ಮೋದಿ, ಯಡಿಯೂರಪ್ಪ ಟ್ವೀಟ್ ಮೇಲೆ ಹದ್ದಿನ ಕಣ್ಣು
ಭೋಪಾಲ್, ಅ.22: ಮುಂಬರುವ ಅಸೆಂಬ್ಲಿ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಭಾರಿ ಭದ್ರತೆ ಹಾಗೂ ಪಾರದರ್ಶಕ ಕ್ರಮಗಳನ್ನು ಚುನಾವಣೆ ಆಯೋಗ ಪ್ರಯೋಗಿಸುತ್ತಿದೆ. ಮೊದಲ ಹಂತದಲ್ಲಿ ಪ್ರಮುಖ ರಾಜಕಾರಣಿಗಳ ಟ್ವಿಟ್ಟರ್, ವೆಬ್ ತಾಣಗಳ ಮೇಲೆ ಆಯೋಗ ಹದ್ದಿನ ಕಣ್ಣಿಡಲಿದೆ.
ದೇಶದ ಆರು ಪ್ರಮುಖ ಪಕ್ಷಗಳು ಹಾಗೂ 18 ಕ್ಕೂ ಅಧಿಕ ರಾಜಕಾರಣಿಗಳ ಟ್ವಿಟ್ಟರ್ ಖಾತೆಗಳ ಮೇಲೆ ನಿಗಾವಹಿಸಲಾಗುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ಐದು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಈ ಹೊಸ ಕ್ರಮಗಳು ಜಾರಿಗೊಳ್ಳಲಿದೆ.
ಶಿವರಾಜ್ ಸಿಂಗ್ ಚೌಹಾಣ್, ಸೋನಿಯಾ ಗಾಂಧಿ, ದಿಗ್ವಿಜಯ್ ಸಿಂಗ್, ಉಮಾ ಭಾರತಿ, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್, ರಾಹುಲ್ ಗಾಂಧಿ, ಎಲ್ ಕೆ ಅಡ್ವಾಣಿ, ಶಶಿ ತರೂರ್, ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಶಹನವಾಜ್ ಹುಸೇನ್, ರಾಜನಾಥ್ ಸಿಂಗ್, ರಾಜೀವ್ ಶುಕ್ಲಾ, ಮುಖ್ತಾರ್ ಅಬ್ಬಾಸ್ ನಖ್ವಿ, ಒಮರ್ ಅಬ್ದುಲ್ಲಾ, ಅಜಯ್ ಮಾಕೇನ್ ಹಾಗೂ ಯಡಿಯೂರಪ್ಪ ಅವರ ಟ್ವೀಟ್ ಖಾತೆಗಳು ಪ್ರತಿ ಕ್ಷಣ ಸ್ಕ್ಯಾನ್ ಆಗಲಿದೆ.

ಇದರ ಜತೆಗೆ ಪ್ರಮುಖ ದಿನಪತ್ರಿಕೆಗಳ ವೆಬ್ ಸೈಟ್ , ಇ ಪೇಪರ್, ರಾಜಕೀಯ ಪಕ್ಷಗಳ ವೆಬ್ ಸೈಟ್ ಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಚೌಹಾಣ್, ಬಿಜೆಪಿ ಸಂಸದರು, ಕಾಂಗ್ರೆಸ್ ಸಂಸದರ ವೆಬ್ ತಾಣಗಳು ಇದರಲ್ಲಿ ಸೇರಿದೆ.
textual information extraction (TIE) ವ್ಯವಸ್ಥೆಯಡಿಯಲ್ಲಿ ಪುಣೆಯ Centre for Development of Advanced Computing (CDAC) ಸಂಸ್ಥೆ ಈ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದೆ.
ಆದರೆ, ಸದ್ಯಕ್ಕೆ ರಾಜಕೀಯ ಪಕ್ಷ ಹಾಗೂ ಮುಖಂಡರ ಫೇಸ್ ಬುಕ್ ಖಾತೆಗಳು ಸೇಫ್ ಆಗಿದೆ. ಈ ಬಗ್ಗೆ ಆಯೋಗ ಯಾವುದೇ ನಿರ್ದೇಶನ ನೀಡಿಲ್ಲ. ಬೇರೆ ಸಾಮಾಜಿಕ ಜಾಲ ತಾಣಗಳಿಗೆ ಹೋಲಿಸಿದರೆ ಫೇಸ್ ಬುಕ್ ನಲ್ಲಿ ಅಧಿಕೃತ ಖಾತೆಗಳು ಹುಡುಕುವುದು ಸ್ವಲ್ಪ ಕಷ್ಟಕರ ಆದರೆ, ಇನ್ಮುಂದೆ ಫೇಸ್ ಬುಕ್ ಮೇಲೂ ಹದ್ದಿನ ಕಣ್ಣು ಬೀಳಲಿದೆ.












Click it and Unblock the Notifications