ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಪಂ ಹಗರಣ, ಪ್ರಮುಖ ಸಾಕ್ಷಿದಾರ ನಿಗೂಢ ಸಾವು

By Mahesh
|
Google Oneindia Kannada News

ಭೋಪಾಲ್, ಜುಲೈ 09: ಮಧ್ಯಪ್ರದೇಶದ ನೇಮಕಾತಿ ಹಗರಣ ವ್ಯಾಪಂ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ದಳಕ್ಕೆ ಮೊದಲ ದಿನವೇ ಪ್ರಮುಖ ಸಾಕ್ಷಿದಾರ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬಗ್ಗೆ ಎಸ್ ಟಿಎಫ್ ವರದಿಯಿಂದ ತಿಳಿದು ಬಂದಿದೆ.

ಮಧ್ಯಪ್ರದೇಶದ ವೃತ್ತಿಶಿಕ್ಷಣ ಪರೀಕ್ಷೆ ನೇಮಕಾತಿ ಹಗರಣದ ಪ್ರಮುಖ ಸಾಕ್ಷಿದಾರನಾಗಿದ್ದ ಸಂಜಯ್ ಯಾದವ್ ಅವರು ಎರಡು ತಿಂಗಳ ಹಿಂದೆಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

Vyapam Scam

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಯಾದವ್ ಗೆ ಎಸ್ ಟಿಎಫ್ ಸಮನ್ಸ್ ಜಾರಿ ಮಾಡಲಾಗಿತ್ತು. ಅದರೆ, ಉತ್ತರವೂ ಸಿಗಲಿಲ್ಲ, ಸಂಜಯ್ ಕೂಡಾ ಬದುಕಿಲ್ಲ. ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಸಂಜಯ್ ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಲಾಗಿದೆ.

ಮಧ್ಯಪ್ರದೇಶದ ರಾಜ್ಯಪಾಲ ರಾಮ್‌ ನರೇಶ್‌ ಯಾದವ್‌ ಹಾಗೂ ಮಾಜಿ ವಿಶೇಷ ಶಿಕ್ಷಣಾಧಿಕಾರಿ ಧನರಾಜ್ ಯಾದವ್ ಅವರಿಗೆ ಆಪ್ತನಾಗಿದ್ದ ಸಂಜಯ್ ಯಾದವ್ ವಿಚಾರಣೆ ನಡೆಸಿದರೆ ಸತ್ಯ ಹೊರ ಬೀಳುವ ಸಾಧ್ಯತೆಯಿತ್ತು.

ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್, ಪೊಲೀಸ್ ಅಕಾಡೆಮಿಯಿಂದ ಮೂವರು ಪೇದೆಗಳು ಪರಾರಿಯಾಗಿದ್ದ ಪ್ರಕರಣದ ಸಾಕ್ಷಿಯಾಗಿದ್ದರು. ಒಟ್ಟಾರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿರುವವರ ಸಂಖ್ಯೆ 48ದಾಟಿದೆ.

ಈ ಪ್ರಕರಣದ ವಿಚಾರಣೆಗಾಗಿ 2,000ಕ್ಕೂ ಅಧಿಕ ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ವಿಪಕ್ಷಗಳ ಒತ್ತಡಕ್ಕೆ ಮಣಿದು ಸಿಬಿಐ ತನಿಖೆಗೆ ವಹಿಸಲು ಸಿದ್ಧ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಘೋಷಿಸಿದ್ದಾರೆ. ಅದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ಈ ನಡುವೆ 19 ವರ್ಷದ ಮೆಡಿಕಲ್ ವಿದ್ಯಾರ್ಥಿನಿ ನಮ್ರತಾ ದಮೋರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಆತ್ಮಹತ್ಯೆ ಅಥವಾ ಸಹಜ ಸಾವಲ್ಲ, ಕೊಲೆ ಎಂದು ಅಟಾಪ್ಸಿ ವರದಿಯಿಂದ ತಿಳಿದು ಬಂದಿದೆ ಎಂದು ವೈದ್ಯಾಧಿಕಾರಿ ಬಿಬಿ ಪುರೋಹಿತ್ ಹೇಳಿದ್ದಾರೆ.

ಮಧ್ಯಪ್ರದೇಶ ವೃತ್ತಿ ಪರೀಕ್ಷಾ ಮಂಡಳಿ (ಎಂಪಿಪಿಇಬಿ) ಹಗರಣ (ವ್ಯಾಪಂ ಹಗರಣ) ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು ಎಂಬುದಾಗಿ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮಧ್ಯ ಪ್ರದೇಶ ಹೈಕೋರ್ಟ್ ಜುಲೈ 20ಕ್ಕೆ ಮುಂದೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 9ರಂದು ಕೈಗೆತ್ತಿಕೊಂಡಿದೆ.

English summary
In a shocking report by the Special Task Force (STF) to a court in Madhya Pradesh, it was revealed that a witness who was to appear as a witness in the Vyapam Scam had died two months ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X