Landslide: 90 ದಿನ ಕಳೆದರೂ ವಯನಾಡು ಪುನಶ್ಚೇತನಕ್ಕೆ ಕೇಂದ್ರ ಹಣ ನೀಡಿಲ್ಲ: ಕೇರಳ ಸಿಎಂ
ತಿರುವನಂತಪುರಂ, ಅಕ್ಟೋಬರ್ 31: ಕೇರಳ ರಾಜ್ಯದ ವಯನಾಡಿನಲ್ಲಿ ಕಂಡು ಕೇಳರಿಯದಂತಹ ಭೂಕುಸಿತ ಸಂಭವಿಸಿ ತಿಂಗಳುಗಳು ಕಳೆದಿವೆ. ಜನ, ಆಸ್ತಿಪಾಸ್ತಿ ಹಾನಿಯಾಗಿದೆ. ಗ್ರಾಮಗಳು, ಮನೆಗಳೇ ಕಣ್ಮರೆಯಾಗಿದ್ದು, ಈ ಅವಘಡದಲ್ಲಿ ಒಟ್ಟು 400 ಕ್ಕೂ ಹೆಚ್ಚು ಜೀವ ಹಾನಿ ಆಗಿದ್ದರೂ ಕೇಂದ್ರ ಸರ್ಕಾರ ನೆರವಿಗೆ ಬಂದಿಲ್ಲ ಎಂದು ಕೇರಳ ರಾಜ್ಯದ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
ಹೌದು, ವಯನಾಡು ಭೂಕುಸಿತದ ಸಂತ್ರಸ್ತರ ಪುನರ್ವಸತಿಗೆ ಅಗತ್ಯ ಅನುದಾನ, ಆರ್ಥಿಕ ನೆರವು ನೀಡಿಲ್ಲ ಎಂದು ಆರಫಿಸಿದ್ದಾರೆ. ಪ್ರಕೃತಿ ಮುನಿಸುವ ವೇಳೆ ಬಿಜೆಪಿ ಆಡಳಿತದಲ್ಲಿರುವ ಕೇಂದ್ರ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರತಿಪಕ್ಷಗಳು ಕೇರಳದ ರಾಜ್ಯದ ಅಭಿವೃದ್ಧಿ ಮುಂದಾಗಲಿಲ್ಲ ಎಂದು ಕೇರಳ ಸಿಎಂ ದೂರಿದ್ದರು.

ಕೇಂದ್ರ ನಡೆಗೆ ಕೇರಳ ಗರಂ
ವಯನಾಡು ಭೂಕುಸಿತ ಘಟನೆ ನಡೆದು ಮೂರು ತಿಂಗಳು ಆಗಿದೆ. ಇಲ್ಲಿನ ಸಾವು, ನೋವಿನ ಕಥೆ ಮಾತ್ರ ಜೀವಂತವಾಗಿದೆ. ಇಷ್ಟು ದಿನಗಳು ಕಳೆದರೂ ಸಹಿತ ಕೇಂದ್ರ ಸರ್ಕಾರವು ಅಲ್ಲಿನ ಪುನರ್ವಸತಿ ಕೆಲಸಗಳು, ಅಭಿವೃದ್ಧಿ ಒಂದು ಪೈಸೆಯನ್ನೂ ಸಹಾಯಧನ ಮಂಜೂರು ಮಾಡಿಲ್ಲ. ಇದು ಕೇಂದ್ರ ಸರ್ಕಾರದ ಕ್ರೂರ ನಡೆ, ಧೋರಣೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಮನವಿ ಮಾಡಿದರೂ ಹಣ ನೀಡಿಲ್ಲ
ಸಾಮಾನ್ಯವಾಗಿ ಇಂತಹ ಪ್ರಕೃತಿ ವಿಕೋಪಗಳು ಘಟಿಸಿದಾಗ ಕೇಂದ್ರ ಸರ್ಕಾರವು ಕೇಳುವ ಮೊದಲೇ ನೆರವಿಗೆ ಧಾವಿಸಬೇಕು. ಆರ್ಥಿಕವಾಗಿ ಸಹಾರ ಮಾಡಿ, ಪುನರ್ ಅಭಿವೃದ್ಧಿಗೆ ಮಾಡಬೇಕು. ಆದರೆ ಇದ್ಯಾವ ಕೆಲಸವು ಕೆರಳದ ವಯನಾಡು ದುರಂತ ಬಳಿಕ ಆಗಿಲ್ಲ. ನಾವು ಕೇಂದ್ರ ಮನವಿ ಮಾಡಿಕೊಂಡರು ನೆರವು ಸಿಕ್ಕಿಲ್ಲ ಎಂದು ಅವರು ಪ್ರತಿಪ್ರಾಧಿಸಿದ್ದಾರೆ.

ಕೇಂದ್ರದ ಇಂದಿನ ನಡೆ ನಿರ್ಲಕ್ಷ್ಯಯನ್ನು ಉದ್ದೇಶ ಪೂರ್ವಕ ಮತ್ತು ರಾಜಕೀಯ ಪ್ರೇರಿತ ಎಂದು ಕೇರಳ ವ್ಯಾಖ್ಯಾನಿಸಿದೆ. ರಾಜ್ಯದ ಕಡೆಗಿನ ಈ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತುವ ಬದಲು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮೂಕಪ್ರೇಕ್ಷಕರಾಗಿ ನಿಂತಿವೆ ಎಂದು ವಿಜಯನ್ ಅವರು ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ಪಾಲಕ್ಕಾಡ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಬರುವ ಸಮಯದಲ್ಲಿ ಆರೋಪಿಸಿದರು.
ಹೈಕೋರ್ಟ್‌ನ ನಿರ್ದೇಶನಗಳು ಹಾಗೂ ರಾಜ್ಯ ಶಾಸಕಾಂಗ ನಿರ್ದೇಶನ ಹೊರತಾಗಿಯೂ ಕೇಂದ್ರ ಸರ್ಕಾರ ಕೇಳಿದ 1,202 ಕೋಟಿ ರೂಪಾಯಿ ಸಹಾಯ ನೀಡಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.












Click it and Unblock the Notifications