ಪ್ರಧಾನಿ ಮೋದಿ ಬಾಡಿಗಾರ್ಡ್‌ಗಳ ಕೈಲಿರೋ ಕಪ್ಪು ಸೂಟ್‌ಕೇಸ್‌ನಲ್ಲಿ ಏನಿರುತ್ತೆ ಗೊತ್ತಾ?
ಬೆಂಗಳೂರು, ಫೆಬ್ರವರಿ 29: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಕ್ಷೇತ್ರ ರಂಗು ಪಡೆಯುತ್ತಿದೆ. ಈಗಾಗಲೇ ಪಕ್ಷಾಂತರ, ಟಿಕೆಟ್‌ಗಾಗಿ ಲಾಭಿ, ಪಕ್ಷೇತರ ಸ್ಪರ್ಧೆ ಘೋಷಣೆ, ಪಕ್ಷ ಸೇರ್ಪಡೆಯಂತಹ ಕಾರ್ಯಗಳು ವೇಗ ಪಡೆದುಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಚುನಾವಣಾ ಪ್ರಚಾರ ಆರಂಭವಾಗಲಿದೆ.
ಸಾಮಾನ್ಯವಾಗಿ ಚುನಾವಣೆಯ ಸಂದರ್ಭಗಳಲ್ಲಿ ರಾಜಕೀಯ ಗಣ್ಯರು ರ‍್ಯಾಲಿ, ಸಮಾವೇಶಗಳನ್ನು ನಡೆಸುತ್ತಾರೆ. ಅದರಲ್ಲೂ ತಮ್ಮ ಪಕ್ಷ ಬಿಜೆಪಿ ಪರ ಪ್ರಚಾರಕ್ಕೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಣಕ್ಕಿಯುತ್ತಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಧಾನಿ ಮೋದಿ ರ‍್ಯಾಲಿ ನಡೆಸುತ್ತಾರೆ. ಕೇವಲ ರ‍್ಯಾಲಿ ಅಲ್ಲದೇ ಪ್ರಧಾನಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡ ಸಮಯದಲ್ಲಿ ನೀವು ಒಂದು ವಿಚಾರವನ್ನು ಗಮನಿಸಿರಬಹುದು. ಈವರೆಗೂ ಇದನ್ನು ಗಮನಿಸದೇ ಇದ್ದರೆ, ಈ ಬಾರಿ ಲೋಕಸಭಾ ಚುನಾವಣೆಯ ರ‍್ಯಾಲಿ ಸಂದರ್ಭದಲ್ಲಿ ಈ ವಿಚಾರವನ್ನು ಗಮನಿಸಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಮಯದಲ್ಲಿ ಪ್ರಧಾನಿಗಳಿಗೆ ಬಿಗಿಬಂದೋಬಸ್ತ್ ಭದ್ರತೆ ನೀಡಲಾಗುತ್ತದೆ. ವಿಶೇಷ ರಕ್ಷಣಾ ಪಡೆ ಪ್ರಧಾನಿಗಳಿಗೆ ಭಹಳ ಭದ್ರತೆ ನೀಡುತ್ತಾರೆ. ಈ ವೇಳೆ ನೀವು ವಿಶೇಷ ರಕ್ಷಣಾ ಪಡೆಯ ಸಿಬ್ಬಂದಿಯೊಬ್ಬರು ಕಪ್ಪು ಬಣ್ಣದ ಸೂಟ್‌ಕೇಸ್ ಹಿಡಿದಿರುವುದನ್ನು ಕಾಣಬಹುದು. ಪ್ರಧಾನಿಗಳ ಭದ್ರತಾ ಸಿಬ್ಬಂದಿ ಕೈಯಲ್ಲಿ ಒಂದು ಚಿಕ್ಕದಾದ ಕಪ್ಪು ಬಣ್ಣದ ಸೂಟ್‌ಕೇಸ್ ಹಿಡಿದಿರುತ್ತಾರೆ. ಸಾಮಾನ್ಯವಾಗಿ ಈ ಸೂಟ್‌ಕೇಸ್ ಹಿಡಿದಿರುವ ವ್ಯಕ್ತಿ ಪ್ರಧಾನಿಗಳ ಸಮೀಪದಲ್ಲೇ ಇರುತ್ತಾರೆ ಯಾಕೆ ಗೊತ್ತಾ..? ಹಾಗಾದರೆ ಕಪ್ಪು ಬಣ್ಣದ ಸೂಟ್‌ಕೇಸ್‌ನಲ್ಲಿ ಏನಿರುತ್ತದೆ..? ಈ ಬಗ್ಗೆ ವಿವರ ಇಲ್ಲಿದೆ.
ಪ್ರಧಾನಿ ವಿಶೇಷ ರಕ್ಷಣಾ ಪಡೆಯ ಸಿಬ್ಬಂದಿ ಹಿಡಿದಿರುವ ಸೂಟ್‌ಕೇಸ್‌ನಲ್ಲಿ ದೇಶವನ್ನೇ ಕಂಟ್ರೋಲ್ ಮಾಡುವ ವ್ಯವಸ್ಥೆ ಇರುತ್ತದೆ. ಇದರಲ್ಲಿ ನ್ಯೂಕ್ಲಿಯರ್ ಬಟನ್, ಸ್ಟೇಟ್ ಕಂಟ್ರೋಲ್ ಬಟನ್, ಎಮರ್ಜೆನ್ಸಿ ಬಟನ್, ಗನ್, ಆಧುನಿಕ ಶಸ್ತ್ರಾಸ್ತ್ರಗಳು, ಪ್ರಧಾನಿಗೆ ಸಂಬಂಧಿಸಿದ ಕ್ಯಾಮರಾ ಅಥವಾ ಲಕ್ಷಾಂತರ ರೂಪಾಯಿ ಇರಬಹುದು ಎಂದು ಊಹಿಸುತ್ತಾರೆ. ಆದರೆ ಇದ್ಯಾವುದೂ ಸತ್ಯವಲ್ಲ. ಹಾಗಾದರೆ ಕಪ್ಪು ಬಣ್ಣದ ಸೂಟ್‌ಕೇಸ್‌ನಲ್ಲಿ ಏನಿರುತ್ತದೆ..? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಾಮಾನ್ಯವಾಗಿ ವಿಶೇಷ ರಕ್ಷಣಾ ಪಡೆ ಸಿಬ್ಬಂದಿ ಕಪ್ಪು ಕನ್ನಡಕ ಧರಿಸುವುದರ ಜೊತೆ ಸಂಪೂರ್ಣ ಕಪ್ಪು ಉಡುಪು ಧರಿಸುತ್ತಾರೆ. ಜೊತೆಗೆ ಕಪ್ಪು ಬ್ರೀಫ್ಕೇಸ್‌ಗಳನ್ನು ಸಹ ಜೊತೆಯಲ್ಲಿ ಹೊಂದಿರುತ್ತಾರೆ. ಈ ಸೂಟ್‌ಕೇಸ್ ಪ್ರಧಾನಿ ಸೇರಿದಂತೆ ವಿಐಪಿಗಳಿಗಾಗಿ ವಿನ್ಯಾಸಗೊಳಿಸಲಾದ ಮೊಬೈಲ್, ಬುಲೆಟ್ ಪ್ರೂಫ್ ಶೀಲ್ಡ್ ಆಗಿ ಕಾರ್ಯನಿರ್ವಹಿಸುತ್ತದೆ.
ಇದು ಎನ್‌ಐಜೆ ಹಂತ 3 ರಲ್ಲಿ ಬ್ಯಾಲಿಸ್ಟಿಕ್ ರಕ್ಷಣೆಯನ್ನು ಒದಗಿಸುವ ಅಗತ್ಯವಿದ್ದಾಗ ತೆರೆದುಕೊಳ್ಳುವಂತೆ ರಚಿಸಲಾಗಿದೆ. ಈ ಶೀಲ್ಡ್ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ಕೆಳಕ್ಕೆ ಎಳೆದಾಗ, ಇದು ರಕ್ಷಣಾತ್ಮಕ ಗೋಡೆಯಂತೆ ತೆರೆದುಕೊಳ್ಳುತ್ತದೆ. ಒಬ್ಬ ವ್ಯಕ್ತಿಗೆ 360 ಡಿಗ್ರಿಯಲ್ಲಿ ರಕ್ಷಣೆ ನೀಡುವಂತೆ ಇದನ್ನು ರಚಿಸಲಾಗಿರುತ್ತದೆ. ಒಂದು ವೇಳೆ ಆಘಾಂತುಕರಿಂದ ಏನಾದರೂ ಅವಘಡ ಸಂಭವಿಸಿದರೆ ಈ ಚಿಕ್ಕ ವಸ್ತುವಿನಿಂದ ದೇಶದ ಗಣ್ಯರನ್ನು ರಕ್ಷಿಸಲು ನೆರವಾಗುವಂತೆ ಬ್ರೀಫ್ಕೇಸ್‌ಗಳನ್ನು ರಚಿಸಲಾಗಿದೆ.
ಇನ್ನು ವಿಶೇಷ ರಕ್ಷಣಾ ಪಡೆಯು ದೇಶದ ಗಣ್ಯರ ರಕ್ಷಣೆಯ ಜೊತೆಗೆ ದೇಶಕ್ಕೆ ಭೇಟಿ ನೀಡುವ ಅಂತಾರಾಷ್ಟ್ರೀಯ ಅತಿಥಿಗಳ ಭದ್ರತೆಯನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಸಹ ಹೊಂದಿದೆ. ಎಸ್‌ಪಿಜಿ ಕಮಾಂಡರ್‌ಗಳನ್ನು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ನೇಮಿಸುತ್ತದೆ. ಇದು ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.












Click it and Unblock the Notifications