
ಜಮ್ಮ ಮತ್ತು ಕಾಶ್ಮೀರದ ಜನರಿಗೆ ಅಮಿತ್ ಶಾ ಕೊಟ್ಟ ಸಂದೇಶವೇನು?
ಶ್ರೀನಗರ, ಅಕ್ಟೋಬರ್ 6: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಾತಿ, ಬಣ್ಣ, ಮತ ಅಥವಾ ಧರ್ಮವನ್ನು ಲೆಕ್ಕಿಸದೆ "ಸಬ್ ಕಾ ವಿಕಾಸ್, ಸಬ್ ಕಾ ಕಲ್ಯಾಣ್" ಗಾಗಿ ನಿಂತಿದೆ ಎಂಬ ಸ್ಪಷ್ಟ ಸಂದೇಶದೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ 3 ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ.
ಜಮ್ಮುವಿನ ಶ್ರೀ ಮಾತಾ ವೈಷ್ಣೋ ದೇವಿ ದೇಗುಲ, ಶ್ರೀನಗರದ ಚಟ್ಟಿಪದ್‌ಶೈ ಗುರುದ್ವಾರಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಅಜಾನ್ (ನಮಾಜ್‌ಗೆ ಕರೆ) ಕೇಳಿದ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿದರು. ಅಲ್ಲದೆ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ತೆಗೆದುಹಾಕಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಭಾರತದ ಬಹುತ್ವ ಮತ್ತು ಸಂಯೋಜಿತ ಸಂಸ್ಕೃತಿಯನ್ನು ನಂಬುತ್ತದೆ ಎಂದು ಹೇಳಿದರು.
ಭಯೋತ್ಪಾದಕರಿಂದ ಹತರಾದ ಪೊಲೀಸರ ಕುಟುಂಬಕ್ಕೆ ನೇಮಕಾತಿ ಪತ್ರ ನೀಡಿದ ಅಮಿತ್ ಶಾ
ಕೇಂದ್ರ ಗೃಹ ಸಚಿವರು ರಾಜೌರಿಯಲ್ಲಿ ಗುಜ್ಜಾರ್‌ಗಳು, ಬಕರ್ವಾಲ್‌ಗಳು ಮತ್ತು ಪಹಾರಿಗಳಿಗೆ ತಾರತಮ್ಯದ ಯುಗ ಕೊನೆಗೊಂಡಿದೆ. ಅವರು ಶೀಘ್ರದಲ್ಲೇ ಉದ್ಯೋಗಗಳು ಮತ್ತು ಇತರ ಕ್ಷೇತ್ರಗಳಲ್ಲಿ ಅವರ ಪಾಲನ್ನು ಪಡೆಯುತ್ತಾರೆ ಎಂದು ಭರವಸೆ ನೀಡಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ದೇಶದ ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಪರಿಗಣಿಸುತ್ತದೆ ಎಂಬ ಸಂದೇಶವನ್ನು ಕಳುಹಿಸಲು ಅವರು ಶ್ರೀನಗರದಲ್ಲಿ ಸಿಖ್ಖರನ್ನು ಮತ್ತು ಜಮ್ಮುವಿನ ರಜಪೂತ ಸಭಾ ಸದಸ್ಯರನ್ನು ಭೇಟಿ ಮಾಡಿದರು. ಆಜಾನ್ ಕೇಳಿದ ನಂತರ ಭಾಷಣ ನಿಲ್ಲಿಸುವ ಅವರ ಉದ್ದೇಶದ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಸೃಷ್ಟಿಸಿದ ತಪ್ಪು ಕಲ್ಪನೆಗಳು ಕೇವಲ ಮಿಥ್ಯೆಯಲ್ಲದೆ ಬೇರೇನೂ ಅಲ್ಲ ಎಂಬುದಾಗಿದೆ.
ಅಮಿತ್ ಶಾ ಹುತಾತ್ಮ ಪೊಲೀಸ್ ಮುದಾಸಿರ್ ಶೇಖ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಅವರು ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರಿಗೆ ಎಲ್ಲಾ ರೀತಿಯ ಬೆಂಬಲ ಮತ್ತು ಸಹಾಯವನ್ನು ನೀಡಲಾಗುವುದು ಮತ್ತು ಇಡೀ ರಾಷ್ಟ್ರವು ಅವರ ಜೊತೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು. ಈ ವರ್ಷದ ಮೇನಲ್ಲಿ ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂವರು ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಮುದಾಸಿರ್ ತನ್ನ ಪ್ರಾಣವನ್ನು ಅರ್ಪಿಸಿದ್ದರು.
ಗುಜ್ಜರ್, ಬಕರ್ವಾಲ್, ಪಹಾರಿ ಸಮುದಾಯಗಳಿಗೆ ಶೀಘ್ರವೇ ಮೀಸಲಾತಿ: ಅಮಿತ್ ಶಾ

ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ
ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಪುನರುಚ್ಚರಿಸುವ ಮೂಲಕ ಅಮಿತ್ ತಮ್ಮ ಭೇಟಿಗೆ ಅಂತ್ಯ ಹಾಡಿದ್ದಾರೆ. ಹಿಮಾಲಯ ಪ್ರದೇಶದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಭದ್ರತಾ ಪಡೆಗಳಿಗೆ ಅವರು ನಿರ್ದೇಶನ ನೀಡಿದ್ದಾರೆ. ಮತದಾರರ ಪಟ್ಟಿ ಅಂತಿಮಗೊಂಡ ತಕ್ಷಣ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಸಲಾಗುವುದು ಎಂದು ಸಹ ಅವರು ಘೋಷಿಸಿದ್ದಾರೆ.

ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ
ಕೇಂದ್ರವು ಜಮ್ಮು ಕಾಶ್ಮೀರದ ಜನರೊಂದಿಗೆ ಮಾತ್ರ ಮಾತನಾಡುತ್ತದೆಯೇ ಹೊರತು ಬೇರೆಯವರೊಂದಿಗೆ ಮಾತನಾಡುವುದಿಲ್ಲ. ದಾರಿತಪ್ಪಿದ ಸ್ಥಳೀಯ ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರುವಂತೆ ಮತ್ತು ಸಾವಿನ ಬದಲು ಜೀವನವನ್ನು ಆರಿಸಿಕೊಳ್ಳುವಂತೆ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದರು.

ಜಮ್ಮು ಪ್ರದೇಶದಲ್ಲಿ 1900 ಕೋಟಿ ರು. ಯೋಜನೆಗೆ ಚಾಲನೆ
ಗೃಹ ಸಚಿವರು ಕಾಶ್ಮೀರದಲ್ಲಿ 2000 ಕೋಟಿ ಮತ್ತು ಜಮ್ಮು ಪ್ರದೇಶದಲ್ಲಿ 1900 ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡಿದರು. ಜಮ್ಮು ಮತ್ತು ಕಾಶ್ಮೀರವು ಕೇಂದ್ರ ಸರ್ಕಾರಕ್ಕೆ ಆದ್ಯತೆಯಾಗಿದೆ. 70 ವರ್ಷಗಳ ಕಾಲ ಜಮ್ಮು ಕಾಶ್ಮೀರವನ್ನು ಆಳಿದ ಮೂರು ರಾಜಕೀಯ ಪಕ್ಷಗಳ ನಾಯಕರು ಇನ್ನು ಮುಂದೆ ಕೇಂದ್ರಕ್ಕೆ ಷರತ್ತುಗಳನ್ನು ನೀಡಲು ಸಾಧ್ಯವಿಲ್ಲ. ಸಮಯ ಬದಲಾದಂತೆ ಅವರು ಜಮ್ಮು ಕಾಶ್ಮೀರವನ್ನು ವಂಚಿಸಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಮೋದಿಯವರ ನಾಯಕತ್ವದಲ್ಲಿ ಜೆಕೆ ಪ್ರವರ್ಧಮಾನಕ್ಕೆ
ಕಾಶ್ಮೀರವನ್ನು ಭಯೋತ್ಪಾದಕ ತಾಣ ಎಂಬ ಹೆಸರಿನ ಬದಲು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿರುವುದು ಪ್ರಧಾನಿ ಮೋದಿ ನೇತೃತ್ವದ ಆಡಳಿತದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಜಮ್ಮು ಮತ್ತು ಕಾಶ್ಮೀರವು ಪ್ರವರ್ಧಮಾನಕ್ಕೆ ಬರಲಿದೆ. ಕೇಂದ್ರ ಗೃಹ ಸಚಿವರು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದು, ಸರ್ಕಾರವು ಅವರ ಅಗತ್ಯಗಳನ್ನು ಅರಿತು ಅವರ ಎಲ್ಲಾ ಪ್ರಯತ್ನಗಳಲ್ಲಿ ಅವರ ಬೆಂಬಲಕ್ಕೆ ನಿಂತಿದೆ ಎಂದು ಜನರಿಗೆ ಭರವಸೆ ನೀಡಿದರು.