ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಪ್ರಕರಣ?

ನವದೆಹಲಿ, ಏಪ್ರಿಲ್‌ 10: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಹಾಗೂ ಅದಾನಿ ಗ್ರೂಪ್‌ ಜೊತೆ ಹೊಂದಾಣಿಕೆ ಇದೆ ಎಂದು ಮಾಡಿರುವ ಟ್ವೀಟ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂಗೆ ಭೇಟಿ ನೀಡಿದ ನಂತರ ರಾಹುಲ್ ಗಾಂಧಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ಗುವಾಹಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹೇಳಿದರು. "ರಾಹುಲ್ ಗಾಂಧಿ ಯಾವುದೇ ಟ್ವೀಟ್ ಮಾಡಿದ್ದರೂ ಅದು ಮಾನಹಾನಿಕರ ಟ್ವೀಟ್ ಆಗಿರುತ್ತದೆ. ಹಾಗಾಗಿ ಪ್ರಧಾನಿ ಅಸ್ಸಾಂನಿಂದ ಹಿಂತಿರುಗಿದ ನಂತರ ನಾವು ಟ್ವೀಟ್‌ಗೆ ಪ್ರತಿಕ್ರಿಯಿಸುತ್ತೇವೆ ಮತ್ತು ಖಂಡಿತವಾಗಿಯೂ ಗುವಾಹಟಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಅವರು ಹೇಳಿದರು.

We file another case against Rahul Gandhi: Himanta Biswa Sharma

"ಆದರೆ ಈಗ ಪ್ರಕರಣ ಹೂಡಲು ಮುಂದಾಗಿಲ್ಲ, ನಾನು ಈಗ ರಾಜಕೀಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ, ಏಕೆಂದರೆ ನಾವು ಬಿಹುವನ್ನು ಆಚರಿಸಲು ಬಯಸುತ್ತೇವೆ" ಎಂದು ಹೇಳಿದರು. ರಾಹುಲ್ ಗಾಂಧಿ ಶನಿವಾರ ಕುಟುಕುವ ಟ್ವೀಟ್‌ನಲ್ಲಿ ಬಿಜೆಪಿಗೆ ಸೇರಿದ ಮಾಜಿ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಪೋಸ್ಟ್ ಮಾಡಿದ್ದು, ಅವರು ಉದ್ಯಮಿ ಗೌತಮ್ ಅದಾನಿಯವರೊಂದಿಗೆ ಬಿಜೆಪಿಗೆ ಸೇರಿದವರು ಎಂದು ಹೇಳಿದ್ದರು.

ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿರುವ ಚಿತ್ರದಲ್ಲಿ ಇರುವ ಹೆಸರುಗಳಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಮಾಜಿ ಸಂಸದ ಗುಲಾಂ ನಬಿ ಆಜಾದ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ನಾಯಕ ಅನಿಲ್ ಆಂಟೋನಿ ಮತ್ತು ಮಾಜಿ ಸಿಎಂ ಕಿರಣ್ ರೆಡ್ಡಿ ಸೇರಿದ್ದಾರೆ. ರಾಹುಲ್ ಗಾಂಧಿಯವರ ಟ್ವೀಟ್‌ನಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರ ಮಾಡಿದ ಕೆಲ ನಾಯಕರು ಸೇರಿದಂತೆ ಹಳೆಯ ಪಕ್ಷದೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಮುರಿದುಕೊಂಡಿರುವ ಮಾಜಿ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟೋನಿ ಹೆಸರನ್ನು ಹೊಂದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

We file another case against Rahul Gandhi: Himanta Biswa Sharma

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸಿದ ಹಿಮಾಂತ್‌ ಬಿಸ್ವಾ ಶರ್ಮಾ, ಉದ್ಯೋಗ ನೀಡುವ ಕುರಿತು ಕೇಜ್ರಿವಾಲ್ ಅವರ ಹಕ್ಕುಗಳ ಬಗ್ಗೆ ತಿಳಿಯಲು ಅವರೊಂದಿಗಿನ ಸಭೆಗಾಗಿ ಇನ್ನೂ ಕಾಯುತ್ತಿದ್ದೇನೆ. ಏಕೆಂದರೆ ದೆಹಲಿ ಸರ್ಕಾರದಲ್ಲಿ ಕೇವಲ 1.5 ಲಕ್ಷ ಸಿಬ್ಬಂದಿ ಇರುವಲ್ಲಿ 12 ಲಕ್ಷ ಉದ್ಯೋಗ ಹೇಗೆ ಸಾಧ್ಯ ಎಂದು ನಾನು ಕೇಳಬಯಸುತ್ತೇನೆ. ಆದ್ದರಿಂದ, ನಾನು ಅವರಿಗೆ ಆ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಅಸ್ಸಾಂ ಸರ್ಕಾರವು 4 ಲಕ್ಷ ಸಿಬ್ಬಂದಿಯನ್ನು ಮಂಜೂರು ಮಾಡಿದ್ದರೆ, ನಾನು 12 ಲಕ್ಷ ಜನರಿಗೆ ನೇಮಕಾತಿಯನ್ನು ಹೇಗೆ ನೀಡಲಿ? ಹಾಗಾಗಿ ಆ ರಹಸ್ಯವನ್ನು ಬಿಚ್ಚಿಡಬೇಕು. ಇದು ಖಾಸಗಿ ಕಂಪನಿಯ ಉದ್ಯೋಗಗಳು ಎಂದು ಅವರು ದಿನದ ಕೊನೆಯಲ್ಲಿ ಹೇಳಬಾರದು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಸಂಸತ್ ಸದಸ್ಯ (ಸಂಸದ) ಸ್ಥಾನದಿಂದ ಅನರ್ಹಗೊಂಡ ನಂತರ ಮೊದಲ ಬಾರಿಗೆ ತಮ್ಮ ಹಿಂದಿನ ಮತ ಕ್ಷೇತ್ರವಾದ ಕೇರಳದ ವೈನಾಡ್‌ಗೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯ ವೇಳೆ ಅವರು ವೈನಾಡಿನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ರೋಡ್ ಶೋ ನಡೆಸಲಿದ್ದಾರೆ.

2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರ ಸಂಸತ್ತಿನ ಕೆಳಮನೆಯಲ್ಲಿ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. 2019 ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು 'ಮೋದಿ' ಎಂಬ ಉಪನಾಮವನ್ನು ಬಳಸಿ ಮಾಡಿದ ಹೇಳಿಕೆಗೆ ಈ ಪ್ರಕರಣವು ಸಂಬಂಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+