ಪಂಚಾಯಿತಿಯಿಂದಿಡಿದು ಲೋಕಸಭೆಯವರೆಗೂ ನಾವು ಬಿಜೆಪಿಯನ್ನು ಸೋಲಿಸುತ್ತೇವೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಜೂನ್‌ 27: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ಎರಡು ವಾರಗಳಿಗಿಂತ ಕಡಿಮೆ ಸಮಯವಿದ್ದು, ತಮ್ಮ ಪಕ್ಷವು ಮುಂಬರುವ ಪಂಚಾಯತ್‌ ಚುನಾವಣೆ ಸೇರಿದಂತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಹಣದ ಕೊರತೆಯಿಂದ ಮನೆ ನಿರ್ಮಿಸಲು ಜನರು ಎದುರಿಸುತ್ತಿರುವ ತೊಂದರೆಗಳನ್ನು ಅವರು ವಿವರಿಸಿ ನಾವು ಪಂಚಾಯತ್ ಚುನಾವಣೆ, ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ. ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಹಣವನ್ನು ನಾವೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

BJP will be defeat in Lok Sabha and panchayat elections

ಕೇಂದ್ರ ಸರ್ಕಾರವು ಬಂಗಾಳಕ್ಕೆ ಸುಮಾರು 7,000 ಕೋಟಿ ರೂಪಾಯಿಗಳನ್ನು ನೀಡಬೇಕಿದೆ. 100 ದಿನಗಳ ಗ್ರಾಮೀಣ ಉದ್ಯೋಗ ಯೋಜನೆಗೆ ಬಾಕಿ ಇದೆ. ನಿಧಿ ಸ್ಥಗಿತದ ಹೊರತಾಗಿಯೂ, ರಾಜ್ಯವು ಪೀಡಿತ ಜನರಿಗೆ ಕೆಲಸದ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ ಸೇರಿದಂತೆ ವಿವಿಧ ದೇಶಗಳ ಭೇಟಿಗಳ ಬಗ್ಗೆ ಟೀಕಿಸಿದ ಮಮತಾ ಬ್ಯಾನರ್ಜಿ, "ಒಬ್ಬ ವ್ಯಕ್ತಿ ಕೋಟ್ಯಂತರ ರೂಪಾಯಿಗಳೊಂದಿಗೆ ರಷ್ಯಾ- ಅಮೆರಿಕಾಕ್ಕೆ ಹೋಗುತ್ತಿದ್ದಾನೆ. ಆದರೆ ಕೇಂದ್ರವು 100 ದಿನಗಳ ಯೋಜನೆಯ ಹಣವನ್ನು ತಡೆಹಿಡಿದಿದೆ. ಹಲವು ಬಾರಿ ಮನವಿ ಮಾಡಿದರೂ ಹಣ ನೀಡುತ್ತಿಲ್ಲ. 100 ದಿನಗಳ ಕೆಲಸಕ್ಕೆ ಕೇಂದ್ರ 7 ಸಾವಿರ ಕೋಟಿ ಹಣ ನೀಡಿಲ್ಲ. ಪಂಚಾಯತ್ ಚುನಾವಣೆಯಲ್ಲಿ ಗೆದ್ದ ನಂತರ ತೃಣಮೂಲ ಆ ಹಣವನ್ನು ಸಂಗ್ರಹಿಸುತ್ತದೆ ಎಂದು ಅವರು ಮೋದಿಯನ್ನು ಹೆಸರಿಸದೆ ಹೇಳಿದರು.

ಬೆಹಾರ್ ಪ್ರದೇಶದಲ್ಲಿ ನಡೆದ ಬಿಎಸ್‌ಎಫ್ ಗುಂಡಿನ ದಾಳಿ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ, ಚುನಾವಣಾ ಸಮಯದಲ್ಲಿ ಗಡಿಯುದ್ದಕ್ಕೂ ಮತದಾರರನ್ನು ಭಯಭೀತಗೊಳಿಸುತ್ತಾರೆ. ಜನರು ಭಯಭೀತರಾಗಿ ಮನೆಯಲ್ಲಿ ಕುಳಿತುಕೊಳ್ಳಬೇಡಿ, ಬದಲಾಗಿ ದೂರು ನೀಡಬೇಕು. ಗಡಿಗಳಲ್ಲಿ ಸ್ಥಳೀಯ ಆಡಳಿತ ನಿಗಾ ಇಡಬೇಕು. ಗುಂಡಿನ ದಾಳಿ (ಬಿಎಸ್‌ಎಫ್‌ನಿಂದ ಅಮಾಯಕ ನಾಗರಿಕರ ಮೇಲೆ) ನಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾರೂ ಭ್ರಷ್ಟಾಚಾರಕ್ಕೆ ಒಳಗಾಗದೇ ಪಂಚಾಯತ್‌ಗಳನ್ನು ನೋಡಿಕೊಳ್ಳಬೇಕು. ಯಾರಿಗೂ ಹಣ ಕೊಡಬೇಡಿ. ನಾವು ಲೂಟಿಗೆ ಅವಕಾಶ ನೀಡುವುದಿಲ್ಲ. ಯಾರಿಗಾದರೂ ಹಣ ಬೇಕಿದ್ದರೆ ಅವರ ಚಿತ್ರ ತೆಗೆದು ನನಗೆ ಕಳುಹಿಸಿ. ಇನ್ನು ಮುಂದೆ ಪಂಚಾಯಿತಿಗಳನ್ನು ನಿಯಂತ್ರಿಸುತ್ತೇವೆ. ಅದನ್ನು ಯಾರೂ ಕದಿಯಲು ಬಿಡಬೇಡಿ. ನಮಗೆ ಜನರ ಪಂಚಾಯತಿಗಳು ಬೇಕು. ತಮ್ಮ ಪಕ್ಷವು ಸ್ವಚ್ಛ ದಾಖಲೆ ಹೊಂದಿರುವ ಅಭ್ಯರ್ಥಿಗಳು ಕಣದಲ್ಲಿರುವಂತೆ ನೋಡಿಕೊಂಡಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+