Putin India Visit: ರಾಷ್ಟ್ರಪತಿ ಭವನದಲ್ಲಿ ಭರ್ಜರಿ ಡಿನ್ನರ್, ರಷ್ಯಾಗೆ ವಾಪಸ್ ತೆರಳಿದ ವ್ಲಾದಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿ ಇಡೀ ಪ್ರಪಂಚದ ಗಮನ ಸೆಳೆದಿದ್ದು, ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಜಾಗತಿಕ ಮಟ್ಟದಲ್ಲಿ ಬರೀ ಯುದ್ಧ ಹಾಗೂ ಹಿಂಸಾಚಾರದ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲೇ ರಷ್ಯಾ ಮತ್ತು ಭಾರತವು ಮಾತ್ರ ಶಾಂತಿ ಮಾರ್ಗದ ಚರ್ಚೆ ನಡೆಸಿವೆ. ಅದರಲ್ಲೂ ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತದ ನೆಲಕ್ಕೆ ಬಂದು ಮಹತ್ವದ ಚರ್ಚೆ ನಡೆಸುವ ಜೊತೆಗೆ ಹಲವು ಮಹತ್ವದ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಹೀಗೆ ಎಲ್ಲವನ್ನೂ ಮುಗಿಸಿ ಇದೀಗ ರಷ್ಯಾಗೆ ವಾಪಸ್ ತೆರಳಿದ್ದಾರೆ ವ್ಲಾದಿಮಿರ್ ಪುಟಿನ್.
ಭಾರತ ಈಗ ಜಾಗತಿಕವಾಗಿ ಶಕ್ತಿಯುತ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ಪ್ರಪಂಚದಲ್ಲಿ ಭಾರತ ಇಲ್ಲದೆ ನಡೆಯುವ ವ್ಯಾಪಾರ & ವ್ಯವಹಾರ ಇಲ್ಲ ಎನ್ನುವ ಸ್ಥಿತಿ ಇದೆ. ಅದರಲ್ಲೂ ರಷ್ಯಾ ಎಂಬ ದೈತ್ಯ ದೇಶಕ್ಕೆ ಕೂಡ ಭಾರತ ಎಂಬ ಪ್ರಾಣ ಸ್ನೇಹಿತ ಬೇಕೆ ಬೇಕು. ಹೀಗಿದ್ದಾಗ ಉಕ್ರೇನ್ ಯುದ್ಧ ವಿಚಾರ ಮುಂದೆ ಇಟ್ಟುಕೊಂಡು ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಹಾಳು ಮಾಡೋಕೆ ಪಾಶ್ಚಿಮಾತ್ಯ ದೇಶಗಳು ಸೇರಿದಂತೆ, ಭಾರತದ ಶತ್ರು ರಾಷ್ಟ್ರಗಳು ಪದೇ ಪದೇ ಪ್ರಯತ್ನ ಮಾಡುತ್ತಾ ಇದ್ದವು. ಆದರೆ ಇಂತಹ ಯಾವುದೇ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂಬ ಉತ್ತರವನ್ನು ಇದೀಗ ಭಾರತ ನೀಡಿದೆ. ಅಲ್ಲದೆ ಖುದ್ದು ಪುಟಿನ್ ಇದೀಗ ಮತ್ತೊಮ್ಮೆ ಪಾಶ್ಚಿಮಾತ್ಯ ದೇಶಗಳಿಗೆ ಸಂದೇಶ ಒಂದನ್ನು ರವಾನಿಸಿದ್ದಾರೆ.

ಭಾರತ & ರಷ್ಯಾ ನಾಯಕರ ಚರ್ಚೆ
ಪ್ರಮುಖವಾಗಿ ರಕ್ಷಣಾ ಕ್ಷೇತ್ರ ಹಾಗೂ ಇಂಧನ ಪೂರೈಕೆ ವಿಚಾರವಾಗಿ ಹಲವು ಸುತ್ತಿನ ಚರ್ಚೆಗಳೂ ನಡೆದಿವೆ. ಭಾರತಕ್ಕೆ ಈ ವಿಚಾರದಲ್ಲಿ ರಷ್ಯಾ ಸಹಾಯ ಬೇಕು ಮತ್ತು ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾಗೆ ಈಗ ಭಾರತದ ಬೆಂಬಲ ಬೇಕೆ ಬೇಕಾಗಿದೆ. ಹೀಗಿದ್ದಾಗ ಇಂದು ರಷ್ಯಾದ ಅಧ್ಯಕ್ಷರು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಅಲ್ಲದೆ ಭಾರತ ಮತ್ತು ರಷ್ಯಾದ ಸಂಬಂಧ ಗಟ್ಟಿ ಮಾಡುವ ಘಟನೆಗಳು ಕೂಡ ನಡೆದವು. ಇದೆಲ್ಲಾ ಮುಗಿದ ನಂತರ ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಉಭಯ ದೇಶಗಳ ನಾಯಕರು ಈ ವೇಳೆ ಭೋಜನ ಸವಿದರು. ನಂತರ ವ್ಲಾದಿಮಿರ್ ಪುಟಿನ್ ಅವರು ತಮ್ಮ ವಿಶೇಷ ವಿಮಾನ ಏರಿ ರಷ್ಯಾ ಕಡೆಗೆ ತೆರಳಿದರು. ವಿದೇಶಾಂಗ ಸಚಿವರಾದ ಜೈಶಂಕರ್ ಪುಟಿನ್ ಅವರನ್ನು ಬೀಳ್ಕೊಟ್ಟರು.
ಪಾಪಿ ಪಾಕಿಸ್ತಾನಕ್ಕೆ ಶುರುವಾಯ್ತು ಭಯ!
ಒಟ್ನಲ್ಲಿ ಭಾರತದ ಶತ್ರು ದೇಶಗಳು, ಅದರಲ್ಲೂ ಅಕ್ಕಪಕ್ಕ ಇರುವ ಶತ್ರು ದೇಶಗಳಿಗೆ ಈಗ ನಿದ್ದೆ ಬಂದಿಲ್ಲ. ಯಾಕಂದ್ರೆ ರಷ್ಯಾ ಅಧ್ಯಕ್ಷರು ಭಾರತದ ಜೊತೆಗೆ ಮಾಡಿಕೊಳ್ಳುತ್ತಿರುವ ಪ್ರಮುಖವಾದ ಒಪ್ಪಂದಗಳು ಟೆನ್ಷನ್ ಜಾಸ್ತಿ ಮಾಡುತ್ತಿದೆ. ಮತ್ತೊಂದು ಕಡೆ ಪಾಕಿಸ್ತಾನದ ನಾಯಕರು ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದಗಳಿಂದ ಸಿಕ್ಕಾಪಟ್ಟೆ ಆಘಾತಕ್ಕೆ ಒಳಗಾಗಿದ್ದು, ಮುಂದೆ ಇದು ತಮ್ಮ ಬುಡಕ್ಕೆ ಬರುತ್ತೆ ಅನ್ನೋದನ್ನ ಈಗಲೇ ಕಂಡುಕೊಂಡಿದ್ದಾರೆ. ಹೀಗಾಗಿಯೇ ಪಾಪಿ ಪಾಕಿಸ್ತಾನ ಈಗ ಭಾರತದಲ್ಲಿ ಏನಾಗುತ್ತಿದೆ? ಎಂಬುದನ್ನ ನಿದ್ದೆ ಬಿಟ್ಟು ನೋಡುವಂತೆ ಆಗಿದೆ!












Click it and Unblock the Notifications