ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌; ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸ್ಥಿತಿಗತಿ ಏನು?

|
Google Oneindia Kannada News

ಹೈದರಾಬಾದ್‌, ಅಕ್ಟೋಬರ್‌ 31: ಹೈದರಾಬಾದ್‌ನಿಂದ ದೇಶದ ಇತರ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೆಮಿ ಹೈಸ್ಪೀಡ್ ರೈಲು ಸಾಕಷ್ಟು ಸಮಯದಿಂದ ತೆಲಂಗಾಣದ ಬೇಡಿಕೆಗಳ ಪಟ್ಟಿಯಲ್ಲಿದ್ದರೂ ಯೋಜನೆ ಇನ್ನೂ ಕಾಗದದಲ್ಲಿಯೇ ಇದೆ.

ಹೈದರಾಬಾದ್‌ನಿಂದ ಬೆಂಗಳೂರು ಅಥವಾ ಮುಂಬೈಗೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲಿನ ಕುರಿತು ಚರ್ಚೆ ನಡೆದಿದ್ದರೂ ಸದ್ಯಕ್ಕೆ ಅದು ಚಾಲನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಮಧ್ಯೆ ತೆಲಂಗಾಣ ಹೊರತುಪಡಿಸಿ ಕೇಂದ್ರ ಸರ್ಕಾರಕ್ಕೆ ಹಲವಾರು ಇತರ ಯೋಜನೆಗಳನ್ನು ವಿನಂತಿಸಿದ ಇತರ ರಾಜ್ಯಗಳು, ವಿಶೇಷವಾಗಿ ಚುನಾವಣೆಗೆ ಒಳಪಡುವ ರಾಜ್ಯಗಳು ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪಡೆಯುತ್ತಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಪಘಾತ- ಗುಜರಾತ್‌ ನಿಲ್ದಾಣದ ಬಳಿ ಹಸುವಿಗೆ ರೈಲು ಡಿಕ್ಕಿವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಪಘಾತ- ಗುಜರಾತ್‌ ನಿಲ್ದಾಣದ ಬಳಿ ಹಸುವಿಗೆ ರೈಲು ಡಿಕ್ಕಿ

ವಂದೇ ಭಾರತ್ ಎಕ್ಸ್‌ಪ್ರೆಸ್ ಗರಿಷ್ಠ 180 ಕಿ. ಮೀ. ವೇಗದಲ್ಲಿ ಚಲಿಸಲು ವಿನ್ಯಾಸಗೊಳಿಸಲಾದ ಸೆಮಿ ಹೈ-ಸ್ಪೀಡ್ ರೈಲಾಗಿದೆ. ನವೆಂಬರ್ 10 ರಂದು ಚೆನ್ನೈ- ಬೆಂಗಳೂರು- ಮೈಸೂರು ಮಾರ್ಗದಲ್ಲಿ ದಕ್ಷಿಣ ಭಾರತಕ್ಕೆ ಮೊದಲ ರೈಲಾಗಿ ಚಾಲನೆ ಸಿಗಲಿದೆ. ತೆಲಂಗಾಣ ಸರ್ಕಾರವು ಕೇಂದ್ರಕ್ಕೆ ಪದೇ ಪದೇ ಮನವಿ ಮಾಡಿದ ಹೊರತಾಗಿಯೂ ಕರ್ನಾಟಕಕ್ಕೆ ಮಾತ್ರ ರೈಲು ಸಿಕ್ಕಿದೆ.

ಹೈದರಾಬಾದ್‌ಗೆ ಒಂದು ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಮಂಜೂರು ಮಾಡುವಂತೆ ತೆಲಂಗಾಣ ಸರ್ಕಾರ ಭಾರತೀಯ ರೈಲ್ವೆಗೆ ಹಲವಾರು ಮನವಿಗಳನ್ನು ಮಾಡಿತ್ತು. ನಲ್ಗೊಂಡ ಸಂಸದ ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಹೈದರಾಬಾದ್-ವಿಜಯವಾಡ ಮಾರ್ಗದಲ್ಲಿ ಬುಲೆಟ್ ರೈಲು ಮಂಜೂರು ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು. ಆದರೆ ಒಂದೇ ಒಂದು ಮನವಿಯನ್ನು ಬಿಜೆಪಿ ಸರ್ಕಾರ ಪರಿಗಣಿಸಿಲ್ಲ.

ನ. 11ಕ್ಕೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪಿಎಂ ಮೋದಿ ಚಾಲನೆನ. 11ಕ್ಕೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪಿಎಂ ಮೋದಿ ಚಾಲನೆ

 ನ್ಯಾಷನಲ್ ಟೆಂಡರ್‌ಗೆ ಅನುಮೋದನೆ ಇಲ್ಲ

ನ್ಯಾಷನಲ್ ಟೆಂಡರ್‌ಗೆ ಅನುಮೋದನೆ ಇಲ್ಲ

ರಾಷ್ಟ್ರೀಯ ರೈಲ್ವೆ ಯೋಜನೆ (ಎನ್‌ಆರ್‌ಪಿ) ಪ್ರಕಾರ ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಕಾರಿಡಾರ್ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇತ್ತು. ಇದರ ಹೊರತಾಗಿ ಮುಂಬೈ-ಪುಣೆ-ಹೈದರಾಬಾದ್ ವಂದೇ ಭಾರತ್‌ ರೈಲು ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಟೆಂಡರ್ ಅನ್ನು ಪಡೆದಿದೆ ಎಂದು ವರದಿಯಾಗಿದೆ.

 ಹೈದರಾಬಾದ್‌ನಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಭರವಸೆ

ಹೈದರಾಬಾದ್‌ನಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಭರವಸೆ

ಆದರೆ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ. ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಇತ್ತೀಚೆಗೆ ಅದೇ ಹಳೆಯ ಕಥೆಯನ್ನು ಪುನರುಚ್ಚರಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೈದರಾಬಾದ್‌ನಿಂದ ತಿರುಪತಿಗೆ ಅಥವಾ ಹೈದರಾಬಾದ್‌ನಿಂದ ವಿಜಯವಾಡದ ಮೂಲಕ ವಿಶಾಖಪಟ್ಟಣಕ್ಕೆ ಹೊಚ್ಚ ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ.

 ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಕ್ಕೆ ಕೊಡುಗೆ

ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಕ್ಕೆ ಕೊಡುಗೆ

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಇದು ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದು, ಒಟ್ಟು 483 ಕಿ.ಮೀ ಕ್ರಮಿಸಲಿದೆ. ಇಲ್ಲಿರುವ ಮುಖ್ಯಾಂಶ ಏನೆಂದರೆ ಮೂರು ಮತ್ತು ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಇತ್ತೀಚೆಗೆ ಚುನಾವಣೆಗೆ ಒಳಪಟ್ಟಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಪ್ರಾರಂಭಿಸಲಾಯಿತು. ಅದೇ ರೀತಿ ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ಇದೆ.

 ತಾಂತ್ರಿಕ ದೋಷಗಳ ಪರಿಣಾಮ

ತಾಂತ್ರಿಕ ದೋಷಗಳ ಪರಿಣಾಮ

ವಂದೇ ಭಾರತ್ ರೈಲುಗಳು ಕವಾಚ್ ಎಂಬ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಲಾಗಿದ್ದರೂ, ಇಲ್ಲಿಯವರೆಗೆ ಪ್ರಾರಂಭಿಸಲಾದವುಗಳು ಎಲ್ಲಾ ದೋಷದ ಕಾರಣಗಳಿಗಾಗಿ ಸುದ್ದಿಯಲ್ಲಿವೆ. ಮೊದಲನೆಯದಾಗಿ, ನವದೆಹಲಿ - ವಾರಣಾಸಿ ಸೆಮಿ-ಹೈ-ಸ್ಪೀಡ್ ರೈಲು ತಾಂತ್ರಿಕ ದೋಷಗಳ ಪರಿಣಾಮವಾಗಿ ವಿಳಂಬವಾಯಿತು. ರೈಲ್ವೆ ಅಧಿಕಾರಿಗಳು ಐದು ಗಂಟೆಗಳ ಕಾಲ ಅಡಚಣೆಗಳನ್ನು ಸರಿಪಡಿಸಲು ಪ್ರಯತ್ನಿಸಿದರೂ ಅವರು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಪ್ರಯಾಣ ಅವಕಾಶ ಕಲ್ಪಿಸಲಾಯಿತು. ಇದಲ್ಲದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಜಾನುವಾರುಗಳಿಗೆ ಡಿಕ್ಕಿ ಹೊಡೆದು ಹಾನಿಗೊಳಗಾದ ಹಲವಾರು ನಿದರ್ಶನಗಳಿವೆ.

English summary
The Vande Bharat Express semi-high speed train connecting Hyderabad to other major cities of the country has been on Telangana's demand list for quite some time, but the project is still on paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X