Anant Ambani Wedding: ಜಗತ್ತಿನ ಗಮನ ಸೆಳೆದಿದ್ದ ಅನಂತ್ ಅಂಬಾನಿ ಮದುವೆಗೆ 1 ವರ್ಷ
ಭಾರತದ ನಂಬರ್ 1 ಶ್ರೀಮಂತ, ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಉದ್ಯಮ ಕಟ್ಟಿ ಬೆಳೆಸಿರುವ ಮುಕೇಶ್ ಅಂಬಾನಿ ಅವರು ತಮ್ಮ ಪುತ್ರನ ಮದುವೆ ವಿಚಾರದಲ್ಲೂ ಇಡೀ ಪ್ರಪಂಚದ ಗಮನ ಸೆಳೆದರು. ಸಾವಿರ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ, ಜಗತ್ತಿನ ದೊಡ್ಡ ದೊಡ್ಡ ಗಣ್ಯರೆಲ್ಲಾ ಪಾಲ್ಗೊಳ್ಳಲು ಸಾಕ್ಷಿ ಆಗಿದ್ದ ಈ ವಿವಾಹ ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಹೀಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಂಭ್ರಮದಿಂದ ನಡೆದು ಇದೀಗ 1 ವರ್ಷ ತುಂಬಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮೆರ್ಚಂಟ್ ಅವರ ವಿವಾಹ ಮೂಲಕ ಜಾಗತಿಕವಾಗಿ ಭಾರತದ ಹೆಸರು ಇಡೀ ಪ್ರಪಂಚದ ಗಮನ ಸೆಳೆದಿತ್ತು. 2024ರ ಜುಲೈ ತಿಂಗಳಲ್ಲಿ ಮಹಾನಗರಿ ಮುಂಬೈ ಈ ವಿವಾಹಕ್ಕೆ ಸಾಕ್ಷಿ ಆಗಿತ್ತು. ಕಾರ್ಯಕ್ರಮ ಆಯೋಜನೆ ಮತ್ತು ಅತಿಥಿಗಳೂ ಸೇರಿದಂತೆ ಹಲವು ವಿಚಾರಗಳಿಂದ ಈ ವಿವಾಹ ಇಡೀ ಪ್ರಪಂಚದಲ್ಲಿ ಮನೆಮಾತಾಗಿತ್ತು. ಹೀಗೆ ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮೆರ್ಚಂಟ್ ಅವರ ವಿವಾಹಕ್ಕೆ ಇದೀಗ ಒಂದು ವರ್ಷ ತುಂಬಿದೆ.

ಜಾಗತಿಕವಾಗಿ ಗಮನ ಸೆಳೆದಿದ್ದ ಕಾರ್ಯಕ್ರಮ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಮತ್ತು ಉದ್ಯಮಿ ವಿರೇನ್ ಮೆರ್ಚಂಟ್ ಅವರ ಪುತ್ರಿ ರಾಧಿಕಾ ಅವರ ಮದುವೆಗೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸೇರಿದಂತೆ ಉದ್ಯಮಿಗಳು, ದೊಡ್ಡ ದೊಡ್ಡ ರಾಜಕೀಯ ನಾಯಕರು, ಜಾಗತಿಕ ಸೆಲೆಬ್ರಿಟಿಗಳು, ಹಾಗೂ ಮನರಂಜನೆ ಮತ್ತು ರಾಜತಾಂತ್ರಿಕ ಕ್ಷೇತ್ರದಿಂದ ಬಂದ ವಿಶೇಷ ಅಥಿಗಳು ಸಾಕ್ಷಿಯಾಗಿದ್ದರು. ಇದೇ ಕಾರಣಕ್ಕೆ ಈ ಸಮಾರಂಭ ಹೊಸ ಇತಿಹಾಸ ನಿರ್ಮಾಣ ಮಾಡುವ ಜೊತೆಗೆ ಅಂತಾರಾಷ್ಟ್ರೀಯ ಮಾಧ್ಯಮ ಲೋಕದ ಗಮನ ಸೆಳೆದಿತ್ತು. ಅಲ್ಲದೆ ವೀಕ್ಷಣೆ ವಿಚಾರದಲ್ಲಿ ಕೂಡ ಹೊಸ ದಾಖಲೆ ಬರೆದು, ಆನ್‌ಲೈನ್ ಮೂಲಕ ಕೋಟಿ ಕೋಟಿ ವೀಕ್ಷಣೆ ಗಳಿಸಿತ್ತು. ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಭಾರತದ ಹೊರಗಡೆ ಅತ್ಯಂತ ಗಮನ ಸೆಳೆದ ಕಾರ್ಯಕ್ರಮ ಇದಾಗಿತ್ತು.
ಈ ವಿಶೇಷ ಕಾರ್ಯಕ್ರಮವು, ಶಕ್ತಿಶಾಲಿಯಾಗಿ ಭಾರತ ಬೆಳೆಯುತ್ತಿರುವುಕ್ಕೆ ಕೂಡ ಉದಾಹರಣೆಯಾಗಿತ್ತು. ಜೊತೆಗೆ ಜಾಗತಿಕ ಗಣ್ಯರ ಆಗಮನದಿಂದ ಹಿಡಿದು ಸಾಂಸ್ಕೃತಿಕ ಕಾರ್ಯಕ್ರಮಗಳ ತನಕ ಎಲ್ಲಾ ವಿಚಾರದಲ್ಲಿ ಸದ್ದು ಮಾಡಿತ್ತು. ವಿವಾಹ ಸಮಾರಂಭದಲ್ಲಿ ಭಾರತೀಯ ಮೌಲ್ಯಗಳು, ಪರಂಪರೆ ಮತ್ತು ಪ್ರಭಾವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಧುನಿಕ ಜಗತ್ತಿಗೆ ಪರಿಚಯ ಮಾಡಿಕೊಟ್ಟಂತಾಯಿತು. ಹಾಗೂ ಸಾಂಸ್ಕೃತಿಕ ರಾಜತಾಂತ್ರಿಕತೆಯ ಶಕ್ತಿಯನ್ನು ಕೂಡ ಮತ್ತೊಮ್ಮೆ ಸಾಬೀತು ಮಾಡಿದೆ.
ಜಗತ್ತಿನ ಗಮನ ಭಾರತದ ಮೇಲಿತ್ತು!
ಎನರ್ಜಿ, ಟೆಲಿಕಾಂ ಮತ್ತು ಡಿಜಿಟಲ್ ನವೀನತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಈ ಸಮಯದಲ್ಲಿ, ವಿವಾಹದ ಹೈ-ಪ್ರೊಫೈಲ್ ಸ್ವರೂಪವು ದೇಶದ ಜಾಗತಿಕ ಪ್ರಸ್ತುತಿಯನ್ನು ಮತ್ತೊಮ್ಮೆ ಜಗತ್ತಿನ ಎದುರು ಹೆಮ್ಮೆಯಿಂದ ಪ್ರಸ್ತುತಪಡಿಸಿತ್ತು. ಪ್ರಮುಖ ಜಾಗತಿಕ ವ್ಯಕ್ತಿಗಳ ಆಗಮನ & ಭಾರತೀಯ ಸಾಂಸ್ಕೃತಿಕ, ಪರಂಪರೆ ಮತ್ತು ಸಂಪರ್ಕದಲ್ಲಿ ಆಧಾರಿತವಾಗಿರುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸಿತು.
ಅಂಬಾನಿ ಅವರ ಕುಟುಂಬವು ಇಷ್ಟು ವೈವಿಧ್ಯಮಯ ಮತ್ತು ಜಾಗತಿಕ ಶಕ್ತಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಾಮರ್ಥ್ಯವು ವೈಯಕ್ತಿಕ ಗೌರವವಷ್ಟೇ ಅಲ್ಲದೆ, ಭಾರತ ಜಾಗತಿಕ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನೂ ತೋರಿಸಿತು. ಈ ಘಟನೆ ಆತ್ಮವಿಶ್ವಾಸದಿಂದ ಭವಿಷ್ಯ ನೋಡುತ್ತಿರುವ, ತನ್ನ ಬೇರುಗಳಿಗೆ ಬದ್ಧವಾಗಿರುವ ಹಾಗೂ ಜಗತ್ತಿನೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿ ಇರುವ ಭಾರತದ ಸಂಕೇತ ಕೂಡ ಆಗಿದೆ.
ವರ್ಷದ ನಂತರವೂ, ಈ ಸಂಭ್ರಮದ ವಿವಾಹ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಹಾಗೇ ಹೊಸ ಇತಿಹಾಸ ಸೃಷ್ಟಿಸುವ ಜೊತೆಗೆ ಭವಿಷ್ಯದಲ್ಲಿ ಕೂಡ ಇದು ದಾಖಲೆಯಾಗಿಯೇ ಉಳಿಯಲಿದೆ.












Click it and Unblock the Notifications