ಇದು ಕಣ್ಣು ಕಾಣದಿದ್ದರೂ ಸ್ಪರ್ಶದಿಂದಲೇ ದೇವರ ಮೂರ್ತಿ ಕೆತ್ತುವ ಅಂಧ ಕಲಾವಿದ ರಾಮ್ ಪಾಲ್ ಯಶೋಗಾಥೆ

ಹೆಚ್ಚಿನ ಜನರು ತಮ್ಮ ಎಲ್ಲ ಅಗಾಂಗಗಳು ಸರಿ ಇದ್ದರೂ ಕೂಡ ಕೆಲಸ ಕಾರ್ಯ ಮಾಡದೇ ಕಾಲ ಕಳೆಯುತ್ತಾರೆ. ಇನ್ನೂ ಈ ಕಲೆಗೆ ಕಣ್ಣುಗಳಿಗಿಂತ ಹೆಚ್ಚಾಗಿ ಮನಸ್ಸಿನ ಏಕಾಗ್ರತೆ ಮತ್ತು ಕೈಚಳಕ ಮುಖ್ಯ ಎಂಬುದನ್ನ ಪಶ್ಚಿಮ ಬಂಗಾಳದ 50 ವರ್ಷದ ಅಂಧ ಮೂರ್ತಿಕಾರ ರಾಮ್ ಪಾಲ್ ಅವರು ಸಾಬೀತುಪಡಿಸಿದ್ದಾರೆ.

ಜಗತ್ತಿನ ಸೌಂದರ್ಯವನ್ನ ಕಣ್ಣಿನಿಂದ ನೋಡಲಾಗದಿದ್ದರೂ, ತಮ್ಮ ಸ್ಪರ್ಶದ ಮೂಲಕವೇ ಅತ್ಯಂತ ಸುಂದರವಾದ ಹಾಗೂ ಭಕ್ತಿಭಾವವನ್ನ ಹೆಚ್ಚಿಸುವಂತಹ ದೇವತೆಗಳ ಮಣ್ಣಿನ ಮೂರ್ತಿಗಳನ್ನ ರಚಿಸುವ ಇವರ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಎನ್ನಬಹುದು.

Visually Impaired Sculptor Ram Pal Crafts Lifelike Ganesha Idols Using Only His Sense Of Touch

ಹುಟ್ಟಿನಿಂದಲೇ ಅಂಧರಾದರೂ ಒಲಿದುಬಂದ ಪಾರಂಪರಿಕ ಕಲೆ

ಪಶ್ಚಿಮ ಬಂಗಾಳದ ನವಾದಿಹ ಎಂಬ ಪುಟ್ಟ ಗ್ರಾಮದವರಾದ ರಾಮ್ ಪಾಲ್ ಅವರು ಕರಕುಶಲಕರ್ಮಿಗಳ ಕುಟುಂಬದ ಹಿನ್ನೆಲೆಯಿಂದ ಬಂದವರು. ಹುಟ್ಟಿನಿಂದಲೇ ಅಂಧತ್ವವನ್ನ ಹೊಂದಿರುವ ಇವರಿಗೆ ಜಗತ್ತು ಕತ್ತಲೆಯಾಗಿ ಕಂಡರೂ, ಅವರೊಳಗಿನ ಕಲಾಭಿಮಾನ ಎಂದಿಗೂ ಕುಗ್ಗಲಿಲ್ಲ.

ತಮ್ಮ ತಂದೆಯೊಂದಿಗೆ ಕುಳಿತು ಮಣ್ಣಿನ ಕೆಲಸವನ್ನ ಕಲಿಯಲಾರಂಭಿಸಿದ ಇವರು, ಕ್ರಮೇಣ ಅದನ್ನೇ ತಮ್ಮ ಉಸಿರಾಗಿಸಿಕೊಂಡರು. ದೃಷ್ಟಿಯಿಲ್ಲದಿದ್ದರೂ, ಮಣ್ಣಿಗೆ ಆಕಾರ ನೀಡುವ ಅವರ ಕೌಶಲ್ಯ ಎಂಥವರನ್ನೂ ಬೆರಗುಗೊಳಿಸುವಂತಿದೆ.

ಸ್ಪರ್ಶ ಜ್ಞಾನದಿಂದಲೇ ಜೀವಕಳೆ ತುಂಬುವ ಗಣೇಶನ ಮೂರ್ತಿ

ರಾಮ್ ಪಾಲ್ ಅವರಿಗೆ ಮಣ್ಣು ಕಣ್ಣಿಗೆ ಕಾಣುವುದಿಲ್ಲ, ಆದರೆ ಮಣ್ಣಿನ ಪ್ರತಿಯೊಂದು ಅಣುವೂ ಅವರ ಬೆರಳುಗಳಿಗೆ ಸ್ಪರ್ಶಿಸುತ್ತದೆ. ಮೂರ್ತಿಯ ಪ್ರತಿಯೊಂದು ವಕ್ರತೆ, ಅಳತೆ ಮತ್ತು ರೂಪುರೇಷೆಗಳನ್ನ ಕೇವಲ ತಮ್ಮ ಬೆರಳುಗಳ ಸ್ಪರ್ಶದಿಂದಲೇ ಅಳೆದು, ಅದಕ್ಕೆ ಜೀವಕಳೆ ತುಂಬುತ್ತಾರೆ. ಅವರು ರಚಿಸುವ ಭಗವಾನ್ ಗಣೇಶನ ಮೂರ್ತಿ ಹಾಗೂ ದುರ್ಗಾ ಮಾತೆಯ ಮೂರ್ತಿಗಳು ಎಷ್ಟು ಅದ್ಭುತವಾಗಿರುತ್ತವೆ ಎಂದರೆ, ನೋಡುವವರಿಗೆ ಅವು ಸಾಕ್ಷಾತ್ ದೇವರೆ ಭೂಮಿಗೆ ಇಳಿದು ಬಂದಂತೆ ಭಾಸವಾಗುತ್ತವೆ.

ಸ್ಥಳೀಯರ ಪ್ರಕಾರ, ಅವರು ಮಾಡುವ ಮೂರ್ತಿಗಳು ಅತ್ಯಂತ ಜೀವಂತವಾಗಿ ಕಾಣುತ್ತವೆ. ಕಣ್ಣಿಲ್ಲದ ಕಲಾವಿದನ ಭಕ್ತಿಪೂರ್ವಕ ಕೈಚಳಕದಿಂದ ಮೂಡಿಬರುವ ಈ ಮೂರ್ತಿಗಳು ಭಕ್ತರ ಪಾಲಿಗೂ ವಿಶೇಷವಾದ ಆಧ್ಯಾತ್ಮಿಕ ಮಹತ್ವವನ್ನ ಪಡೆದುಕೊಂಡಿವೆ.

ಉತ್ತರ ಪ್ರದೇಶದಲ್ಲಿ 25 ವರ್ಷಗಳ ಸುದೀರ್ಘ ಪಯಣ

ಕಳೆದ 25 ವರ್ಷಗಳಿಂದ ರಾಮ್ ಪಾಲ್ ಮತ್ತು ಅವರ ಕುಟುಂಬದ ದಿನಚರಿ ಒಂದು ರೀತಿ ಸುಂದರವಾಗಿದೆ. ಪಶ್ಚಿಮ ಬಂಗಾಳದಿಂದ ಹೊರಡುವ ಇವರು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಬಾಬುರ್ಹಾವಾ ಎಂಬ ಹಳ್ಳಿಗೆ ಪ್ರತಿ ವರ್ಷವೂ ಆಗಮಿಸುತ್ತಾರೆ.

ದಸರಾ ಹಬ್ಬಕ್ಕೂ ಮುನ್ನ ಸುಮಾರು ಆರು ತಿಂಗಳ ಕಾಲ ಇವರು ಅಲ್ಲಿಯೇ ನೆಲೆಸುತ್ತಾರೆ. ತಮ್ಮ ಕುಟುಂಬದ ಸದಸ್ಯರ ಬೆಂಬಲದೊಂದಿಗೆ, ಪ್ರತಿ ವರ್ಷ ಸುಮಾರು 40 ರಿಂದ 50 ಸುಂದರವಾದ ಮೂರ್ತಿಗಳನ್ನ ಸಿದ್ಧಪಡಿಸುತ್ತಾರೆ.

ಪರಿಶ್ರಮ ಮತ್ತು ಛಲಕ್ಕೆ ಸಾಕ್ಷಿಯಾದ ಸ್ಫೂರ್ತಿದಾಯಕ ಬದುಕು

ರಾಮ್ ಪಾಲ್ ಅವರ ಜೀವನ ನಮಗೆ ದೊಡ್ಡ ಪಾಠವನ್ನ ಕಲಿಸುತ್ತದೆ. ಎನ್ನನ್ನಾದರೂ ಒಳ್ಳೆಯ ಕೆಲಸ ಮಾಡಲು ಕಣ್ಣುಗಳೇ ಬೇಕಿಲ್ಲ, ಎಲ್ಲವೂ ಪರಿಪೂರ್ಣವಾಗಿರಬೇಕೆಂಬ ನಿಯಮವೂ ಇಲ್ಲ. ಸತತ 25 ವರ್ಷಗಳ ಕಾಲ, ಕೇವಲ ತಮ್ಮ ಕೌಶಲ್ಯದ ಮೇಲಿನ ನಂಬಿಕೆ ಮತ್ತು ಕಲೆಯ ಮೇಲಿನ ಪ್ರೀತಿಯಿಂದ ಅವರು ನಿರಂತರವಾಗಿ ಕೆಲಸ ಮಾಡಿದ್ದಾರೆ.

ವಿಶ್ವಾಸ ಮತ್ತು ಜನಪ್ರಿಯತೆ ಎಂಬುದು ರಾತ್ರೋರಾತ್ರಿ ಸಿಗುವಂಥದ್ದಲ್ಲ. ಬದಲಾಗಿ ಅದು ವರ್ಷಗಳ ಸತತ ಪರಿಶ್ರಮದಿಂದ ಒಲಿಯುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+