ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈ ಹಿಂದ್, ಜೈ ಭಾರತ್ ಎಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

|
Google Oneindia Kannada News

ಗಾಂಧೀನಗರ್ (ಗುಜರಾತ್), ಜನವರಿ 17 : "ಮೋದಿ ಹಾಗೂ ನನಗೆ ಇಬ್ಬರಿಗೂ ವಯಸ್ಸಾಗಿಲ್ಲ. ಇಬ್ಬರೂ ಆಶಾವಾದಿಗಳು. ನಮ್ಮ ಆಲೋಚನೆಯ ದೃಷ್ಟಿಯಿಂದ ಯುವಕರು. ಭವಿಷ್ಯದ ಬಗ್ಗೆ ಆಶಾವಾದ ಇಟ್ಟುಕೊಂಡಿದ್ದೇವೆ ಎಂದು ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದರು.

ಅಹ್ಮದಾಬಾದ್ ನ ಐಕ್ರಿಯೇಟ್ ಕೇಂದ್ರದಲ್ಲಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಐಪ್ಯಾಡ್ ಮತ್ತು ಐಪಾಡ್ ಗಳ ಬಗ್ಗೆ ಗೊತ್ತಿದೆ. ಆದರೆ ಮತ್ತೊಂದು 'ಐ' ಬಗ್ಗೆ ಜಗತ್ತು ತಿಳಿಯಬೇಕಿದೆ. ಅದು ಐಕ್ರಿಯೇಟ್. ಹೈಫಾ ಏಕೀಕರಣ ಆಗುವಾಗ ಹಲವು ಭಾರತೀಯ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅದರಲ್ಲಿ ಬಹುತೇಕರು ಗುಜರಾತಿಗಳು. ಗುಜರಾತ್ ಗೆ ಧನ್ಯವಾದ ಎಂದರು.

ಭಾರತ ಭೇಟಿ ವೇಳೆ ಇಸ್ರೇಲ್ ಪ್ರಧಾನಿಯಿಂದ ಮೋದಿಗೆ ವಿಶೇಷ ಉಡುಗೊರೆಭಾರತ ಭೇಟಿ ವೇಳೆ ಇಸ್ರೇಲ್ ಪ್ರಧಾನಿಯಿಂದ ಮೋದಿಗೆ ವಿಶೇಷ ಉಡುಗೊರೆ

ಜೈ ಹಿಂದ್, ಜೈ ಭಾರತ್, ಜೈ ಇಸ್ರೇಲ್, ಪ್ರಧಾನಿ ಮೋದಿ ಅವರಿಗೆ ಧನ್ಯವಾದ. ಎಲ್ಲರಿಗೂ ಧನ್ಯವಾದ ಎನ್ನುವ ಮೂಲಕ ತಮ್ಮ ಭಾಷಣ ಮುಗಿಸಿದರು ನೆತನ್ಯಾಹು.

We are optimistic about future: Benjamin Netanyahu

ಪ್ರಧಾನಿ ಮೋದಿ ಮಾತನಾಡಿ, ಕಳೆದ ವರ್ಷ ಇಸ್ರೇಲ್ ಗೆ ಹೋದಾಗಲೇ ನಿರ್ಧರಿಸಿದೆ; ಈ ತಳಪಾಯದಿಂದ ಇಸ್ರೇಲ್ ಜತೆಗಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಆಗಿನಿಂದ ನನ್ನ ಗೆಳೆಯ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಬರುವುದನ್ನು ಕಾಯುತ್ತಿದ್ದೆ. ಅವರಿಂದು ಇಲ್ಲಿದ್ದಾರೆ. ನಾವೀಗ ಈ ಶಂಕುಸ್ಥಾಪನೆ ಮಾಡುತ್ತಿದ್ದೇವೆ ಎಂದು ಹೇಳಿದರು.

English summary
PM Modi and I are both very young and both very optimistic, we are young in our thinking & optimistic about the future, says Israel PM Benjamin Netanyahu at iCreate Center in Ahmedabad's Deo Dholera Village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X