Rameshwaram Cafe Blast: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೆ ‘ನಿಗೂಢ ಬ್ಯಾಗ್’ ಕಾರಣ?
ರಾಜಧಾನಿ ಬೆಂಗಳೂರು ಇಂದು ಬೆಚ್ಚಿಬಿದ್ದಿದೆ, ಬೆಂಗಳೂರಿನ ಇಂದಿರಾ ನಗರದಲ್ಲಿ ಇರುವ ಪ್ರತಿಷ್ಠಿತ ಹೋಟೆಲ್ 'ರಾಮೇಶ್ವರಂ ಕೆಫೆ'ಯಲ್ಲಿ ಡೆಡ್ಲಿ ಬ್ಲಾಸ್ಟ್ ಆಗಿದೆ. ಒಂದು ಕಡೆ ಹೀಗೆ ಸ್ಫೋಟ ಸಂಭವಿಸೋದಕ್ಕೆ ಕಾರಣ ಬಾಯ್ಲಿರ್ ಅಂತಾ ಹೇಳುತ್ತಿರುವಾಗಲೇ, ಕೋಟಿ ಕೋಟಿ ರೂಪಾಯಿ ದುಡ್ಡು ಮಾಡುವ ಈ ಪ್ರತಿಷ್ಠಿತ ಹೋಟೆಲ್ ಒಳಗೆ 'ನಿಗೂಢ ಬ್ಯಾಗ್' ವಿಚಾರ ಈಗ ಭರ್ಜರಿ ಸದ್ದು ಮಾಡುತ್ತಿದೆ! ಹಾಗಾದರೆ ಅಸಲಿ ಕಹಾನಿ ಏನು? 'ನಿಗೂಢ ಬ್ಯಾಗ್'ನ ಒಳಗೆ ಬಾಂಬ್ ಇತ್ತಾ? ಮುಂದೆ ಓದಿ.
ರಾಜಧಾನಿ ಬೆಂಗಳೂರಲ್ಲಿ ಪದೇ ಪದೇ ಹೋಟೆಲ್‌ಗಳಲ್ಲಿ ದುರಂತ ಸಂಭವಿಸುತ್ತಿವೆ. ಅದ್ರಲ್ಲೂ ಕಳೆದ ಕೆಲವು ತಿಂಗಳಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಗ್ರಾಹಕರಲ್ಲಿ ಭಯ ಹುಟ್ಟಿಸಿದೆ. ಇಂದು ಇಂತಹದ್ದೇ ಘಟನೆ ನಡೆದಿದ್ದು, ಎಚ್‌ಎಎಲ್ (HAL) ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಹೋಟೆಲ್ 'ರಾಮೇಶ್ವರಂ ಕೆಫೆ'ಯಲ್ಲಿ ಡೆಡ್ಲಿ ಬ್ಲಾಸ್ಟ್ ಆಗಿದ್ದು, ರಾಜಧಾನಿ ಬೆಂಗಳೂರಿನ ನಿವಾಸಿಗಳು ನಲುಗಿ ಹೋಗಿದ್ದಾರೆ. ಹಾಗಾದರೆ ನಿಜವಾಗಿಯೂ, ಇಲ್ಲಿ ನಡೆದಿದ್ದು ಏನು? 'ನಿಗೂಢ ಬ್ಯಾಗ್' ಇಟ್ಟು ಬಾಂಬ್ ಬ್ಲಾಸ್ಟ್ ಮಾಡಿದ್ರಾ? ಸ್ಫೋಟ ಸಂಭವಿಸಲು ಕಾರಣ ಏನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಊಟ & ತಿಂಡಿ ಮಾಡುವಾಗಲೇ ಬ್ಲಾಸ್ಟ್!
ಎಲ್ಲವೂ ಸರಿಯಾಗೇ ಇತ್ತು, 'ರಾಮೇಶ್ವರಂ ಕೆಫೆ' ಅಂದ್ರೆ ಸಿಕ್ಕಾಪಟ್ಟೆ ಫೇಮಸ್. ಈ ಕೆಫೆಗೆ ಲಕ್ಷಾಂತರ ಗ್ರಾಹಕರು ಇದ್ದಾರೆ. ಅದರಲ್ಲಿಯು ಬೆಂಗಳೂರಿನ ಟೆಕ್ಕಿಗಳು 'ರಾಮೇಶ್ವರಂ ಕೆಫೆ' ಅಂದ್ರೆ ಸಿಕ್ಕಾಪಟ್ಟೆ ಇಷ್ಟಪಡ್ತಾರೆ. ಹೀಗಿದ್ದಾಗ ಇಂದಿರಾ ನಗರದ 'ರಾಮೇಶ್ವರಂ ಕೆಫೆ'ಯಲ್ಲಿ ಕೂಡ ಇಂದು ಸಿಕ್ಕಾಪಟ್ಟೆ ಕ್ರೌಡ್ ಇತ್ತು. ಆದ್ರೆ ಇದೇ ಸಮಯದಲ್ಲಿ ಆಗಿದ್ದು ಮಾತ್ರ ಘೋರ ದುರಂತ.
ಸಿಸಿ ಕ್ಯಾಮೆರಾದಲ್ಲಿ ಕಂಡಿದ್ದು ಏನು?
ಗ್ರಾಹಕರು ಊಟ, ತಿಂಡಿ ಮಾಡಲು ಈ ಹೋಟೆಲ್ ಒಳಗೆ ಇದ್ದ ಸಮಯದಲ್ಲಿಯೇ ಡೆಡ್ಲಿ ಬ್ಲಾಸ್ಟ್ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಮತ್ತೊಂದು ಕಡೆ ಈ ಸ್ಫೋಟಕ್ಕೆ ಮೊದಲು ಹೋಟೆಲ್‌ನಲ್ಲಿ ಇಟ್ಟಿದ್ದ ನಿಗೂಢ ಬ್ಯಾಗ್ ಈ ಬ್ಲಾಸ್ಟ್‌ಗೆ ಕಾರಣ ಎಂಬ ಆರೋಪ ಕೂಡ, ಇದೀಗ ಕೇಳಿಬಂದಿದೆ. ಪೊಲೀಸರು ಎಲ್ಲಾ ಆಯಾಮದಲ್ಲಿ ಕೂಡ ಈಗ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಹಾಗೇ ಸ್ಫೋಟದ ಸ್ಥಳದ ಸುತ್ತಮುತ್ತ ಭಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಸಿಸಿ ಕ್ಯಾಮೆರಾ ಪರಿಶೀಲನೆ ಕೂಡ ನಡೆಯುತ್ತಿದೆ.
ಸ್ಥಳಕ್ಕೆ ಓಡಿ ಬಂದ FSL ತಂಡ!
ಸುದ್ದಿ ತಿಳಿದ ತಕ್ಷಣ ಎಚ್‌ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿಯ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಬಾಯಿಲರ್ ಸ್ಪೋಟದಿಂದ ಅವಘಢ ಸಂಭವಿಸಿರಬಹುದು ಅಂತಾ ಹೇಳಲಾಗಿತ್ತು, ಆದರೆ ಈಗ ಬೇರೆಯದ್ದೇ ವಿಚಾರ ಹೊರಬರುತ್ತಿದೆ. 'ನಿಗೂಢ ಬ್ಯಾಗ್' ಒಳಗೆ ಇದ್ದ ವಸ್ತು ಈ ಭೀಕರ ಸ್ಫೋಟಕ್ಕೆ ಕಾರಣ ಎಂಬ ಆರೋಪ ಮಾಡಲಾಗುತ್ತಿದೆ. ಹೀಗಾಗಿ ಇದೀಗ ಸ್ಥಳ ಪರಿಶೀಲನೆ ಮಾಡಲು ಎಫ್‌ಎಸ್‌ಎಲ್ (FSL) ತಂಡ ಸ್ಫೋಟ ಸಂಭವಿಸಿರುವ 'ರಾಮೇಶ್ವರಂ ಕೆಫೆ'ಗೆ ಬಂದಿದೆ.

ಏನಿದು 'ನಿಗೂಢ ಬ್ಯಾಗ್' ಕಹಾನಿ?
ಅಂದಹಾಗೆ ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ 'ನಿಗೂಢ ಬ್ಯಾಗ್' ಈ ಘಟನೆಗೆ ಕಾರಣ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ಆ ಬ್ಯಾಗ್ ಯಾರದ್ದು? ಅದನ್ನ ಅಲ್ಲಿ ಯಾರು ಇಟ್ಟರು? ಎಂಬುದಕ್ಕೆ ಇನ್ನು ಸ್ಪಷ್ಟನೆ ಸಿಗುತ್ತಿಲ್ಲ. ಮತ್ತೊಂದು ಕಡೆ ಘಟನೆಯಲ್ಲಿ 6 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ ಇದೀಗ ಇಡೀ ಹೋಟೆಲ್ ಕವರ್ ಮಾಡಿರುವ ಪೊಲೀಸರು, ಸ್ಥಳದಲ್ಲಿ ಬಿದ್ದಿರುವ ಐಡಿ ಕಾರ್ಡ್‌ನ ಪರಿಶೀಲನೆ ಮಾಡುತ್ತಿದ್ದಾರೆ.












Click it and Unblock the Notifications