ಮೋದಿಯೆಡೆಗೆ ಬೊಟ್ಟು ಮಾಡಿದರೆ ಕೈ ಕತ್ತರಿಸುತ್ತೇವೆ ಎಂದ ಬಿಜೆಪಿ ನಾಯಕ
Recommended Video
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ, ಚುನಾವಣೆ ಆಯೋಗದಿಂದ ನಿರ್ಬಂಧಕ್ಕೆ ಒಳಗಾಗಿದ್ದ ಹಿಮಾಚಲ ಪ್ರದೇಶದ ಬಿಜೆಪಿ ಮುಖ್ಯಸ್ಥ ಸತ್ಪಾಲ್ ಸಿಂಗ್ ಸತ್ತಿ ಬುಧವಾರದಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ಮೋದಿ ಕಡೆಗೆ ಬೆರಳು ತೋರುವವರ ಕೈ ಕತ್ತರಿಸಿ, ಅವರಿಗೇ ನೀಡುತ್ತೇವೆ" ಎಂದಿದ್ದಾರೆ.
ಬಿಜೆಪಿ ಅಭ್ಯರ್ಥಿ ರಾಮ್ ಸ್ವರೂಪ್ ಶರ್ಮಾ ಪರವಾಗಿ ಚುನಾವಣೆ ಪ್ರಚಾರ ನಡೆಸುವ ವೇಳೆ ಈ ಹೇಳಿಕೆ ನೀಡಿದ್ದಾರೆ. ಶರ್ಮಾ ಅವರು ಮಂಡಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅನ್ನು ಸರ್ವನಾಶ ಮಾಡಿದ್ದಾರೆ ಎಂದು ಕೂಡ ಸತ್ಪಾಲ್ ಹೇಳಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸತ್ಪಾಲ್ ಗೆ ಚುನಾವಣೆ ಆಯೋಗವು ನಲವತ್ತೆಂಟು ಗಂಟೆಗಳ ಕಾಲ ಚುನಾವಣೆ ಪ್ರಚಾರದಿಂದ ನಿಷೇಧ ಹೇರಿತ್ತು. ಹಿಮಾಚಲ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ರಾಥೋಡ್ ಮಾತನಾಡಿ, ಕೈ ಕತ್ತರಿಸುವುದು ಹಾಗೂ ಸೋನಿಯಾ ಅವರ ಬಗ್ಗೆ ಸತ್ಪಾಲ್ ನೀಡಿದ ಹೇಳಿಕೆ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು. ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದಿದ್ದಾರೆ.












Click it and Unblock the Notifications