ಪ.ಬಂಗಾಳ ಪಂಚಾಯಿತಿ ಚುನಾವಣೆ: ಭುಗಿಲೆದ್ದ ಹಿಂಸಾಚಾರ

ಕೋಲ್ಕತಾ, ಮೇ 14: ಕರ್ನಾಟಕ ವಿಧಾನಸಭೆ ಚುನಾವಣೆ ಕೆಲವೆಡೆ ಸಣ್ಣಪುಟ್ಟ ಗಲಾಟೆ ಪ್ರಕರಣಗಳ ಹೊರತಾಗಿ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೇ ಭಾರಿ ಹಿಂಸಾಚಾರ ನಡೆದಿದೆ. ಘಟನೆಯಲ್ಲಿ ಇದುವರೆಗೂ ಆರು ಮಂದಿ ಮೃತಪಟ್ಟಿದ್ದಾರೆ.

ಕೂಚ್ ಬಿಹಾರ್, ಬಿಲ್ಕಂಡಾ, ಬೀರ್ಪುರ ಮುಂತಾದೆಡೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ಬಿಜೆಪಿ ಮತ್ತು ಇತರೆ ಪಕ್ಷಗಳ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಮತ ಚಲಾಯಿಸಲು ಮತಗಟ್ಟೆಗೆ ಬಂದ ಜನರಿಗೆ ಮತಹಾಕದಂತೆ ಬೆದರಿಕೆವೊಡ್ಡಿ ವಾಪಸ್ ಕಳುಹಿಸುತ್ತಿದ್ದಾರೆ. ದುರ್ಗಾಪುರದಲ್ಲಿ ಮತಗಟ್ಟೆ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದೆ.

ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಲಾಠಿಗಳನ್ನು ಹಿಡಿದು ಮತಗಟ್ಟೆ ಬಳಿ ಕಾವಲು ಕಾಯುತ್ತಿದ್ದಾರೆ. ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆಸುವ ದೃಶ್ಯಗಳು ವಿಡಿಯೋಗಳಲ್ಲಿ ದಾಖಲಾಗಿವೆ. ಪಶ್ಚಿಮ ಬಂಗಾಳದ ಸಚಿವ ರವೀಂದ್ರನಾಥ್ ಘೋಷ್‌ ಕೂಚ್ ಬಿಹಾರದ ಮತಗಟ್ಟೆಯೊಂದರಲ್ಲಿ ಬಿಜೆಪಿ ಬೆಂಬಲಿಗನ ಮೇಲೆ ಹಲ್ಲೆ ನಡೆಸಿದ್ದಾರೆ.

violence in west bengal panchayat election

ಕೆಲವೆಡೆ ಚಾಕುಗಳಿಂದ ಇರಿದ ಘಟನೆಗಳು ನಡೆದಿವೆ. ಟಿಎಂಸಿಯ ನಾಯಕರೇ ಮತಗಟ್ಟೆ ಮುಂಭಾಗದಲ್ಲಿ ಹಲ್ಲೆ ನಡೆಸಿದ ಘಟನೆಗಳು ವರದಿಯಾಗಿವೆ.

ಘಟನೆಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಚುನಾವಣಾ ವರದಿಗಾರಿಕೆಗೆ ತೆರಳಿದ್ದ ಐವರು ಸ್ಥಳೀಯ ಪತ್ರಕರ್ತರು ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾಂಗರ್ ಎಂಬಲ್ಲಿ ಮಾಧ್ಯಮದ ವಾಹನವನ್ನು ಜಖಂಗೊಳಿಸಲಾಗಿದ್ದು, ಕ್ಯಾಮೆರಾವನ್ನು ಪುಡಿ ಮಾಡಲಾಗಿದೆ.

ಮುರ್ಷಿಬಾದ್‌ನಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದ್ದು, ಮತಪತ್ರಗಳನ್ನು ಕೆರೆಯೊಂದಕ್ಕೆ ಎಸೆಯಲಾಗಿದೆ. ಅಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+