2ಜಿ ಸ್ಪೆಕ್ಟ್ರಂ, ಏನಿದು ಹಗರಣ? ಇಲ್ಲಿದೆ ಟೈಮ್ ಲೈನ್

Posted By:
Subscribe to Oneindia Kannada

ಯುಪಿಎ ಸರ್ಕಾರ 2014 ರಲ್ಲಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಮುಖ್ಯ ಕಾರಣಗಳನ್ನು ಪಟ್ಟಿ ಮಾಡುವುದಕ್ಕೆ ಹೋದರೆ, ಅದರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು 2 ಜಿ ತರಂಗಗುಚ್ಛ ಹಗರಣ. ದೆಹಲಿಯ ವಿಶೇಷ ನ್ಯಾಯಾಲಯ ಇಂದು(ಡಿ.21) 2ಜಿ ಸ್ಪೆಕ್ಟ್ರಂ ಹಗರಣದ ತೀರ್ಪನ್ನು ಹೊರಹಾಕಲಿದ್ದು, ಘಟಾನುಘಟಿ ನಾಯಕರುಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ!

2008 ರಲ್ಲಿ ಬೆಳಕಿಗೆ ಬಂದ ಈ ಹಗರಣ ಸರ್ಕಾರದ ಭೊಕ್ಕಸಕ್ಕೆ ಸುಮಾರು 1.76 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವನ್ನುಂಟು ಮಾಡಿದೆ. ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಮಗಳು, ಸಂಸದೆ ಕನ್ನಿಮೋಳಿ ಅವರು ಆರೋಪಿಗಳ ಸ್ಥಾನದಲ್ಲಿರುವುದು ವಿಶೇಷ.

2ಜಿ ಸ್ಪೆಕ್ಟ್ರಂ ಹಗರಣ: ವಿಶೇಷ ಕೋರ್ಟ್ ನಿಂದ ಇಂದು ತೀರ್ಪು

ಅಷ್ಟಕ್ಕೂ ಏನಿದು 2ಜಿ ಸ್ಪೆಕ್ಟ್ರಂ ಹಗರಣ? ಮತ್ತು ಇದರ ಟೈಮ್ ಲೈನ್ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಏನಿದು 2ಜಿ ಹಗರಣ?

ಏನಿದು 2ಜಿ ಹಗರಣ?

2ಜಿ (ಸೆಕೆಂಡ್ ಜನರೇಶನ್ ದೂರಸಂಪರ್ಕ ಸೇವೆ) ಮೊಬೈಲ್ ಸೇವೆಗೆ 2008 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಸರ್ಕಾರ 9 ದೂರಸಂಪರ್ಕ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಪ್ರಕರಣ ಇದು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕಾದ ನಷ್ಟ, ಒಂದೆರಡಲ್ಲ,1,76,000 ಕೋಟಿ ರೂಪಾಯಿ. ಆಗಿನ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರ ಮೇಲೆ ಆರೋಪ ಕೇಳಿಬಂದಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರತಿಪಕ್ಷಗಳು, ಕಾಂಗ್ರೆಸ್ ಅನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಪ್ರಕರಣದಲ್ಲಿ ಹಲವರ ತಲೆದಂಡವೂ ಆಯ್ತು... ಈ ಕುರಿತ ಸವಿವರ ಟೈಮ್ ಲೈನ್ ಇಲ್ಲಿದೆ.

ದೂರ ಸಂಪರ್ಕ ಸಚಿವರಾಗಿ ಎ.ರಾಜಾ

ದೂರ ಸಂಪರ್ಕ ಸಚಿವರಾಗಿ ಎ.ರಾಜಾ

ಮೆ.2007: ದೂರಸಂಪರ್ಕ ಸಚಿವರಾಗಿ ಎ.ರಾಜಾ ಅಧಿಕಾರ ಸ್ವೀಕಾರ
ಆಗಸ್ಟ್ 2007: ಯುಎಎಸ್ ಲೈಸೆನ್ಸ್ ನೊಂದಿಗೆ 2ಜಿ ತರಂಗಾಂತರ ಹಂಚಿಕೆ ಪ್ರಕ್ರಿಯೆ ಆರಂಭಿಸಿದ ದೂರಸಂಪರ್ಕ ಇಲಾಖೆ ಸೆಪ್ಟೆಂಬರ್ 25, 2007: ಅಕ್ಟೋಬರ್ 1 ರೊಳಗೆ ಲೈಸೆನ್ಸ್ ಗಾಗಿ ಅರ್ಜಿ ಅಲ್ಲಿಸುವಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ದೂರಸಂಪರ್ಕ ಸಚಿವಾಲಯ

ಅಕ್ಟೋಬರ್ 1, 2007: 46 ಸಂಸ್ಥೆಗಳ 575 ಅರ್ಜಿ ಸ್ವೀಕಾರ

ಶುರುವಾಯ್ತು ಅಕ್ರಮದ ವಾಸನೆ..!

ಶುರುವಾಯ್ತು ಅಕ್ರಮದ ವಾಸನೆ..!

ನವೆಂಬರ್ 2, 2007: ಸರಿಯಾದ ರೀತಿಯಲ್ಲಿ ಲೈಸೆನ್ಸ್ ವಿತರಿಸುವಂತೆ ಮತ್ತು ಅದಕ್ಕೆ ಸೂಕ್ತ ಶುಲ್ಕ ಪಡೆವಂತೆ ಎ.ರಾಜಾ ಅವರಿಗೆ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರಿಂದ ಪತ್ರ. ಪ್ರಧಾನಿಯವರ ಕೆಲವು ಶಿಫಾರಸ್ಸುಗಳನ್ನು ತಿರಸ್ಕರಿಸಿ ಎ.ರಾಜ ಪ್ರತಿಪತ್ರ.

ಜನವರಿ 10, 2008: ಯು ಮೊದಲು ಬರುತ್ತಾರೋ ಅವರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಿದ ಟೆಲಿಕಾಂ ಸಚಿವಾಲಯ.

ಮೇ 4, 2009: 2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಟೆಲಿಕಾಂ ವಾಚ್ ಡಾಗ್ ಎನ್ ಜಿಒ ದಿಂದ ಕೇಂದ್ರ ಜಾಗೃತ ಸಮಿತಿ(ಸಿವಿಸಿ)ಗೆ ದೂರು.

ಸಿಬಿಐ ಹದ್ದಿನ ಕಣ್ಣಿಗೆ ಬಿತ್ತು ಹಗರಣ

ಸಿಬಿಐ ಹದ್ದಿನ ಕಣ್ಣಿಗೆ ಬಿತ್ತು ಹಗರಣ

2009: ಪ್ರಕರಣವನ್ನು ಸಿಬಿಐ ಗೆ ವಹಿಸಿದ ಕೇಂದ್ರ ಜಾಗೃತ ಸಮಿತಿ(ಸಿವಿಸಿ)

ಜುಲೈ 1, 2009: ಕೊನೆಯ ದಿನಾಂಕವನ್ನು ಬದಲಾಯಿಸುವುದು ಅಕ್ರಮ ಎಂದು ಘೋಷಿಸಿದ ಏಕಸದಸ್ಯ ಪೀಠದ ದೆಹಲಿಯ ಹೈಕೋರ್ಟ್

ಎಫ್ ಐಆರ್ ದಾಖಲು

ಎಫ್ ಐಆರ್ ದಾಖಲು

ಅಕ್ಟೋಬರ್ 21, 2009: ದೂರಸಪರ್ಕ ಇಲಾಖೆಯ ಅಧಿಕಾರಿಗಳು ಮತ್ತು ಕೆಲವು ಖಾಸಗಿ ಕಂಪೆನಿ, ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ ಸಿಬಿಐ

ಅಕ್ಟೋಬರ್ 22, 2009: ದೂರಸಂಪರ್ಕ ಇಲಾಖೆ ಕಚೇರಿ ಮೇಲೆ ಸಿಬಿಐ ದಾಳಿ

ನೀರಾ ರಾಡಿಯಾ ಕೈವಾಡದ ಶಂಕೆ!

ನೀರಾ ರಾಡಿಯಾ ಕೈವಾಡದ ಶಂಕೆ!

ನವೆಂಬರ್ 16, 2009: 2 ಜಿ ಲಾಬಿಯಲ್ಲಿ ನೀರಾ ರಾಡಿಯಾ ಪಾಲುದಾರಿಕೆಯ ಕುರಿತಂತೆ ಮಾಹಿತಿ ಕಲೆಹಾಕಲು ಆದಾಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನಾಲಯದ ಸಹಕಾರ ಕೋರಿದ ಸಿಬಿಐ

ನವೆಂಬರ್ 20, 2009: ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಎ. ರಾಜಾ ಮತ್ತು ನೀರಾ ರಾಡಿಯಾ ಅವರಿಗೆ ನೇರ ಸಂಪರ್ಕವಿರುವ ವಿಷಯ ಬಯಲು

ಮಾರ್ಚ್ 31, 2010: 2 ಜಿ ಸ್ಪೆಕ್ಟ್ರಂ ಲೈಸೆನ್ಸ್ ಹಂಚಿಕೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ವರದಿ ನೀಡಿದ ಸಿಎಜಿ(Comptroller and Auditor General).

ಜಾರಿ ನಿರ್ದೇಶನಾಲಯದಿಂದ ಮಾಹಿತಿ

ಜಾರಿ ನಿರ್ದೇಶನಾಲಯದಿಂದ ಮಾಹಿತಿ

ಮೇ 6, 2010: ಎ.ರಾಜಾ ಮತ್ತು ನೀರಾ ರಾಡಿಯಾ ನಡುವಿನ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕರ ಮುಂದಿಟ್ಟ ಮಾಧ್ಯಮಗಳು

ಸೆಪ್ಟೆಂಬರ್ 13, 2010: ಮೂರು ವ್ಯಕ್ತಿಗಳು ಎ.ರಾಜಾ ವಿರುದ್ಧ ಸುಪ್ರೀಕೋರ್ಟ್ ನಲ್ಲಿ ಹೂಡಿದ್ದ ಅರ್ಜಿಗೆ ಹತ್ತು ದಿನಗಳೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ನಿಂದ ಆದೇಶ.

ಸೆಪ್ಟೆಂಬರ್ 27, 20190: ಆರೋಪಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಈ ಹಗರಣದಲ್ಲಿ ಅವರ ಪಾತ್ರವಿದ್ದೀತು ಎಂದು ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿದ ಜಾರಿ ನಿರ್ದೇಶನಾಲಯ.

ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ನಷ್ಟ

ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ನಷ್ಟ

ಅಕ್ಟೋಬರ್ 2010: ಸಿಎಜಿ ವರದಿಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದ ಸುಪ್ರೀಂ ಕೋರ್ಟ್

ನವೆಂಬರ್, 10. 2010: ಸರ್ಕಾರಕ್ಕೆ 1.76 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ವರದಿ ನೀಡಿದ ಸಿಎಜಿ.

ನವೆಂಬರ್ 14-15, 2010: ದೂರಸಂಪರ್ಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎ.ರಾಜಾ. ಕಪಿಲ್ ಸಿಬಲ್ ಅವರಿಗೆ ದೂರಸಂಪರ್ಕ ಸಚಿವ ಸ್ಥಾನ.

ಫೆಬ್ರವರಿ 17-18, 2011: ಎ.ರಾಜಾ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ಸುಪ್ರೀಂ ಕೋರ್ಟ್ ಆದೇಶ.
ಸುಪ್ರೀಂ ಕೊರ್ಟ್ ತಿಹಾರ್ ಜೈಲಿಗೆ ಎ.ರಾಜಾ

ಚಾರ್ಜ್ ಶೀಟ್ ಸಲ್ಲಿಕೆ

ಚಾರ್ಜ್ ಶೀಟ್ ಸಲ್ಲಿಕೆ

ಮಾರ್ಚ್ 29, 2011: ಏಪ್ರಿಲ್ 2 ರೊಳಗೆ ಚಾರ್ಜ್ ಶೀಟ್ ಸಲ್ಲಿಸುವಂತೆ ಸಿಬಿಐ ಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್. ಆಸಿಫ್ ಬಾಲ್ವಾ ಮತ್ತು ರಾಜೀವ್ ಅಗರವಾಲ್ ಎಂಬ ಆರೋಪಿಗಳ ಬಂಧನ.

ಏಪ್ರಿಲ್ 2, 2011: ಮೊದಲ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ
ಏಪ್ರಿಲ್ 25, 2011: ಎರಡನೇ ಚಾರ್ಜ್ ಶೀಟ್ ಸಲ್ಲಿಕೆ. ಈ ಚಾರ್ಜ್ ಶೀಟ್ ನಲ್ಲಿ ಡಿಎಂಕೆ ಮುಖಂಡ ಕರುಣಾನಿಧಿ ಅವರ ಮಗಳು ಕನ್ನಿಮೋಳಿ ಹೆಸರು ಉಲ್ಲೇಖ.

ನವೆಂಬರ್ 11, 2011: ವಿಚಾರಣೆ ಆರಂಭ

ನವೆಂಬರ್ 28, 2011: ಕನ್ನಿಮೋಳಿ ಸೇರಿದಂತೆ ಐವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯದಿಂದ ಜಾಮೀನು.

ಡಿ.12, 2011: ಸಿಬಿಐ ನಿಂದ ಮೂರನೇ ಚಾರ್ಜ್ ಶೀಟ್ ಬಿಡುಗಡೆ

ಚಿದಂಬರಂ ಕೈವಾಡ?

ಚಿದಂಬರಂ ಕೈವಾಡ?

ಫೆಬ್ರವರಿ, 2011: ಬಿಜೆಪಿ ಮುಖಂಡ(ಆಗಿನ ಜನತಾ ಪಕ್ಷದ) ಸುಬ್ರಮಣಿಯನ್ ಸ್ವಾಮಿ ಅವರಿಂದ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಆಗಿನ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರೂ ಆರೋಪಿ ಎಂದು ಆರೋಪಿಸಿದ್ದರು. ಈ ಕುರಿತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಈ ಹಗರಣದಲ್ಲಿ ಚಿದಂಬರಂ ಪಾತ್ರವನ್ನು ಕೋರ್ಟು ಅಲ್ಲಗಳೆದಿತ್ತು.

ಖುಲಾಸೆಗೊಂಡ ಆರೋಪಿಗಳು

ಖುಲಾಸೆಗೊಂಡ ಆರೋಪಿಗಳು

ನವೆಂಬರ್ 10, 2014: ಅಂತಿಮ ವಿಚಾರಣೆ ಆರಂಭ
ಏಪ್ರಿಲ್ 19, 2017: ವಿಶೇಷ ಕೋರ್ಟ್ ನಿಂದ ವಿಚಾರಣೆ ಅಂತ್ಯ
ಡಿಸೆಂಬರ್ 5, 2017: ಡಿ.21ಕ್ಕೆ 2 ಜಿ ಸ್ಪೆಕ್ಟ್ರಂ ಅಂತಿಮ ತೀರ್ಪು ನೀಡುವುದಾಗಿ ದಿನಾಂಕ ಪ್ರಕಟಿಸಿದ ಕೋರ್ಟು.
ಡಿಸೆಂಬರ್ 21, 2017: ಎಲ್ಲಾ 17 ಆರೋಪಿಗಳನ್ನೂ ಖುಲಾಸೆಗೊಳಿಸಿದ ಕೋರ್ಟು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What is 2G spectrum scam? Here is the timeline. A Delhi special court will announce verdict on 2G spectrum scam case today(Dec 20th) in which former telecom minister A Raja and DMK MP Kanimozhi are among the accused.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ