Viral Video: ಇಳಿವಯಸ್ಸಲ್ಲಿ ವ್ಲಾಗ್ ಶುರು ಮಾಡಿ ಇನ್‌ಸ್ಟಾಗ್ರಾಮ್ ಸ್ಟಾರ್ ಆದ 70ರ ಅಜ್ಜ..

ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಉತ್ತರ ಪ್ರದೇಶದ 70 ವರ್ಷದ ವಿನೋದ್ ಕುಮಾರ್ ಶರ್ಮಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿವೃತ್ತಿ ಜೀವನದಲ್ಲಿ ಸುಮ್ಮನೆ ಕೂರಲು ಇಷ್ಟಪಡದ ಇವರು, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮದೇ ಆದ ಹೊಸ ಖಾತೆಯನ್ನು ತೆರೆದು ವ್ಲಾಗ್ ಮಾಡಲು ಶುರು ಮಾಡಿದ್ದಾರೆ. ಇವರು ಪೋಸ್ಟ್ ಮಾಡಿದ ಮೊದಲ ವಿಡಿಯೋವೇ ಈಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು, ರಾತ್ರೋರಾತ್ರಿ ಇವರು 'ಇಂಟರ್ನೆಟ್ ಸ್ಟಾರ್' ಆಗಿ ಹೊರ ಹೊಮ್ಮಿದ್ದಾರೆ.

ವಿನೋದ್ ಕುಮಾರ್ ಶರ್ಮಾ ಅವರಿಗೆ ವ್ಲಾಗಿಂಗ್ ಬಗ್ಗೆ ಯಾವುದೇ ಪೂರ್ವಾನುಭವವಿರಲಿಲ್ಲ. ಆದರೂ ಧೈರ್ಯ ಮಾಡಿ ಕ್ಯಾಮೆರಾ ಮುಂದೆ ಬಂದ ಅವರು, ತಮ್ಮ ಮುಗ್ಧ ಮಾತುಗಳಿಂದಲೇ ಎಲ್ಲರ ಮನಗೆದ್ದಿದ್ದಾರೆ. "ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ. ನಾನು ಉತ್ತರ ಪ್ರದೇಶದವನು. ನನಗೆ ವ್ಲಾಗ್ ಮಾಡಲು ಬರುವುದಿಲ್ಲ, ಆದರೂ ಸಮಯ ಕಳೆಯಲು ಮತ್ತು ಹೊಸದನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ," ಎಂದು ಅವರು ಹೇಳಿಕೊಂಡಿದ್ದು ನೆಟ್ಟಿಗರ ಮನ ಕರಗಿಸಿದೆ. "70 ಸಾಲ್ ಕಿ ಉಮರ್ ಮೇ ಅಪ್ನಾ ಪೆಹಲಾ ವ್ಲಾಗ್ ಬನಾ ರಹಾ ಹೂನ್" (70ರ ವಯಸ್ಸಿನಲ್ಲಿ ನನ್ನ ಮೊದಲ ವ್ಲಾಗ್ ಮಾಡುತ್ತಿದ್ದೇನೆ) ಎಂಬ ಅವರ ಪ್ರಾಮಾಣಿಕ ಒಪ್ಪಿಗೆಗೆ ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral from UP Wins Internet with First Vlog

ಈ ವಿಡಿಯೋ ಅಪ್ಲೋಡ್ ಆದ ಕೇವಲ 72 ಗಂಟೆಗಳಲ್ಲಿ ಬರೋಬ್ಬರಿ 30 ಮಿಲಿಯನ್‌ಗೂ (3 ಕೋಟಿ) ಹೆಚ್ಚು ವೀಕ್ಷಣೆ ಪಡೆದಿದೆ. ಅಷ್ಟೇ ಅಲ್ಲದೆ, 20 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಇವರ ಫಾಲೋವರ್ಸ್ ಸಂಖ್ಯೆ ಈಗ 64,000 ದಾಟಿದೆ. ಇವರ ಮುಗ್ಧತೆ ಮತ್ತು ಕಲಿಯುವ ಆಸಕ್ತಿಯನ್ನು ಕಂಡು ಇಂದಿನ ಯುವಜನತೆ (Gen Z) ಇವರನ್ನು ತಮ್ಮ ಸ್ವಂತ ಅಜ್ಜಂದಿರಂತೆ ಪ್ರೀತಿಸುತ್ತಿದ್ದಾರೆ. "ಅಂಕಲ್, ವಯಸ್ಸು ಕೇವಲ ನಂಬರ್ ಅಷ್ಟೇ," ಎಂದು ಹಲವರು ಕಮೆಂಟ್ ಮಾಡಿದರೆ, "ಮುಂದುವರೆಸಿ ಅಜ್ಜ, ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ," ಎಂದು ಇನ್ನು ಕೆಲವರು ಪ್ರೋತ್ಸಾಹಿಸಿದ್ದಾರೆ.

ಬಾಲಿವುಡ್ ನಟರಾದ ಅನುಪಮ್ ಖೇರ್ ಮತ್ತು ಜಯ್ ಭಾನುಶಾಲಿ ಅವರಂತಹ ಸೆಲೆಬ್ರಿಟಿಗಳು ಕೂಡ ಇವರ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಯ್ ಭಾನುಶಾಲಿ ಅವರು, "ನಿಮ್ಮ ಮುಂದಿನ ವ್ಲಾಗ್‌ಗಾಗಿ ಕಾಯುತ್ತಿದ್ದೇನೆ," ಎಂದು ಕಮೆಂಟ್ ಮಾಡಿದ್ದಾರೆ.

ಇನ್ನು ತಮ್ಮ ವಿಡಿಯೋ ವೈರಲ್ ಆದ ನಂತರ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ವಿನೋದ್ ಅವರು, "ಒಂದು ಮಿಲಿಯನ್ ಎಂದರೆ ಎಷ್ಟು ಎಂದು ನನಗೆ ಗೊತ್ತಿರಲಿಲ್ಲ. ಜನ ನನ್ನನ್ನು ಇಷ್ಟು ಪ್ರೀತಿಸುತ್ತಾರೆ ಎಂದು ಊಹಿಸಿರಲಿಲ್ಲ," ಎಂದು ಭಾವುಕರಾಗಿದ್ದಾರೆ. ಜೊತೆಗೆ, "ಟೀಕೆಗಳು ಚಪ್ಪಾಳೆಗಳಾಗಿ ಬದಲಾಗುವವರೆಗೂ ನಿಲ್ಲಬೇಡಿ," ಎಂಬ ಕಿವಿಮಾತನ್ನೂ ಹೇಳಿದ್ದಾರೆ. ಇವರ ಈ ಯಶೋಗಾಥೆ, ಹೊಸದನ್ನು ಕಲಿಯಲು ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+