Viral Video: ಪ್ರಧಾನಿ ನರೇಂದ್ರ ಮೋದಿ ಕೆಣಕಿ ಟೀಕೆಗೆ ಗುರಿಯಾದ ರಾಹುಲ್ ಗಾಂಧಿ, ನೆಟ್ಟಿಗರಿಂದ ರಿಟರ್ನ್ ಟ್ರೋಲ್!
Viral Video: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಣಕಿಸುವ ವೇದಿಕೆಯ ಪ್ರದರ್ಶನದ ಕುರಿತು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಕಾರ್ಯಕ್ರವನ್ನು ಬಿಜೆಪಿ ಟೀಕೆ ಮಾಡಿದ್ದರೆ, ಇದು ಪ್ರಜಾಪ್ರಭುತ್ವದ ಭಾಗವಾಗಿದೆ ಎಂದು ಕಾಂಗ್ರೆಸ ಪಕ್ಷವು ಸಮರ್ಥಿಸಿಕೊಂಡಿದೆ.
ಇಂದೋರ್ ನಲ್ಲಿ ನಡೆದ ರಾಹುಲ್ ಗಾಂಧಿಯವರ "ಛತ್ರೋನ್ ಕಿ ಗೂಂಜ್' 'Chhatron Ki Goonj' ಕಾರ್ಯಕ್ರಮದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷವು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ರಾಹುಲ್ ಗಾಂಧಿಯವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯವರನ್ನು ಅನುಕರಿಸುತ್ತಿರುವಂತೆ ಮತ್ತು ವಿದೇಶಿ ನಾಯಕರೊಂದಿಗಿನ ಅವರ ಮಾತನಾಡುವುದನ್ನು ಗೇಲಿ ಮಾಡುತ್ತಿರುವಂತೆ ತೋರಿಸಲಾಗಿತ್ತು.

Viral Video: ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ವಿರೋಧ
ಇನ್ನು ರಾಹುಲ್ ಗಾಂಧಿಯವರು ಈ ಕಾರ್ಯಕ್ರಮದ ಸಮಯದಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದರು. ಆದರೆ, ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಮತ್ತು ಯುವಕರನ್ನು ಕೇಂದ್ರೀಕರಿಸಿದ ಕಾರ್ಯಕ್ರಮದಲ್ಲಿ ಅಂತಹ ಪ್ರದರ್ಶನದ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ಅಲ್ಲದೆ ಇನ್ನೂ ಹಲವರು ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಇಂತಹ ಹಾಸ್ಯದ ವಿಷಯಗಳಲ್ಲಿ ಭಾಗವಹಿಸಬಾರದು, ಇದು ಅಪ್ರಬುದ್ಧ ನಡೆ ಎಂದೂ ಕೆಲವರು ಟೀಕೆ ಮಾಡಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ವಿಷಯಗಳನ್ನು ಚರ್ಚೆ ಮಾಡಲಾಗಿದೆ. ಆದರೆ ಮೋದಿ ಅವರನ್ನು ಟೀಕೆ ಮಾಡಿರುವುದು ಹಾಗೂ ಹಾಸ್ಯ ಮಾಡಿರುವುದು ಭಾರೀ ವೈರಲ್ ಆಗಿದೆ.
ನೆಟ್ಟಿಗರು ಹೇಳಿದ್ದೇನು ?
ಈ ಕಾರ್ಯಕ್ರಮ ಹಾಗೂ ಮೋದಿ ಕುರಿತದಾದ ಹಾಸ್ಯಕ್ಕೆ ಆಕ್ಷೇಪ, ಟೀಕೆ ವ್ಯಕ್ತವಾಗಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಗಳಲ್ಲಿ ಕಾಂಗ್ರೆಸ್ ಪಕ್ಷವು ಹಂಚಿಕೊಂಡಿದೆ. ಇದಕ್ಕೆ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿ, ನಿಮ್ಮೆಲ್ಲರೂ ಚಪ್ಪಾಳೆ ತಟ್ಟಿ ನಗುತ್ತಿದ್ದೀರಿ. ಅವರು ಏನು ಬೇಕಾದರೂ ಮಾಡುತ್ತಾರೆ, ನೀವು ಮಾತ್ರ ಚಪ್ಪಾಳೆ ತಟ್ಟಿ ನಗುತ್ತೀರಿ. ನೋಡಿದರೆ, ಎಲ್ಲ ಪಕ್ಷಗಳೂ ಒಂದೇ ಕಡೆಯಿಂದ ಬರುತ್ತವೆಯೇನೋ ಅನಿಸುತ್ತದೆ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.
Viral Video: ಬಿಜೆಪಿಯಿಂದ ಟೀಕೆ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕಾರ್ಯಕ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿರುವುದಕ್ಕೆ ಬಿಜೆಪಿ ತೀವ್ರ ಟೀಕೆ ವ್ಯಕ್ತವಾಗಿದೆ. ಒಂದೆಡೆ, ಪ್ರಧಾನಿ ಮೋದಿ ವೃದ್ಧ ತಾಯಿಗೆ ಗೌರವ ಮತ್ತು ವಾತ್ಸಲ್ಯ ತೋರಿಸಿದರೆ, ಮತ್ತೊಂದೆಡೆ, ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮದಲ್ಲಿ ಅವರನ್ನು ಅಪಹಾಸ್ಯ ಮಾಡಿದರು.
ಮೌಲ್ಯಗಳ ರಾಜಕೀಯ ಮತ್ತು ಪ್ರದರ್ಶನದ ರಾಜಕೀಯದ ನಡುವಿನ ವ್ಯತ್ಯಾಸ ಇದು. ಗೌರವವನ್ನು ಪಡೆಯಬೇಕಾದ ವಯಸ್ಸಿನಲ್ಲಿ, ರಾಹುಲ್ ಗಾಂಧಿಯವರ ನಾಚಿಕೆಗೇಡಿನ ನಡವಳಿಕೆಯು ಅವರ ಮನಸ್ಥಿತಿಯ ಬಗ್ಗೆ ಏನು ಹೇಳುತ್ತದೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
नरेंद्र मोदी की Foreign Policy 😉 pic.twitter.com/CJCubHuNRv
— Congress (@INCIndia) September 19, 2026


Click it and Unblock the Notifications
