Vodafone Network: ವಿವಿಧ ನಗರಗಳಲ್ಲಿ Vi ಬಳಕೆದಾರರಿಗೆ ನೆಟ್‌ವರ್ಕ್ ಸಮಸ್ಯೆ..ಆಕ್ರೋಶ
Vodafone Network Issue: ಭಾರತದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಹಾಗೂ ಹೆಚ್ಚಿನ ಸಂಖ್ಯೆ ಬಳಕೆದಾರರನ್ನು ಹೊಂದಿರುವ ವಡಾಫೋನ್ ಕಂಪನಿ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ದಿಢೀರ್ ಇಂಟರ್‌ನೆಟ್ ಸಿಗದೇ ಬಳಕೆದಾರರು ಪರದಾಡಿದರು. ಕೆಲ ಕಾಲ ಕರೆಗಳು ಹೋಗದೇ, ಡಿಜಿಟಲ್ ಪೇಮೆಂಟ್ ಆಗದೇ ಸಿಮ್ ಕಂಪನಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ದೇಶದ ದೆಹಲಿ, ಮುಂಬೈ ಹಾಗೂ ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ವೊಡಾಫೋನ್ ಐಡಿಯಾ ಅಲಿಯಾಸ್ 'ವಿ' ಬಳಕೆದಾರಿಗೆ ನೆಟ್ ವರ್ಕ್ ಕಿರಿ ಕಿರಿ ಉಂಟಾಗಿದೆ. ಹಠಾತ್‌ನೆ ಇಂಟರ್‌ನೆಟ್ ಕಡಿತ ಎದುರಿಸಿದರು. ಅನೇಕರ ಮೊಬೈಲ್ ನಲ್ಲಿದ್ದ ಸಿಮ್ ಇದಿಯೋ ಇಲ್ಲವೆನೋ ಎಂಬಂತಾಗಿತ್ತು. ಕಾರಣ, ಒಂದು ಎಳೆ ಸಿಗ್ನಲ್ ಸಹ ಸಿಕ್ಕಿರಲಿಲ್ಲ. ಸರಿಯಾಗಿ ಸಿಗ್ನಲ್ ಸಿಗದ ಕಾರಣ ಸಂದೇಶ ಕಳುಹಿಸಲು, ಕರೆ ಮಾಡಲು ಸಮಸ್ಯೆ ಆಗಿದೆ ಎಂದು ವರದಿ ಆಗಿದೆ.

ರಿಚಾರ್ಜ್ ಪ್ಯಾಕ್ ಇದ್ದರೂ ಸಹಿತ ಮೊಬೈಲ್ ಡೇಟಾವನ್ನು ಬಳಸಲು ಸಾಧ್ಯವಾಗಲಿಲ್ಲ. ಕೆಲವು ವೈಫೈ, ಹಾಟ್ ಸ್ಟಾಟ್ ಮೂಲಕ ತುರ್ತು ಅಗತ್ಯತೆ ಪೂರೈಸಿಕೊಂಡಿದ್ದಾರೆ. ಇಂದು ಬೆಳಗಿನ ಜಾವ 12.30 ರ ನಂತರ ಪ್ರಾರಂಭವಾಯಿತು ಈ ನೆಟ್‌ವರ್ಕ್ ಅಡಚಣೆ ಉಂಟಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಬಳಕೆದಾರರು ಇಂತಹ ಕಿರಿ ಕಿರಿ ಎದುರಿಸಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಬಳಕೆದಾರರಿಗೂ ಒಂದೇ ತೆರನಾದ ಅನುಭವ, ಸಮಸ್ಯೆ ಆಗಿದೆ.
ವಿಐ (ವಡಾಫೋನ್ ಐಡಿಯಾ) ಕಂಪನಿಯು ತಾಂತ್ರಿಕ ಕಾರಣದಿಂದ ಹೀಗಾಗಿತ್ತು. ನಂತರ ಸರಿಪಡಿಸಲಾಗಿದೆ ಎಂದು ತಿಳಿಸಿದೆ ಇಂದು ಬೆಳಗ್ಗೆ ತಿಳಿಸಿದೆ. ಅನೇಕ ಸಿಮ್ ಬಳಕೆದಾರರು ದೂರುಗಳನ್ನು ದಾಖಲಿಸಿದ್ದಾರೆ. ತಮಗಾದ ಸಮಸ್ಯೆ ಹೇಳಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಸುಮಾರು 1,940 ಕ್ಕೂ ಹೆಚ್ಚು ದೂರುಗಳು ಕೇಳಿ ಬಂದಿವೆ ಎಂದು ತಿಳಿದು ಬಂದಿದೆ.
ದೇಶದ ಒಟ್ಟು ವಡಾಫೋನ್ ಬಳಕೆದಾರರ ಪೈಕಿ ಶೇಕಡಾ 71 ರಷ್ಟು ಬಳಕೆದಾರರಿಗೆ ಈ ಸಮಸ್ಯೆ ಆಗಿದೆ. ಅಷ್ಟು ಪ್ರಮಾಣದ ಬಳಕೆದಾರರು ತಮಗೆ ಆದ ನೆಟ್ ವರ್ಕ್ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಶೇ.21 ರಷ್ಟು ಮಂದಿ ಸಂಪೂರ್ಣ ನೆಟ್‌ವರ್ಕ್ ಬ್ಲಾಕೌಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಪೈಕಿ ಗುರಂಗಾವ್, ನೊಯ್ಡಾ, ನವದೆಹಲಿ, ಪುಣೆ, ಮುಂಬೈನಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದೆ.
ವಿಐ ಸಿಮ್ ಬಳಕೆದಾರರು ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ನೆಟ್ ವರ್ಕ್ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಆಗ್ರಹಿಸಿದ್ದಾರೆ. ವೊಡಾಫೋನ್ ಐಡಿಯಾ ಬಗ್ಗೆ ನನಗೆ ಬೇಸರವಿದೆ. ಕನಿಷ್ಠ 5G ವೆಚ್ಚದಲ್ಲಿ 2G ನೆಟ್‌ವರ್ಕ್ ಸೇವೆಯಾದರೂ ನೀಡಬೇಕು ಎಂದಿದ್ದಾರೆ.












Click it and Unblock the Notifications