾಗಿ ನಿಲ್ಲಬೇಕು..? ಅನ್ನೋದೆ ಅರ್ಥ ಆಗುತ್ತಿಲ್ಲ. ಆದರೆ ಇದೇ ಸಮಯದಲ್ಲಿ ಭಾರತ ಬೇಕಾ? ಇಲ್ಲ ಕೆನಡಾ ಬೇಕಾ? ಅಂತಾ ಕೇಳಿದ್ದಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಹೇಳಿದ್ದೇನು ಗೊತ್ತಾ?

ಅಮೆರಿಕ ಮತ್ತು ಭಾರತ ಸಂಬಂಧ ಗಟ್ಟಿಯಾಗಿದ್ದು ಹಲವು ದಶಕದಿಂದ ಭಾರತದ ಜೊತೆ ಮತ್ತಷ್ಟು ಹತ್ತಿರವಾಗುತ್ತಿದೆ ಅಮೆರಿಕ. ಏಕೆಂದರೆ ಭಾರತದ ಜೊತೆ ಸಂಬಂಧ ಸಾಧಿಸಿದರೆ, ಅಮೆರಿಕಗೆ ಭಾರಿ ಲಾಭ ಸಿಗುತ್ತದೆ. ಹೀಗಾಗಿಯೇ ಭಾರತವನ್ನು ಅಮೆರಿಕ ಬಿಟ್ಟುಕೊಡಲ್ಲ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಬಡಿದಾಟ ಜೋರಾದ ಈ ಸಮಯಕ್ಕೆ ಭಾರತ ಇಲ್ಲದೆ ಜಗತ್ತಿನ ಹೃದಯ & ಕೈಕಾಲು ಆಡಲ್ಲ. ಆದರೆ ಕೆನಡಾ ವಿಚಾರ ಬಂದಾಗ ನಿಮಗೆ ಭಾರತ ಬೇಕಾ? ಇಲ್ಲವೇ ಕೆನಡಾ ಬೇಕಾ? ಅಂತಾ ಪ್ರಶ್ನೆ ಕೇಳಿದಾಗ ಅಮೆರಿಕ ಕೊಟ್ಟಿರುವ ಉತ್ತರ ಸಖತ್ ಮಜವಾಗಿದೆ, ಮುಂದೆ ಓದಿ.

When It Comes to Choosing One Between India and Canada, Will Pick India: Pentagon Officials

ನಮಗೆ ಭಾರತವೇ ಬೇಕು ಅಂತು ಅಮೆರಿಕ!

ಹೌದು, ಕೆನಡಾ ಪ್ರಧಾನಿ ಭಾರತ ಜೊತೆ ಕಿರಿಕ್ ತೆಗೆದಿರುವ ವಿಚಾರಕ್ಕೆ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕಲ್‌ ರುಬಿನ್‌ ಖಡಕ್ ಉತ್ತರ ಕೊಟ್ಟಿದ್ದಾರೆ. ಹಾಗೇ ಅಮೆರಿಕ ಯಾರ ಪರ ನಿಲ್ಲಲಿದೆ ಎಂಬುದನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಕೆನಡಾ ಪ್ರಧಾನಿ ಭಾರತದ ಜೊತೆ ತೆಗೆದಿರುವ ಕಿರಿಕ್ ಬಗ್ಗೆ ತಿಳಿಸಿರುವ ಮೈಕಲ್‌ ರುಬಿನ್‌, ಕೆನಡಾ ಭಾರತದ ಜತೆಗೆ ಸಂಘರ್ಷಕ್ಕೆ ಇಳಿದಿದೆ ಅಂದ್ರೆ, ಅದು ಆನೆಯ ಜೊತೆಗೆ ಇರುವೆ ಕಾಳಗಕ್ಕೆ ಇಳಿದಂತೆ ಎಂದಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪದ ಬಗ್ಗೆ ಈ ಮೂಲಕ ರುಬಿನ್‌ ಗೇಲಿ ಮಾಡಿದ್ದಾರೆ.

ಕೆನಡಾಗೆ ಭಾರಿ ಮುಖಭಂಗ?

ಜಸ್ಟಿನ್ ಟ್ರುಡೋ ಕಿರಿಕ್ ಮಾಡಿದ್ದೇ ತಡ ಭಾರತ ಕೂಡ ತಕ್ಕ ಉತ್ತರ ನೀಡಿತ್ತು. ಆದ್ರೆ ಈ ಸಂದರ್ಭದಲ್ಲಿ ಕೆನಡಾ ಪರವೇ ಅಮೆರಿಕ ಅಧ್ಯಕ್ಷರು ನಿಂತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಮೈಕಲ್‌ ರುಬಿನ್‌ ಅವರ ಮಾತುಗಳು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಂತಿದೆ. ಇನ್ನು ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಭೀಕರ ಹತ್ಯೆ ಆರೋಪವನ್ನ ಕೆನಡಾ ಪಿಎಂ ಭಾರತದ ಮೇಲೆ ಹೊರಿಸಲು ಯತ್ನಿಸಿದ್ದರು. ಹಾಗೇ ಅಮೆರಿಕ ಸೇರಿದಂತೆ ನ್ಯಾಟೋ ಒಕ್ಕೂಟದ ರಾಷ್ಟ್ರಗಳ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದರು. ಈಗ ಅಮೆರಿಕದಿಂದ ಸೂಕ್ತ ಉತ್ತರ ಸಿಕ್ಕಿದೆ.

When It Comes to Choosing One Between India and Canada, Will Pick India: Pentagon Officials

ಮೈಕಲ್‌ ರುಬಿನ್‌ ಹೇಳಿದ್ದು ಇಷ್ಟು...

ಅಷ್ಟಕ್ಕೂ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗಾನ್‌ನಲ್ಲಿ ಸೇವೆ ಸಲ್ಲಿಸಿರುವ ಅನುಭವ ಈ ಮೈಕಲ್‌ ರುಬಿನ್‌ ಅವರಿಗೆ ಇದೆ. ಹೀಗಾಗಿ ಇವರು ನೀಡಿರುವ ಹೇಳಿಕೆ ಈಗ ಮಹತ್ವವನ್ನು ಪಡೆದಿದೆ. ರುಬಿನ್ ಹೇಳಿರುವಂತೆ, ಯಾವುದೇ ಎರಡು ದೇಶ ಸಂಘರ್ಷ ಶುರು ಮಾಡಿದಾಗ ಮತ್ತು ಇದರಿಂದ ರಾಜತಾಂತ್ರಿಕ ಬಿಕ್ಕಟ್ಟು ಶುರುವಾದರೆ 3ನೇ ದೇಶ ಮಧ್ಯಸ್ಥಿಕೆ ವಹಿಸುವುದು ಸುಲಭ. ಹೀಗಿದ್ದರೂ ಮಧ್ಯಸ್ಥಿಕೆ ವಹಿಸಿದಾಗ ಯಾವುದೇ ಒಂದು ದೇಶದ ಪರ ನಿಲ್ಲುವುದು ಕಷ್ಟ. ಈಗ ಭಾರತ & ಕೆನಡಾ ವಿಚಾರದಲ್ಲಿ ಅಮೆರಿಕಗೂ ಇದೇ ಆಗಿದೆ ಎಂದಿದ್ದಾರೆ. ಅಲ್ಲದೆ ಇಬ್ಬರಲ್ಲಿ ಅಂದ್ರೆ ಕೆನಡಾ ಅಥವಾ ಭಾರತ ಪೈಕಿ ಯಾರು ಬೇಕು? ಎಂಬುದಕ್ಕೂ ಅವರು ಉತ್ತರಿಸಿದ್ದಾರೆ.

ಟ್ರುಡೋ ಇರಲ್ಲ.. ಆದರೆ ಭಾರತ...

ಅಂದಹಾಗೆ ಮೈಕಲ್‌ ರುಬಿನ್‌ ಇದೀಗ ಉತ್ತರಿಸುವ ರೀತಿ ನೋಡಿದರೆ, ಅಮೆರಿಕದ ಪಾಲಿಗೆ ಭಾರತವೇ ಮುಖ್ಯ. ದ್ವಿಪಕ್ಷೀಯ ಹಾಗೂ ವ್ಯೂಹಾತ್ಮಕ ಸಂಬಂಧದ ವಿಚಾರದಲ್ಲಿ ಅಮೆರಿಕಕ್ಕೆ ಭಾರತವೇ ಪ್ರಮುಖ ಎಂಬುದನ್ನ ಮೈಕಲ್‌ ರುಬಿನ್‌ ಒತ್ತಿ ಒತ್ತಿ ಹೇಳಿದ್ದಾರೆ. ಹಾಗೇ ಈಗಿನ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದ ರುಬಿನ್‌, ಕೆನಡಾ ಸ್ಥಿತಿ ನೋಡಿದರೆ ಆನೆಯ ಜೊತೆಗೆ ಇರುವೆ ಕದನಕ್ಕೆ ಇಳಿದಿದೆ ಎಂದು ಟ್ರುಡೋ ಬಗ್ಗೆ ಗೇಲಿ ಮಾಡಿದ್ದಾರೆ. ಅಲ್ಲದೆ ಕೆನಡಾದಲ್ಲಿ ಜಸ್ಟಿನ್‌ ಟ್ರುಡೋ ತುಂಬಾ ದಿನ ಅಧಿಕಾರದಲ್ಲಿ ಉಳಿಯಲ್ಲ. ಈ ಕಾರಣಕ್ಕೆ ಅಮೆರಿಕ ಭಾರತಕ್ಕೆ ತನ್ನ ಬೆಂಬಲ ನೀಡಿ, ಜಸ್ಟಿನ್‌ ಟ್ರುಡೋ ಕೆನಡಾದಲ್ಲಿ ಅಧಿಕಾರದಿಂದ ಕೆಳಗಿಳಿದ ನಂತರ ಉತ್ತಮ ಸಂಬಂಧ ಹೊಂದಬಹುದು ಎಂದಿದ್ದಾರೆ.

When It Comes to Choosing One Between India and Canada, Will Pick India: Pentagon Officials

ಹಾಗೇ ಭಾರತದ ಮೋಸ್ಟ್ ವಾಟೆಂಡ್ ಉಗ್ರ ಹಾಗೂ ಖಲಿಸ್ತಾನಿಗಳ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಬಗ್ಗೆ ಕೆನಡಾ ಮಾಡಿದ ಆರೋಪಕ್ಕೂ ಉತ್ತರ ಕೊಟ್ಟಿದ್ದಾರೆ ರುಬಿನ್. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಬಗ್ಗೆ ಜಸ್ಟಿನ್‌ ಟ್ರುಡೋಗೆ ಸರಿಯಾಗಿ ಸ್ಪಷ್ಟತೆ ಇಲ್ಲ. ಭಾರತದ ವಿರುದ್ಧ ಆರೋಪ ಮಾಡುವ ಮೊದಲು ಟ್ರುಡೋ ಯೋಚಿಸಬೇಕಿತ್ತು. ಸಾಕ್ಷ್ಯ ಇಲ್ಲದೆ ಹೀಗೆ ಟ್ರುಡೋ ಆರೋಪ ಮಾಡಿದ್ದು ಸರಿಯಲ್ಲ. ಇದೆಲ್ಲವನ್ನೂ ಮೀರಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಒಬ್ಬ ಉಗ್ರನಾಗಿದ್ದ. ನಮಗೆ ಭಾರತ ಮುಖ್ಯ, ನಮಗೆ ಭಾರತದ ಜತೆಗಿನ ಸಂಬಂಧವೇ ಮುಖ್ಯ ಎಂದು ಮೈಕಲ್‌ ರುಬಿನ್‌ ಅಮೆರಿಕದ ನಿಲುವನ್ನು ತಿಳಿಸಿದ್ದಾರೆ.


ಕೆನಡಾ ಕಿರಿಕ್ ಶುರುವಾಗಿದ್ದು ಹೇಗೆ?

ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಹೀಗಾಗಿ ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಮಧ್ಯೆ ಅಮೆರಿಕ ಕೂಡ ನಮಗೆ ಭಾರತ ಮುಖ್ಯ ಎಂದಿದೆ.

ಒಟ್ನಲ್ಲಿ ಇಡೀ ಜಗತ್ತಿಗೆ ಮತ್ತೊಂದು ಖಡಕ್ ಸಂದೇಶ ಹೋಗಿದೆ, ಭಾರತ ನಮಗೆ ಮುಖ್ಯ ಎಂದು ವಿಶ್ವದ ದೊಡ್ಡಣ್ಣ ಒಪ್ಪಿಕೊಳ್ಳುತ್ತಿದೆ. ಈ ಮೂಲಕ ಕೆನಡಾ ಕೂಡ ಆದಷ್ಟು ಬೇಗ ಸತ್ಯ ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಭಾರತೀಯರಿಂದ ಕೇಳಿಬಂದಿದೆ. ಆದರೆ ಭಾರತದ ವಿರುದ್ಧ ಹೀಗೆ ಜಿದ್ದಿಗೆ ಬಿದ್ದಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ, ಮುಂದೆ ಯಾವ ರೀತಿ ನಿಲುವನ್ನು ತೆಗೆದುಕೊಳ್ಳುತ್ತಾರೆ? ಇದರಿಂದ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಸುಧಾರಣೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+