ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Express ರೈಲಿನಲ್ಲಿ ಕಂಡುಬಂದ ಕಸದ ರಾಶಿ: ಫೋಟೊ ವೈರಲ್‌, ಕರ್ತವ್ಯ ಮರೆತ ಜನ ಎಂದ ನೆಟ್ಟಿಗರು

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಕಸ ಬಿದ್ದಿರುವುದನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.ಇದಕ್ಕೆ ನೆಟ್ಟಿಗರು ಏನಂದರು. ಇದನ್ನು ಓದಿ.

|
Google Oneindia Kannada News

ನವದೆಹಲಿ, ಜನವರಿ 28: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಕಸ ಬಿದ್ದಿರುವುದನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.

ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ, ರೈಲಿನೊಳಗೆ ಖಾಲಿ ಬಾಟಲಿಗಳು, ಬಳಸಿದ ಆಹಾರ ಪಾತ್ರೆಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಕಂಡುಬರುತ್ತವೆ. ಒಬ್ಬ ಕೆಲಸಗಾರನು ಅದನ್ನು ಸ್ವಚ್ಛಗೊಳಿಸಲು ಪೊರಕೆ ಹಿಡಿದಿರುವುದನ್ನು ಸಹ ಗುರುತಿಸಲಾಗಿದೆ. ಈ ಫೋಟೋಗೆ 'We the People' ಎಂಬ ಶಿರ್ಷೀಕೆಯನ್ನು ನೀಡಲಾಗಿದೆ.

ಈ ಪೋಸ್ಟ್ ಟ್ವಿಟರ್‌ ವೇದಿಕೆಯಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಸೆಳೆದಿದೆ. 'ಸರ್, ನಮ್ಮ ದೇಶದಲ್ಲಿ ಜನರು ತಮ್ಮ ಕರ್ತವ್ಯವನ್ನು ತಿಳಿದಿರುವುದಿಲ್ಲ. ಆದರೆ ಖಂಡಿತವಾಗಿಯೂ ಅವರ ಹಕ್ಕುಗಳನ್ನು ತಿಳಿದಿದ್ದಾರೆ. ಬದಲಾಗಿ ಜನರು ಸ್ವಚ್ಛತೆಗಾಗಿ ಸ್ವಯಂ ಹೆಜ್ಜೆಗಳನ್ನು ಹಾಕಲು ಆರಂಭಿಸಬೇಕಿದೆ' ಎಂದು ಬಳಕೆದಾರರು ತಿಳಿಸಿದ್ದಾರೆ.

ಎಕ್ಸ್‌ಪ್ರೆಸ್ ರೈಲಿನೊಳಗೆ ಕಸ ಹಾಕಿರುವುದನ್ನು ಹಲವರು ಖಂಡಿಸಿದ್ದಾರೆ. 'ನಾವು ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಮೂಲಸೌಕರ್ಯಕ್ಕಾಗಿ ಕೇಳುತ್ತಲೇ ಇರುತ್ತೇವೆ. ಆದರೆ ನಮ್ಮ ದೇಶದ ಜನರಿಗೆ ಅದನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಅದನ್ನು ನೋಡಿಕೊಳ್ಳಬೇಕು ಎಂದು ತಿಳಿದಿಲ್ಲ' ಎಂದು ಕಾಮೆಂಟ್‌ ಮಾಡಲಾಗಿದೆ.

We The People: Viral Photo Shows Garbage Inside Vande Bharat Express Train

ಇನ್ನೊಬ್ಬ ಬಳಕೆದಾರರು, "ಇದನ್ನು ನೋಡಲು ತುಂಬಾ ದುಃಖವಾಗಿದೆ" ಎಂದು ಹೇಳಿದ್ದಾರೆ.

ಕೆಲವು ಬಳಕೆದಾರರು ದೇಶವನ್ನು ಸ್ವಚ್ಛವಾಗಿಡಲು ಸಹಾಯ ಮಾಡುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸಿದ್ದಾರೆ. 'ನಾವು ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದ ಹೊರತು ಏನೂ ಬದಲಾಗುವುದಿಲ್ಲ. ರಾಷ್ಟ್ರವನ್ನು ಹೇಗೆ ಆರೋಗ್ಯವಾಗಿಡಬೇಕು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು,' ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.

"ಅದು ಯಾವುದೇ ರೈಲಿನಲ್ಲಿ ಇರಲಿ, ಇವೆಲ್ಲವೂ ಸಹಜ" ಎಂದು ಕಾಮೆಂಟ್ ಒಂದು ಬಂದಿದೆ.

We The People: Viral Photo Shows Garbage Inside Vande Bharat Express Train

"ನಾವೇ ಮೂಲಭೂತ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವವರೆಗೆ ಅಭಿವೃದ್ಧಿಯಿಂದ ಯಾವುದೇ ಪ್ರಯೋಜನವಿಲ್ಲ. ಜವಾಬ್ದಾರಿಯುತ ನಾಗರಿಕರಾಗಿರಿ! " ಎಂದು ಬಳಕೆದಾರರೊಬ್ಬರು ಕಾಮೆಂಟಿಸಿದ್ದಾರೆ.

ಒಬ್ಬ ವ್ಯಕ್ತಿ "ತುಂಬಾ ದುರದೃಷ್ಟಕರ" ಎಂದು ಪ್ರತಿಕ್ರಿಯಿಸಿದರು.

ಕೆಲವರು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ಸೂಚಿಸಿದರು. "ನಾವು ನಮ್ಮದೇ ಬಾಟಲಿಗಳನ್ನು ತರಲು ಸಾಧ್ಯವಿಲ್ಲವೇ? ಇದರಿಂದ ನಾವು ಟನ್‌ಗಟ್ಟಲೆ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಬಹುದು" ಎಂದು ಬಳಕೆದಾರರು ಬರೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಸ ಬಿದ್ದ ನಂತರ ರೈಲುಗಳ ಒಳಗೆ ಶುಚಿತ್ವವನ್ನು ಕಾಪಾಡುವಂತೆ ರೈಲ್ವೆ ಪ್ರಯಾಣಿಕರಿಗೆ ಮನವಿ ಮಾಡಿತ್ತು. ರೈಲು ವಿಶಾಖಪಟ್ಟಣಂ ತಲುಪಿದಾಗ, ಬೋರ್ಡಿನ ಹೌಸ್‌ಕೀಪಿಂಗ್ ಸಿಬ್ಬಂದಿ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿದ್ದರೂ ಸಹ ಬೋಗಿಗಳು ತುಂಬಾ ಕೊಳಕಾಗಿದ್ದವು ಎಂದು ರೈಲ್ವೆ ಹೇಳಿದೆ.

We The People: Viral Photo Shows Garbage Inside Vande Bharat Express Train

"ಸ್ವಚ್ಛತೆ ಎಂದರೆ ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕ್ರಿಯೆ. ನಾಗರಿಕರು ತಮ್ಮ ಆವರಣವನ್ನು ಸ್ವಚ್ಛವಾಗಿಡಲು ತುಂಬಾ ಜವಾಬ್ದಾರರಾಗಿದ್ದಾರೆ ಮತ್ತು ಅದು ನಮ್ಮ ಆಸ್ತಿಯಾಗಿದೆ ಎಂದು ವಾಲ್ಟೇರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಸತ್ಪತಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

"ಮನಸ್ಥಿತಿ ಮತ್ತು ಮನೋಭಾವವನ್ನು ಬದಲಾಯಿಸಬೇಕಾಗಿದೆ. ಸ್ವಚ್ಛ ರೈಲು-ಸ್ವಚ್ಛ ಭಾರತ್ ಎಂಬ ನಮ್ಮ ಧ್ಯೇಯವಾಕ್ಯವನ್ನು ಇಂತಹ ಹೊಂದಾಣಿಕೆಯಿಂದ ಈಡೇರಿಸಲು ಸಾಧ್ಯವಿಲ್ಲ. ನಿಮಗೆ ಉತ್ತಮ ಸೇವೆ ನೀಡಲು ರೈಲ್ವೆಯೊಂದಿಗೆ ಸಹಕರಿಸಿ. ಕಸ ಹಾಕುವುದನ್ನು ನಿಲ್ಲಿಸಿ,'' ಎಂದು ಹೇಳಿದರು.

English summary
A photo showing garbage lying in the compartment of the Vande Bharat Express train is doing the rounds on social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X