'ಜೂಮ್ಲಾ ದಾಳಿ' ಎಂದರೇನು? ಈ ದಿನದ ಟ್ರೆಂಡಿಂಗ್ ಹುಡುಕಾಟ
ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯದ ಬಗ್ಗೆ ಬಿಸಿಬಿಸಿ ಚರ್ಚೆಗೆ ಹೊಸ ತಿರುವು ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಅಪ್ಪುಗೆ, ಕಣ್ ಮಿಟುಕಿನಿಂದ ಎಲ್ಲರ ಗಮನ ಸೆಳೆದರು.
ಇದಲ್ಲದೆ, ರಾಹುಲ್ ಗಾಂಧಿ ಅವರು ಇಂದು ತಮ್ಮ ಭಾಷಣದಲ್ಲಿ ಮತ್ತೊಮ್ಮೆ 'ಜೂಮ್ಲಾ'(Jhumla) ಪದವನ್ನು ಹೆಚ್ಚು ಬಳಕೆ ಮಾಡಿದರು. ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಮೋದಿ ಸರ್ಕಾರ, ಜನ ಸಾಮಾನ್ಯರ ವಿರೋಧಿಯಾಗಿದೆ ಎಂದರು.
ಟಿಡಿಪಿ ಸಂಸದ ಜಯದೇವ ಗಲ್ಲಾ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ. 21ನೇ ಶತಮಾನದ ಸಂತ್ರಸ್ತರು ನೀವು. ಸರ್ಕಾರದ ಜೂಮ್ಲಾ ದಾಳಿಗೆ ದಲಿತರು, ರೈತರು ಹಾಗೂ ನಾವು ಕೂಡಾ ಒಳಗಾಗಿದ್ದೇವೆ ಎಂದರು.

ಜೂಮ್ಲಾ ಎಂಬುದು ಉರ್ದು/ಅರೇಬಿಕ್ ಪದವಾಗಿದ್ದು ಹಿಂದಿಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ನೀಡಿದ ಆಶ್ವಾಸನೆಗಳು ಸುಳ್ಳಾಗಿದ್ದು, ಪ್ರತಿ ನಾಗರೀಕರ ಖಾತೆಗೆ 15 ಲಕ್ಷ ರು ಹಾಕಲಾಗುವುದು ಎಂಬುದು ಜೂಮ್ಲಾ ಎಂದು ಪರಿಗಣಿಸಲಾಗಿದೆ. ಇಂದು ಭಾಷಣದ ವೇಳೆ ಬಳಕೆಯಾದ ಈ ಪದದ ಬಗ್ಗೆ ಕರ್ನಾಟಕ ಬೆಂಗಳೂರಿನ ನೆಟಿಜನ್ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ.

ಶುಕ್ರವಾರ(ಜುಲೈ20) ಮಧ್ಯಾಹ್ನ 1.54 ರ ವೇಳೆಗೆ 100ಕ್ಕೂ ಹೆಚ್ಚು ಇಪ್ರೆಷನ್ ಗಳನ್ನು ಪಡೆದುಕೊಂಡಿತ್ತು.












Click it and Unblock the Notifications