Weather Report: ದೇಶದ ಈ ಭಾಗದಲ್ಲಿ ಮಾರ್ಚ್ 1ರವರೆಗೂ ಬಲು ಮಳೆ ಮುನ್ಸೂಚನೆ
India Weather Report: ಇದೀಗ ಚಳಿಯ ನಡುವೆಯೂ ದೇಶದ ಬಹುತೇಕ ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗುತ್ತಲೇ ಇದೆ. ಉತ್ತರ ಭಾರತದ ಕಡೆ ಮಾತ್ರ ಮಂಜು ಮುಸುಕಿದ ವಾತಾವರಣ ಇರುತ್ತಿದ್ದು, ಭೀಕರ ಚಳಿಯಿಂದ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರದ ದೇಶದ ಹಲವೆಡೆ ಮಾರ್ಚ್ 1ರವರೆಗೂ ಮಳೆಯಾಗಲಿದೆ ಎಂದು ತಿಳಿದುಬಂದಿದೆ. ಹಾಗಾದರೆ ಯಾವೆಲ್ಲ ಭಾಗಗಳಲ್ಲಿ ಮಳೆರಾಯನ ಆರ್ಭಟ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಮಾರ್ಚ್ 1ರವರೆಗೆ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಫೆಬ್ರವರಿ 26-27ರಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.

ಅರುಣಾಚಲ ಪ್ರದೇಶದಲ್ಲಿ ಮುಂದಿನ 6-7 ದಿನಗಳಲ್ಲಿ ಇದೇ ರೀತಿಯ ಹವಾಮಾನವನ್ನು ನಿರೀಕ್ಷಿಸಲಾಗಿದೆ. ಇದೇ ವೇಳೆ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಪ್ರತ್ಯೇಕ ಸ್ಥಳಗಳಲ್ಲಿ, ಛತ್ತೀಸ್‌ಗಢ ಮತ್ತು ತೆಲಂಗಾಣದ ಕೆಲವು ಭಾಗಗಳು ಸಹ ಚದುರಿದ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನವದೆಹಲಿ ಹವಾಮಾನ: ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಇಂದು ನವದೆಹಲಿಯಲ್ಲಿ ರಾತ್ರಿ ವೇಳೆಹೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಇನ್ನು ಇಲ್ಲಿ ಇಂದು ತಾಪಮಾನವು ಗರಿಷ್ಠ 26 ಡಿಗ್ರಿ ಸೆಲ್ಸಿಯಸ್, ಕನಿಷ್ಠ 9.0 ಡಿಗ್ರಿಗಳವರೆಗೆ ದಾಖಲು ಆಗಿದೆ ಎಂದು ಇರಲಿದೆ ಎಂದು ತಿಳಿದುಬಂದಿದೆ.
ಇನ್ನು ಜನಪ್ರಿಯ ಪ್ರವಾಸಿ ತಾಣಗಳಾದ ಮನಾಲಿ ಮತ್ತು ಡಾಲ್‌ಹೌಸಿಗಳಲ್ಲಿ ನಿನ್ನೆ ಹಿಮಪಾತ ಸಂಭವಿಸಿತ್ತು. ಶಿಮ್ಲಾದಲ್ಲಿ ಬೆಳಗ್ಗೆ ನೀಲಿ ಆಕಾಶವನ್ನು ಹೊಂದಿದ್ದರೂ, ಪಟ್ಟಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ನಂತರ ಹಿಮಾವೃತ ಗಾಳಿ ಮತ್ತು ಸಂಕ್ಷಿಪ್ತ ಹಿಮದ ಮಳೆಯೇ ಸುರಿದಿತ್ತು.
ಫೆಬ್ರವರಿ 25ರಿಂದ ಮಾರ್ಚ್ 1 ರವರೆಗೆ ಹಲವಾರು ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಆಗುಲಿದೆ ಎಂದು ಮುನ್ಸೂಚನೆ ನೀಡಿದೆ. ಜೊತೆಗೆ ಫೆಬ್ರವರಿ 26, 27, ಮತ್ತು 29 ಹಾಗೂ ಮಾರ್ಚ್ 1ರಂದು ಇಲ್ಲಿನ ಹಿಮಾಲಯ ಪ್ರದೇಶದಂತಹ ಹಲವು ಎತ್ತರದ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗುವ ಸಾಧ್ಯತೆಯಿದೆ.
ಅಲ್ಲದೆ ಈ ವೇಳೆಯೇ ಆಯ್ದ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಇರುವ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಹಿಮಾಚಲದ ವಾತಾವರಣ: ಹಲವೆಡೆ ಲಘು ಹಿಮಪಾತದ ನಂತರ ಹೆಚ್ಚಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸರಾಸರಿಗಿಂತ ಕಡಿಮೆಯಿರುವುದರಿಂದ ಹಿಮಾಚಲ ಪ್ರದೇಶದ ನಿವಾಸಿಗಳಿಗೆ ಸ್ವಲ್ಪಮಟ್ಟಿಗೆ ತೃಪ್ತಿ ಸಿಕ್ಕಂತಾಗಿದೆ. ನಿಚಾರ್ 10 ಸೆಂ.ಮೀ., ಕಲ್ಪಾ 7.8 ಸೆಂ.ಮೀ., ಸಾಂಗ್ಲಾ 2.8 ಸೆಂ.ಮೀ., ಮತ್ತು ಪೂಹ್ 0.6 ಸೆಂ.ಮೀ., ಶಿಮ್ಲಾ ಮತ್ತು ಕುಫ್ರಿಯಲ್ಲಿ ಕಡಿಮೆ ಪ್ರಮಾಣದ ಹಿಮಪಾತವನ್ನು ಅನುಭವಿಸಿದವು.
ಈ ಪ್ರದೇಶಗಳಲ್ಲಿ ಹಗಲಿನ ತಾಪಮಾನವು ಸಹ ಕಡಿಮೆಯಾಗಿದೆ. ಕಲ್ಪಾವು ಗರಿಷ್ಠ 1.7 ಡಿಗ್ರಿ ಸೆಲ್ಸಿಯಸ್ ತಲುಪಿದೆ, ನಂತರ ಕುಕುಮ್ಸೇರಿ 2.6 ಡಿಗ್ರಿ, ಕುಫ್ರಿ 2.9 ಡಿಗ್ರಿ, ನರಕಂದ 3.8 ಡಿಗ್ರಿ ಮತ್ತು ಡಾಲ್ಹೌಸಿ 4.1 ಡಿಗ್ರಿ ಸೆಲ್ಸಿಯನ್ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯ ಸರಾಸರಿಗಿಂತ 10 ಡಿಗ್ರಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications