Video Viral: ಹೊಲದಲ್ಲಿ ಟ್ರ್ಯಾಕ್ಟರ್‌ಗೆ ಎದುರಾಗಿ ನಿಂತು ಮೊಟ್ಟೆ ಕಾಯ್ದ ಹಕ್ಕಿ, ದಯೆ ತೋರಿದ ರೈತ..
ತಾಯಿ ಪ್ರೀತಿ, ವಾತ್ಸಲ್ಯ, ರಕ್ಷಣೆ ವಿಚಾರದಲ್ಲಿ ಮನುಷ್ಯರಾಗಲಿದೆ, ಪ್ರಾಣಿ, ಪಕ್ಷಿಗಳಾಗಲಿ ಒಂದೆ ಎಂಬುದು ತಿಳಿದ ವಿಷಯ. ತಾಯಿಗೆ ಮಕ್ಕಳೆಂದರೆ, ಪ್ರಾಣಿ, ಪಕ್ಷಿಗಳಿಗೂ ತಮ್ಮ ಮರಿಗಳೆಂದರೆ ಅಚ್ಚು ಮೆಚ್ಚು. ಅವುಗಳಿಗಾಗಿ ಜೀವ ಕೊಡಲು ಸಿದ್ಧವಾಗಿರುತ್ತವೆ. ಅಂಥದ್ದೆ ಮನಕಲುಕುವ ಘಟನೆಯ ವಿಡಿಯೋ ವೈರಲ್ ಆಗಿದೆ. ಇಲ್ಲಿ ಪಕ್ಷಿಯೊಂದು ಟ್ರ್ಯಾಕ್ಟರ್‌ಗೆ ಹೆದರದೇ ಚಕ್ರದ ಮುಂದೆ ನಿಂತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ತಾಯಿಯ ವಾತ್ಸಲ್ಯ ಮತ್ತು ರೈತನ ದಯೆಯು ಎದ್ದು ಕಾಣುತ್ತದೆ. ಹೊಲವನ್ನು ರೈತ ಉಳುಮೆಗೆ ಸಜ್ಜುಗೊಳಿಸುತ್ತಿರುತ್ತಾರೆ. ಈ ವೇಳೆ ಒಂದು ಹಕ್ಕಿ ಆ ಹೊಲದಲ್ಲಿ ಮೊಟ್ಟೆ ಇಟ್ಟಿರುತ್ತದೆ. ಟ್ರ್ಯಾಕ್ಟರ್‌ನಿಂದ ಹೊಲ ಹೊಡೆಯುವಾಗ ಮೊಟ್ಟೆ ರಕ್ಷಣೆಗೆ ದಿಟ್ಟತನದಿಂದ ನಿಂತ ಪಕ್ಷಿಯ ವಿಡಿಯೋ ಇದಾಗಿದೆ. ಎರಡು ರೆಕ್ಕೆಗಳನ್ನು ಚಾಚಿ ಹೋರಾಟಕ್ಕೆ ಸಿದ್ಧವೆಂಬಂತೆ, ಮೊಟ್ಟೆಯಿಂದ ಒಂದಿಂಚು ದೂರು ಸರಿಯದೇ ನಿಲ್ಲುತ್ತದೆ. ಟ್ರ್ಯಾಕ್ಟರ್ ಮಾಲೀಕ ಬೇಕು ಅಂತಲೇ ಅದರ ಹತ್ತಿರ ಬಂದು ಪರೀಕ್ಷೆ ಮಾಡುವುದು ವಿಡಿಯೋದಲ್ಲಿ ಸೆರೆಯಾಗಿದ್ದಾನೆ.

'ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ' ಎಂಬ ಸಂಭಾಷಣೆ ಕೇವಲ ಸಂಭಾಷಣೆಯಲ್ಲ. ಅದು ನಿಜ ಜೀವನದಲ್ಲಿನ ಸಂಗತಿ, ತಾಯಿ ಧೈರ್ಯ, ಬದುಕಿನ ಹೊರಾಟ, ತಾಯಿಯ ಪ್ರೀತಿ ನೋಡಿಯೇ ಆ ಮಾತು ಹೇಳಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ ನಿಮಗೂ ಕೂಡ ಈ ಮಾತು ನಿಜವೆನ್ನಿಸುತ್ತದೆ. ವೀಡಿಯೊದಲ್ಲಿ ಹಕ್ಕಿಯು ತನ್ನ ಮೊಟ್ಟೆಗಳನ್ನು ರೈತನಿಂದ ರಕ್ಷಿಸಿಕೊಳ್ಳಲು ಏನೆಲ್ಲ ಮಾಡುತ್ತದೆ ಎಂಬುದನ್ನು ನೋಡಬಹುದು. ಭಯಪಡದೇ ಚಕ್ರದ ಮುಂದೆ ನಿಂತಿರುವುದು ತಾಯಿಯ ಧೈರ್ಯದ ಪ್ರತೀಕದಂತೆ ಕಾಣುತ್ತದೆ. ಜೀವವನ್ನು ಪಣಕ್ಕಿಡಲು ಸಹ ಅದು ಸಿದ್ಧವಾಗುವ ದೃಶ್ಯ ಸೆರೆಯಾಗಿದೆ.
ಮನುಷ್ಯನಾಗಿರಲಿ, ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ, ತಾಯಿ ತಾಯಿಯೇ.ಈ ತಾಯಿ ಪಕ್ಷಿಯ ವಿಡಿಯೋ ಮಾಡಿದ ರೈತ ಟ್ರ್ಯಾಕ್ಟರ್‌ಅನ್ನು ಪಕ್ಷಿಯ ಮೊಟ್ಟೆ ಜಾಗದಲ್ಲಿ ಹಾಯಿಸದೇ, ಬೇರೆಡೆ ಹಾಯಿಸುತ್ತಾರೆ. ಜಮೀನು ಶುಚಿಗೊಳಿಸುವಾಗ ಮೊಟ್ಟೆ ಇರುವ ಸ್ಥಳ ಬಿಟ್ಟು ಉಳಿದೆಲ್ಲ ಜಮೀನಲ್ಲಿ ಟ್ರ್ಯಾಕ್ಟರ್ ಹಾಯಿಸಿದ್ದಾನೆ. ಈ ಮೂಲಕ ತಾಯಿ ಪಕ್ಷ ಆಶಯದಂತೆ ಮೊಟ್ಟೆಗೆ ತೊಂದರೆ ಮಾಡದೇ ಹೊಲ ಹಾಯಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಸ್ಸು ಗೆದ್ದಿದೆ.
ಟ್ರ್ಯಾಕ್ಟರ್ ಚಾಲಕ ಹಕ್ಕಿ ಮೊಟ್ಟೆಗಳೊಂದಿಗೆ ಕುಳಿತಿರುವ ಸ್ಥಳದಿಂದ ಹೊರಟು ಉಳಿದ ಹೊಲವನ್ನು ಉಳುಮೆ ಮಾಡುತ್ತಾನೆ. ದೇಶಕ್ಕೆ ಅನ್ನ ನೀಡುವ ರೈತನಲ್ಲಿ ಅವನು ದಯೆವುಳ್ಳವನು. ತನ್ನಂತೆ ಇತರರು ಬದುಕಲು ಅವಕಾಶ ಮಾಡಿಕೊಡುವ ಗುಣ ಅವನಲ್ಲಿರುತ್ತದೆ ಎಂಬುದು ಈ ವಿಡಿಯೋದಿಂದ ಗೊತ್ತಾಗುತ್ತದೆ.












Click it and Unblock the Notifications