Lion Death: ಸಿಂಹ ಸತ್ತರೆ ಕಾಡಿನಲ್ಲಾಗುವ ಬದಲಾವಣೆಗಳೇನು? ಕಾಡಿನ ರಾಜನ ಕುಟುಂಬ ಏನಾಗುತ್ತದೆ?
ಕಾಡಿನ ರಾಜ ಯಾರೆಂದು ಯಾರಿಗೆ ತಿಳಿದಿಲ್ಲ ಹೇಳಿ. ಅವನ ಘರ್ಜನೆ ಕಾಡಿನ ಕಿಲೋ ಮೀಟರ್ ಗಟ್ಟಲೆ ಮೊಳಗಿದರೆ, ಜಿಂಕೆ, ಮೊಲ, ಇನ್ನಿತರ ಜೀವಿಗಳಿಗೆ ನಡುಕ ಹುಟ್ಟಿಸುತ್ತದೆ. ನಡಿಗೆಯಲ್ಲೇ ರಾಜ ಗಾಂಭೀರ್ಯವಿರುವ ಸಿಂಹವು ಕಾಡಿನಲ್ಲಿ ತನ್ನದೇ ಆದ ಘನತೆಯಲ್ಲಿ ಬದುಕುತ್ತಿರುತ್ತದೆ. ಅದೇ ಸಿಂಹ ಸತ್ತಾಗ ಏನಾಗುತ್ತದೆ? ಕಾಡಿನ ರಾಜನ ಕುಟುಂಬದಲ್ಲಿ ಏನಾಗುತ್ತದೆ? ರಾಜ ಸಿಂಹ ಸತ್ತಾಗ ಕಾಡಿನ ಇತರ ಪ್ರಾಣಿಗಳು ಏನು ಮಾಡುತ್ತವೆ? ಸಿಂಹದ ಮೃತದೇಹ ಸಿಕ್ಕಾಗ ಅರಣ್ಯಾಧಿಕಾರಿಗಳು ಏನು ಮಾಡುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಗ್ಲೋಬಲ್ ಸಫಾರಿ ಆರ್ಕೈವ್‌ನಲ್ಲಿ ಪ್ರಕಟವಾದ ಜಂಗಲ್ ಸಫಾರಿ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಕಾಡಿನಲ್ಲಿ ಸಿಂಹವು ಸತ್ತಾಗ, ಮನುಷ್ಯರಂತೆ ಅವುಗಳ ಕುಟುಂಬದ ಸದಸ್ಯರೆಲ್ಲರೂ ಒಂಟಿತನ ಕಾಡುತ್ತದೆ. ಗಂಡು ಸಿಂಹ ಸತ್ತಾಗ ಆ ಸಿಂಹದ ಕುಟುಂಬವು ಸಂಪೂರ್ಣವಾಗಿ ಕುಸಿಯುತ್ತದೆ. ಅದರ ಜೊತೆಗಿನ ಇತರ ಸಿಂಹಗಳು ಮಂಕಾಗುತ್ತವೆ.

ಹೆಣ್ಣು ಸಿಂಹ ಸತ್ತಾಗಲೂ ಸಾಮಾನ್ಯವಾಗಿ ಇದೇ ನಡೆಯುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಗಂಡು ಸಿಂಹವು ತನ್ನ ಕುಟುಂಬವನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಇನ್ನು ಗಂಡ ಸಿಂಹಗಳು ಸತ್ತಾಗ ಕಿರಿಯ ಮಗ (ಸಿಂಹದ ಮಗ) ರಾಜನಾಗುತ್ತಾನೆ. ಇಂತಹ ಸಂದರ್ಭದಲ್ಲಿ ಹೆಣ್ಣು ಸಿಂಹವು ಆ ಕುಟುಂಬವನ್ನು ಮುನ್ನಡೆಸುತ್ತದೆ. ಹೀಗೆ ಈ ಕ್ರಮವು ಮುಂದುವರಿಯುತ್ತದೆ.
ಸಿಂಹದ ಸಾವಿನಗೆ ಇತರ ಪ್ರಾಣಿಗಳ ಪ್ರತಿಕ್ರಿಯೆ ಏನು?
ಅಧ್ಯಯನಗಳ ಪ್ರಕಾರ, ಸಿಂಹವು ಸತ್ತಾಗ, ಉಳಿದ ಸಿಂಹಗಳು ಶೋಕಿಸುತ್ತವೆ. ಅವುಗಳು ಮಂಕಾಗುತ್ತವೆ. ತೀರಾ ಹಸಿದರೆ ಮಾತ್ರ ಬೇಟೆಗೆ ತೆರಳುತ್ತವೆ. ಇನ್ನು ಸತ್ತ ಸಿಂಹಗಳ ದೇಹವನ್ನು ನರಿಗಳು, ತೋಳಗಳು ಮತ್ತು ಹೈನಾಗಳು ತಿನ್ನುತ್ತವೆ. ಇದನ್ನು ಬಿಟ್ಟು ಇತರ ಪ್ರಾಣಿಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ವಾಸ್ತವವಾಗಿ ಅವುಗಳಿಗೆ ಕಾಡಿನ ರಾಜ ಸತ್ತಿದ್ದಾನೆ ತಿಳಿದಿರುವುದಿಲ್ಲ.
ಭಾರತದ ಕಾನೂನಿನ ಪ್ರಕಾರ, ಸಿಂಹದ ಅಂತ್ಯಕ್ರಿಯೆಯ ಮೊದಲಿನ ಪ್ರಕ್ರಿಯೇನು?
ಭಾರತದ ಎಲ್ಲಾ ಅರಣ್ಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಇರುವ ಸಿಂಹಗಳ ಸಂಪೂರ್ಣ ದಾಖಲೆಗಳನ್ನು ಅರಣ್ಯ ಇಲಾಖೆ ಹೊಂದಿದೆ. ಕಾಲಕಾಲಕ್ಕೆ ಈ ದಾಖಲೆಯನ್ನು ಸಚಿವಾಲಯಕ್ಕೂ ಕಳುಹಿಸಲಾಗುತ್ತದೆ. ಹೀಗಿರುವಾಗ ಸಿಂಹ ಸೇರಿದಂತೆ ಚಿರತೆ, ಹುಲಿ, ಘೇಂಡಾಮೃಗ, ಆನೆಗಳ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿದ ಕೂಡಲೇ ಸ್ಥಳೀಯ ಅರಣ್ಯ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ತೆರಳುತ್ತದೆ. ಮೊದಲು ಪ್ರಾಣಿಗಳ ಮೃತದೇಹದ ಫೋಟೋಗಳನ್ನು ತೆಗೆದುಕೊಂಡು ಬಳಿಕ ಸ್ಥಳೀಯ ವನ್ಯಜೀವಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗುತ್ತದೆ.

ಬಳಿಕ ವೈದ್ಯರ ಮೇಲ್ವಿಚಾರಣೆಯಲ್ಲಿ ಸಿಂಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಬಳಿಕ ಒಂದು ಪ್ರತಿಯನ್ನು ಸಚಿವಾಲಯಕ್ಕೂ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಅಗತ್ಯವಿದ್ದಾಗ ಅಥವಾ ಸಾವಿಗೆ ನಿಖರ ಕಾರಣ ತಿಳಿಯದಿದ್ದಾಗ ಸಿಂಹದ ಅಂಗಾಂಗಳನ್ನು ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಲಾಗುತ್ತದೆ.
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ದಾಖಲಾದ ಒಟ್ಟು ಸಿಂಹಗಳ ಸಾವಿನ ಸಂಖ್ಯೆ ವಿವರ
ಸೋಮವಾರ ಲೋಕಸಭೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಮಂಡಿಸಿದ ಅಂಕಿ ಅಂಶಗಳ ಪ್ರಕಾರ, 2019 ಮತ್ತು 2023 ರ ನಡುವೆ 555 ಸಿಂಹಗಳು ಸಾವನ್ನಪ್ಪಿವೆ.
| ಕ್ರಮ ಸಂಖ್ಯೆ | ವರ್ಷ | ಸಿಂಹಗಳ ಸಾವಿನ ಸಂಖ್ಯೆ |
| 1 | 2019 | 113 |
| 2 | 2020 | 124 |
| 3 | 2021 | 105 |
| 4 | 2022 | 110 |
| 5 | 2023 | 103 |
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications