ಲಡಾಕ್ ನಲ್ಲಿ ಚೀನಾ-ಭಾರತ ಸೈನಿಕರ ಮುಖಾಮುಖಿ ಕ್ಯಾಮೆರಾದಲ್ಲಿ ಸೆರೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಲಡಾಕ್, ಆಗಸ್ಟ್ 20: ಲಡಾಕ್ ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಎರಡು ಪಡೆಗಳ ನಡುವಿನ ಘರ್ಷಣೆಯನ್ನು ವಿಡಿಯೋದಲ್ಲಿ ಕಾಣಬಹುದು.

ಚೀನಾ ಕಳೆದ ವಾರ ಲಡಾಕ್ ಮೇಲೆ ಎರಡು ಬಾರಿ ದಾಳಿ ನಡೆಸಿತ್ತು. ಈ ಎರಡೂ ದಾಳಿ ವೇಳೆ ಚೀನಾ ಸೇನೆಯ ಯತ್ನವನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿದ್ದವು. ಲಡಾಕ್ ನ ಪ್ರಸಿದ್ಧ ಪ್ಯಾಂಗೋಂಗ್ ಸರೋವರದ ದಡದಲ್ಲಿ ಈ ದಾಳಿಯ ಯತ್ನ ನಡೆದಿತ್ತು.
ಈ ವೇಳೆ ಚೀನಿ ಪಡೆಗಳು ಕಲ್ಲು ತೂರಾಟ ನಡೆಸಿದ್ದರಿಂದ ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Watch video of India-China clash at Ladakh

ಲಡಾಕ್ ಸರೋವರ ತೀರದ ಎರಡು ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ಭಾರತೀಯ ಗಡಿ ಪ್ರವೇಶಿಲು ಚೀನಿ ಸೈನಿಕರು ಮುಂದಾಗಿದ್ದರು. ಕೊನೆಗೆ ಭಾರತ ಸಸೈನಿಕರ ಪ್ರಯತ್ನದಿಂದ ಚೀನೀ ಸೈನಿಕರು ಅಲ್ಲಿಂದ ನಿರ್ಗಮಿಸಿದರು ಎನ್ನಲಾಗಿದೆ.

2013 ರಲ್ಲಿ ದೌಲಾಟ್ ಬೇಗ್ ಓಲ್ಡೀ (ಡಿಬಿಒ) ನ ಡೆಪ್ಸಾಂಗ್ ಮೈದಾನದಲ್ಲಿ ಮೂರು ವಾರಗಳ ಕಾಲ ಭಾರತೀಯ ಸೇನೆ ಮತ್ತು ಚೀನಾ ಸೇನೆ ಮುಖಾಮುಖಿಯಾಗಿತ್ತು. ಅಲ್ಲಿಂದ ನಂತರ ಭಾರತೀಯ ಸೇನೆಯ ಗಸ್ತಿಗೆ ಚೀನಾ ಆಗಾಗ ಅಡ್ಡಿಪಡಿಸುತ್ತಲೇ ಬಂದಿದೆ. ಹೀಗಾಗಿ ಇಲ್ಲಿ ಸರೋವರಸ ಸುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಯಾವತ್ತೂ ಬಿಗುವಾಗಿಯೇ ಇರುತ್ತದೆ.

1990 ರ ದಶಕದ ಅಂತ್ಯದಲ್ಲಿ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುವಾಗ ಎರಡೂ ದೇಶಗಳು ಈ ಪ್ರದೇಶ ತಮಗೆ ಸೇರಿದ್ದು ಎಂದು ವಾದಿಸಿದ್ದರು. ಆಗ ಚೀನಾ ಸೇನೆ ಈ ಪ್ರದೇಶ ಅಕ್ಸಾಯ್ ಚೀನಾದ ಭಾಗವೆಂದು ಹೇಳಿ ಇಲ್ಲಿ ಉಕ್ಕಿನ ಸೇತುವೆ ನಿರ್ಮಿಸಿತ್ತು.
ಮೊದಲಿಗೆ, ಈ ಸರೋವರದ ಉತ್ತರ ಮತ್ತು ದಕ್ಷಿಣದ ತೀರಗಳಿಂದ ಚೀನಾದ ಪಡೆಗಳು ಗಸ್ತು ತಿರುಗುತ್ತಿದ್ದವು, ಇದರ 45 ಕಿಮೀ ಉದ್ದವು ಭಾರತೀಯ ಭಾಗದಲ್ಲಿದ್ದರೆ, 90 ಕಿಮೀ ಚೀನೀ ಭಾಗದಲ್ಲಿದೆ.

ಸದ್ಯ ಭಾರತವು ಇಲ್ಲಿ ಅಮೆರಿಕಾದಿಂದ ಖರೀದಿಸಲ್ಪಟ್ಟಿರುವ ಹೆಚ್ಚಿನ-ವೇಗದ ಇಂಟರ್ಸೆಪ್ಟರ್ ದೋಣಿಗಳ ಮೂಲಕ ಸರೋವರದಲ್ಲಿ ಗಸ್ತು ತಿರುಗುತ್ತಿದೆ. ಇದು ಸುಮಾರು 15 ಸೈನಿಕರು ಮತ್ತು ರೆಡಾರ್ಗಳು, ಇನ್ಫ್ರಾ-ರೆಡ್ ಮತ್ತು ಜಿಪಿಎಸ್ ಸಿಸ್ಟಮ್ಗಳಿಗೆ ಹೊಂದಿದೆ. ಈ ದೋಣಿಗಳು ಚೀನೀ ದೋಣಿಗಳಷ್ಟೇ ತಾಂತ್ರಿಕವಾಗಿಯೂ ಬಲಶಾಲಿಯಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The clash between Indian and Chinese troops at Ladakh was caught on camera. The video shows the clash between the two forces. China had attempted two incursions at Ladakh last week and were resisted by the Indian forces.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X