ವಿರಾಟ್ ಕೊಹ್ಲಿ ತಿಂದ ಚೋಲೆ ಭಟೂರೆ: ಅನುಷ್ಕಾ ಶರ್ಮಾ ಹಾಕಿದ ಒಂದೇ ಒಂದು ಪೋಸ್ಟ್‌ಗೆ ಕೋಟ್ಯಾಧಿಪತಿಯಾದ ವ್ಯಾಪಾರಿ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಹಾಗೂ ಸೆಲೆಬ್ರಿಟಿಗಳ ಒಂದು ಸಣ್ಣ ಮೆಚ್ಚುಗೆ ಸಾಮಾನ್ಯರ ಬದುಕನ್ನ ಹೇಗೆಲ್ಲಾ ಬದಲಾಯಿಸುತ್ತದೆ ಎಂಬುದಕ್ಕೆ ಮುಂಬೈನ ಈ ಘಟನೆಯೇ ಸಾಕ್ಷಿ. ಕೇವಲ ಒಂದು ಪ್ಲೇಟ್ ಚೋಲೆ ಭಟೂರೆ, ಒಂದು ಪುಟ್ಟ ಅಂಗಡಿಯ ಹಣೆಬರಹವನ್ನೇ ಬದಲಾಯಿಸಿದೆ.
ಹೌದು, ನಾವು ಹೇಳುತ್ತಿರುವುದು ಮುಂಬೈನ ಚೆಂಬೂರ್‌ನಲ್ಲಿರುವ ದಿಲ್ಲಿ ಸೇ ಎಂಬ ಸಣ್ಣ ಚೋಲೆ ಭಟೂರೆ ಅಂಗಡಿಯ ಯಶಸ್ಸಿನ ಕಥೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಒಂದು ನಿರ್ಧಾರ ಈ ಅಂಗಡಿಯ ದಿಕ್ಕನ್ನೇ ಬದಲಾಯಿಸಿದೆ.

ಮುಂಬೈನಲ್ಲಿ ದಿಲ್ಲಿ ರುಚಿ: ವಿರಾಟ್ ಕೊಹ್ಲಿ ಚೋಲೆ ಭಟೂರೆ ಪ್ರೇಮ
ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಚೋಲೆ ಭಟೂರೆ ಎಂದರೆ ಪಂಚಪ್ರಾಣ ಎಂಬುದು ಅವರ ಬಹುತೇಕ ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಮೂಲತಃ ದೆಹಲಿಯವರಾದ ವಿರಾಟ್‌ಗೆ ದೆಹಲಿಯ ಚೋಲೆ ಭಟೂರೆ ರುಚಿ ಬಲು ಇಷ್ಟ. ಆದರೆ ಮುಂಬೈನಲ್ಲಿ ನೆಲೆಸಿದ ಮೇಲೆ ಅವರಿಗೆ ಆ ಅಸಲಿ ರುಚಿ ಸಿಗುತ್ತಿರಲಿಲ್ಲ. ಇದೇ ಸಮಯದಲ್ಲಿ ಮುಂಬೈನ ಚೆಂಬೂರ್‌ನಲ್ಲಿರುವ 'ದಿಲ್ಲಿ ಸೇ' ಎಂಬ ಅಂಗಡಿಯ ರುಚಿಯ ಬಗ್ಗೆ ಖ್ಯಾತ ಕಾಮಿಡಿಯನ್ ಒಬ್ಬರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ವಿಷಯ ಹೇಗೋ ನಟಿ ಅನುಷ್ಕಾ ಶರ್ಮಾ ಅವರ ಗಮನಕ್ಕೆ ಬಂದಿತ್ತು. ಪತಿ ವಿರಾಟ್‌ಗೆ ದೆಹಲಿಯ ಚೋಲೆ ಭಟೂರೆ ರುಚಿಯನ್ನ ಉಣಬಡಿಸುವ ಉದ್ದೇಶದಿಂದ ಅನುಷ್ಕಾ ಆ ಅಂಗಡಿಯನ್ನ ಸಂಪರ್ಕಿಸಲು ನಿರ್ಧರಿಸಿದರು.
ದಿಲ್ಲಿ ಸೇ ಚೆಂಬೂರ್: ಅನುಷ್ಕಾ ಶರ್ಮಾ ಆರ್ಡರ್ ಮಾಡಿದಾಗ ಏನಾಯಿತು?
ಅನುಷ್ಕಾ ಶರ್ಮಾ ಅವರು ನೇರವಾಗಿ ಆ ಅಂಗಡಿಗೆ ಕರೆ ಮಾಡಿ, ವಿರಾಟ್ ಕೊಹ್ಲಿಗೆ ನಿಮ್ಮ ಅಂಗಡಿಯ ಚೋಲೆ ಭಟೂರೆ ಬೇಕಾಗಿದೆ ಎಂದು ಆರ್ಡರ್ ಮಾಡಿದರು. ಕರೆ ಸ್ವೀಕರಿಸಿದ ಅಂಗಡಿ ಮಾಲೀಕನಿಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ. "ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ನನ್ನ ಪುಟ್ಟ ಅಂಗಡಿಯ ಚೋಲೆ ಭಟೂರೆ ಏಕೆ ಕೇಳುತ್ತಾರೆ?" ಎಂದು ಆಶ್ಚರ್ಯಚಕಿತರಾದರು.
ಆದರೆ, ಅನುಷ್ಕಾ ನೀಡಿದ ವಿಳಾಸಕ್ಕೆ ಆರ್ಡರ್ ತಲುಪಿಸಿದಾಗ, ಅಲ್ಲಿ ನಿಜವಾಗಿಯೂ ಇದ್ದದ್ದು ವಿರಾಟ್ ಕೊಹ್ಲಿ. ಆ ಚೋಲೆ ಭಟೂರೆ ತಿಂದ ವಿರಾಟ್ ಕೊಹ್ಲಿಗೆ ತಮ್ಮ ದೆಹಲಿಯ ದಿನಗಳು ನೆನಪಾಗಿ, ಆ ರುಚಿಗೆ ಸಂಪೂರ್ಣ ಫಿದಾ ಆದರು.
ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಮ್ ಸ್ಟೋರಿ ತಂದ ಬದಲಾವಣೆ
ವಿರಾಟ್ ಕೊಹ್ಲಿಗೆ ಆ ಚೋಲೆ ಭಟೂರೆ ಇಷ್ಟ ಆದ ನಂತರ, ಪತ್ನಿ ಅನುಷ್ಕಾ ಶರ್ಮಾ ಅವರು ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿ ಹಂಚಿಕೊಂಡರು. ಮುಂಬೈನಲ್ಲಿ ಅತ್ಯುತ್ತಮವಾದ ದೆಹಲಿ ಶೈಲಿಯ ಚೋಲೆ ಭಟೂರೆ ಸಿಗುವ ಸ್ಥಳವನ್ನ ವಿರಾಟ್‌ಗೆ ಪರಿಚಯಿಸಿದ್ದಾಗಿ ಅವರು ಸಂತಸ ಹಂಚಿಕೊಂಡಿದ್ದರು.
ಆ ಒಂದು ಇನ್‌ಸ್ಟಾಗ್ರಾಮ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ, ಮರುದಿನ 'ದಿಲ್ಲಿ ಸೇ' ಅಂಗಡಿಯ ಮುಂದೆ ಕಾಲಿಡಲೂ ಜಾಗವಿಲ್ಲದಷ್ಟು ಜನಸಾಗರವೇ ಹರಿದುಬಂತು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಜನದಟ್ಟಣೆ ನಿಯಂತ್ರಿಸಲು ಪೊಲೀಸರನ್ನೇ ಕರೆಯಿಸಬೇಕಾಯಿತು.
🚨One plate of chole bhature changed the fate of this small shop! 😳
— Bebo (@Itsbebo__) September 30, 2026
There was a small shop in Chembur, Mumbai, called ‘Dilli Se’, where chole bhature was served. One day, a comedian praised their chole bhature, and the story eventually caught Anushka Sharma’s attention.… pic.twitter.com/LtK4rZHvQw
ವೈರಲ್ ಫುಡ್ ಸ್ಟೋರಿ: ಲಕ್ಷಗಳಿಂದ ಕೋಟಿಗೇರಿದ ವ್ಯಾಪಾರ
ಸೆಲೆಬ್ರಿಟಿಗಳ ಒಂದು ಮೆಚ್ಚುಗೆ ವ್ಯಾಪಾರವನ್ನ ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ವರದಿಗಳ ಪ್ರಕಾರ, ಈ ಘಟನೆಗೆ ಮುಂಚೆ ತಿಂಗಳಿಗೆ ಕೇವಲ ಲಕ್ಷಗಳಲ್ಲಿ ವಹಿವಾಟು ನಡೆಸುತ್ತಿದ್ದ ಈ ಅಂಗಡಿಯ ವ್ಯಾಪಾರ, ಇಂದು ಕೋಟಿಗಟ್ಟಲೆ ರೂಪಾಯಿಗೆ ತಲುಪಿದೆ.
ಇಡೀ ಮುಂಬೈ ನಗರಕ್ಕೆ ಈ ಅಂಗಡಿಯ ಹೆಸರು ಪರಿಚಯವಾಗಿದೆ. ಒಂದು ಸಣ್ಣ ಅಂಗಡಿಗೆ ಅಸಾಧ್ಯವಾದ ಜನಪ್ರಿಯತೆಯನ್ನ ತಂದುಕೊಟ್ಟ ಕೀರ್ತಿ ಈ ಸ್ಟಾರ್ ದಂಪತಿಗೆ ಸಲ್ಲುತ್ತದೆ.
ಆದರೆ, ಇಲ್ಲಿ ಕಾಡುವ ಕಟ್ಟ ಕಡೆಯ ಪ್ರಶ್ನೆ ಎಂದರೆ- ಆ ಪುಟ್ಟ ಅಂಗಡಿಗೆ ಇಷ್ಟೊಂದು ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದು ನಿಜಕ್ಕೂ ವಿರಾಟ್ ಕೊಹ್ಲಿಗೆ ಇಷ್ಟವಾದ ಆ ಚೋಲೆ ಭಟೂರೆಯ ರುಚಿಯೋ? ಅಥವಾ ಕೋಟ್ಯಂತರ ಫಾಲೋವರ್ಸ್ ಹೊಂದಿರುವ ಅನುಷ್ಕಾ ಶರ್ಮಾ ಅವರ ಆ ಒಂದು ಇನ್‌ಸ್ಟಾಗ್ರಾಮ್ ಸ್ಟೋರಿಯ ಪ್ರಭಾವವೋ? ರುಚಿ ಹಾಗೂ ಪ್ರಚಾರ ಎರಡೂ ಸೇರಿದಾಗ ಯಶಸ್ಸು ಅದೆಷ್ಟು ದೊಡ್ಡದಾಗಿರುತ್ತದೆ ಎಂಬುದನ್ನಈ ಘಟನೆಯಿಂದ ಸಾಬೀತಾಗಿದೆ ಎನ್ನಬಹುದು.


Click it and Unblock the Notifications
