Nuh Shobha Yatra: ನುಹ್‌ಗೆ ತೆರಳುವ ಮುನ್ನ ವಿಶ್ವ ಹಿಂದೂ ತಖ್ತ್ ಮುಖ್ಯಸ್ಥನ ಬಂಧನ
ನವದೆಹಲಿ, ಆಗಸ್ಟ್ 28: ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆಯುತ್ತಿದ್ದ 'ಶೋಭಾ ಯಾತ್ರೆ'ಯಲ್ಲಿ ಭಾಗವಹಿಸಲು ತೆರಳುತ್ತಿದ್ದ ವಿಶ್ವ ಹಿಂದೂ ತಖ್ತ್ (VHT) ಮುಖ್ಯಸ್ಥ ವೀರೇಶ್ ಶಾಂಡಿಲ್ಯ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸೆಕ್ಟರ್ 1 ರ ಅವರ ನಿವಾಸದಲ್ಲಿ ಗೃಹಬಂಧನ ದಲ್ಲಿ ಇರಿಸಲಾಗಿದೆ ಎಂದು ಎಸ್.ಪಿ.ಜಶನ್‌ದೀಪ್ ಸಿಂಗ್ ರಾಂಧವಾ ತಿಳಿಸಿದ್ದಾರೆ.
ಹರಿಯಾಣ ರಾಜ್ಯದ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರೂ ಸಹ ನುಹ್ ಜಿಲ್ಲೆಯಲ್ಲಿ ಸೋಮವಾರ 'ಸರ್ವ್ ರಾಷ್ಟ್ರೀಯ ಹಿಂದೂ ಮಹಾಪಂಚಾಯತ್ 'ಶೋಭಾ ಯಾತ್ರೆ'ಗೆ ಕರೆ ನೀಡಿತ್ತು. ಹೀಗಾಗಿ ಹರಿಯಾಣದಲ್ಲಿ ಭಾರೀ ಪೊಲೀಸ್ ಭದ್ರತಾ ನೀಡಿ ಹೈ ಅಲರ್ಟ್ ಘೋಷಿಸಲಾಗಿದೆ. ಕಳೆದ ತಿಂಗಳು ಇದೇ ಪ್ರದೇಶದಲ್ಲಿ ಕೋಮು ಘರ್ಷಣೆ ನಡೆದು ಉದ್ವಿಗ್ನ ಸ್ಥಿತಿ ಇತ್ತು.

ಸರ್ಕಾರ ಶೋಭಾ ಯಾತ್ರೆಗೆ ಅವಕಾಶ ನೀಡದ ನಿರ್ಧಾರವನ್ನು ಭಾನುವಾರ ಬಂಧಿತ ಶಾಂಡಿಲ್ಯ ಅವರು ಕಟುವಾಗಿ ಟೀಕಿಸಿದ್ದರು. ಈ ಮಧ್ಯೆ ನುಹ್ ಜಿಲ್ಲಾಡಳಿತ ನಿಷೇಧಾಜ್ಞೆ (ಸೆಕ್ಷನ್ 144) ವಿಧಿಸಿತ್ತು. ಇನ್ನೂ ಜಿಲ್ಲೆಯಲ್ಲಿ ಗುಂಪು ಗುಂಪಾಗಿ ಓಡಾಡದಂತೆ ಪೊಲೀಸರು ಸೂಚಿಸಿದ್ದರು.
ನಿಷೇಧಾಜ್ಞೆ ಹೇರಿಕೆ ಬಳಿಕ ಜಿಲ್ಲೆಯ ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ ಎಂದು ನುಹ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಧಿಕಾರಿಗಳು ತಿಳಿಸಿದರು.
ನುಹ್ ಶೋಭಾ ಯಾತ್ರೆಯ ಮುಖ್ಯಾಂಶಗಳು
* ಜಿಲ್ಲೆಯಲ್ಲಿ ಕಳೆದ ತಿಂಗಳ ಜುಲೈನಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ನಂತರ ಆಗಸ್ಟ್ 28 ರಂದು ನುಹ್‌ನಲ್ಲಿ ಶೋಭಾ ಯಾತ್ರೆ ನಡೆಸಲು 'ಸರ್ವ್ ರಾಷ್ಟ್ರೀಯ ಹಿಂದೂ ಮಹಾಪಂಚಾಯತ್' ಕಳೆದ ಆಗಸ್ಟ್ 13 ರಂದೇ ಕರೆ ನೀಡಿತ್ತು.
ಆದರೆ ಜನರ ಹಿತದೃಷ್ಟಿ ಮತ್ತು ಕಾನೂನು ಸುವ್ಯವಸ್ಥೆ ರಕ್ಷಣೆ ಸಂಬಂಧ ಯಾತ್ರೆ ಸರ್ಕಾರ ಅನುಮತಿ ನೀಡಲಿಲ್ಲ.
* ನೆನ್ನೆ ಭಾನುವಾರ ಪಂಚಕುಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕಳೆದ ತಿಂಗಳು ಯಾತ್ರೆ ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಆಗಿದ್ದರಿಂದ ಯಾತ್ರೆಗೆ ಅನುಮತಿಸುವುದಿಲ್ಲ ಎಂದು ಹೇಳಿದರು.

* ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ (VHP) ಮುಖ್ಯಸ್ಥರು ನುಹ್ ನ ಬ್ರಜ್ ಮಂಡಲ್ ಶೋಬಾ ಯಾತ್ರೆಯನ್ನು ಶಾಂತಿಯುತವಾಗಿ ನಡೆಸುತ್ತೇವೆ ಎಂದು ಹೇಳಿದರು. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಪರಿಷತ್ ನಾಯಕ ಅಲೋಕ್ ಕುಮಾರ್ ಭಾನುವಾರ ತಿಳಿಸಿದ್ದರು.
* ಜಿ 20 ಸಭೆ ಪ್ರಾರಂಭವಾಗಲಿದೆ ಎಂಬುದು ತಿಳಿದಿದೆ. ಆದ್ದರಿಂದ ನಾವು ಯಾತ್ರೆಯನ್ನು ಮೊಟಕುಗೊಳಿಸುತ್ತೇವೆ ಹೊರತು ನಡೆಸುವುದನ್ನು ಬಿಡುವುದಿಲ್ಲ. ನಾನು ಕೂಡ ಅದರಲ್ಲಿ ಪಾಲ್ಗೊಳ್ಳುತ್ತೇನೆ. ಜನರು ತಮ್ಮ ಧಾರ್ಮಿಕ ಕಾರ್ಯಕ್ರಮಗಳ ಶಾಂತಿಯುತ ಆಚರಣೆಗೆ, ಆಯೋಜನೆ ಮಾಡಬಹುದಾಗಿದ್ದು,ಕಾನೂನು - ಸುವ್ಯವಸ್ಥೆ ರಕ್ಷಣೆಗೆ ಸರ್ಕಾರ ಇದೆ ಎಂದು ವಿಎಚ್‌ಪಿ ನಾಯಕ ಹೇಳಿದರು.
* ಸದ್ಯ ನುಹ್ ಜಿಲ್ಲೆಯಲ್ಲಿ 1,900 ಪೊಲೀಸ್ ಸಿಬ್ಬಂದಿ ಮತ್ತು 24 ಅರೆಸೈನಿಕ ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಪ್ರವೇಶ ದ್ವಾರ ಬಂದ್ ಮಾಡಲಾಗಿದೆ. ಮಲ್ಹಾರ್ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಸಹ ಮುಚ್ಚಲಾಗಿದೆ.ಕೆಎಂಪಿ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಎಂದಿನಂತೆ ವಾಹನ ಓಡಾಟ ಇರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
* ಹರಿಯಾಣ ಸರ್ಕಾರ ಆಗಸ್ಟ್ 26 ರಿಂದ 28 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆ ಬಂದ್ ಮಾಡಿಸಿದೆ.
* ನೂಹ್ ಉಪ ಆಯುಕ್ತ ಧೀರೇಂದ್ರ ಖಡ್ಗಟಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜರ್ನಿಯಾ ಅವರು ಯಾತ್ರೆಯ ದೃಷ್ಟಿಯಿಂದ ಶನಿವಾರವೇ ಸಂಬಂಧಪಟ್ಟವರ ಜೊತೆಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಪೊಲೀಸ್ ಮುಖ್ಯಸ್ಥ ಕಪೂರ್, ಪಂಜಾಬ್, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳ ಪಾಲ್ಗೊಂಡಿದ್ದರು.
* ಜುಲೈ 31 ರಂದು ನುಹ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ (VHP) ವತಿಯಿಂದ ಧಾರ್ಮಿಕ ಮೆರವಣಿಗೆ ನಡೆದಿತ್ತು. ಆಗ ದುಷ್ಕರ್ಮಿಗಳು ಕಲ್ಲು ತೂರಿ ದಾಳಿ ನಡೆಸಿದ್ದರು. ಖಾಸಗಿ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕರು ಮತ್ತು ಧರ್ಮಗುರು ಸೇರಿ 6 ಮಂದಿ ಸಾವನ್ನಪ್ಪಿದ್ದರು. ಕೋಮು ಸಂಘರ್ಷ ಉಂಟಾಗಿ ಇಡಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.












Click it and Unblock the Notifications