ಬಡವರಿಗೆ ಕನಿಷ್ಟ ಆದಾಯ ಖಾತ್ರಿ: ರಾಹುಲ್ ಗಾಂಧಿ ಭರವಸೆ

ರಾಯಪುರ, ಜನವರಿ 28: ಬಡವರನ್ನು ಆರ್ಥಿಕವಾಗಿ ಶಕ್ತಗೊಳಿಸಲು 'ಕನಿಷ್ಟ ಆದಾಯ ಖಾತ್ರಿ' ನೀಡುವ ಕಾರ್ಯ ನಾವು ಅಧಿಕಾರಕ್ಕೆ ಬಂದರೆ ಮಾಡುತ್ತವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಭರವಸೆ ನೀಡಿದರು.

ಚತ್ತೀಸ್‌ಗಡದ ರಾಯಪುರದಲ್ಲಿ ನಡೆದ ರೈತ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ರೀತಿಯ ನಿರ್ಣಯವನ್ನು ಹಿಂದಿನ ಯಾವುದೇ ಸರ್ಕಾರಗಳು ತಳೆದಿಲ್ಲ, ಅಂತಹಾ ಅತಿಮುಖ್ಯ, ಅವಶ್ಯ ನಿರ್ಣಯ ಇದಾಗಿದೆ ಎಂದು ಹೇಳಿದರು.

we will give Minimum Income Guarantee to every poor: Rahul Gandhi

ಮನ್‌ರೇಗಾ (MANREGA) ಮೂಲಕ 100 ಗಂಟೆಯ ಉದ್ಯೋಗ ಖಾತ್ರಿಯನ್ನು ಕಾಂಗ್ರೆಸ್ ನೀಡಿತ್ತೊ, ಆರ್‌ಟಿಐ ಮೂಲಕ ಆಡಳಿತವನ್ನು ಹೇಗೆ ಸ್ವಚ್ಛ ಮಾಡುವ ಮಹತ್ವದ ಹೆಜ್ಜೆ ಇಟ್ಟಿತೋ, ಆಹಾರ ಕಾಯ್ದೆ ಮೂಲಕ ಎಲ್ಲರಿಗೂ ಆಹಾರ ಕಡ್ಡಾಯವಾಗಿ ದೊರೆಯುವಂತೆ ಮಾಡಿತೊ, ಹಾಗೆಯೇ ಎಲ್ಲರಿಗೂ ಕನಿಷ್ಟ ಆದಾಯವನ್ನು ನಾವು ನೀಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ತಮ್ಮ ಈ ಯೋಜನೆಯನ್ನು ಐತಿಹಾಸಿಕ ಎಂದು ಬಣ್ಣಿಸಿರುವ ರಾಹುಲ್ ಅವರು, ತಮ್ಮ ಪಕ್ಷವು 2019 ರ ಚುನಾವಣೆ ಗೆದ್ದು ಅಧಿಕಾರ ರಚಿಸಿದ ಬಳಿಕ ತುರ್ತಾಗಿ ದೇಶದ ಎಲ್ಲ ಬಡವರಿಗೂ ಕನಿಷ್ಟ ಆದಾಯವನ್ನು ನೀಡುವ ಕಾರ್ಯ ಮಾಡುತ್ತದೆ ಎಂದು ಹೇಳಿದ್ದಾರೆ.

ತಮ್ಮ ಈ ಯೋಜನೆಯು ಹಸಿವು ಮುಕ್ತ ಬಡತನ ಮುಕ್ತ ಭಾರತವನ್ನು ನಿರ್ಮಾಣ ಮಾಡಲಿದೆ ಎಂದು ರಾಹುಲ್ ಅವರು ಹೇಳಿದರು. ಅಷ್ಟೆ ಅಲ್ಲದೆ ಚತ್ತೀಸ್‌ಗಡದಲ್ಲಿ 15 ವರ್ಷಗಳ ಬಳಿಕ ನಮ್ಮ ಪಕ್ಷಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+