Vinesh Phogat: ವಿನೇಶ್ ಪೋಗಟ್ ಆಸ್ಪತ್ರೆಗೆ ದಾಖಲು
Vinesh Phogat: ಭಾರತದ ಪರವಾಗಿ ಪ್ಯಾರಿಸ್ ಒಲಿಂಪಿಕ್ಸ್ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಪೋಗಟ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಬೆನ್ನಲ್ಲೇ ಡಿಹೈಡ್ರೇಷನ್‌ನಿಂದ ವಿನೇಶ್ ಪೋಗಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಂದು ತಿಳಿದುಬಂದಿದೆ. ಇನ್ನು ವಿನೇಶ್ ಪೋಗಟ್ ಫೈನಲ್ ಪ್ರವೇಶಿಸಿ ತೂಕ ಜಾಸ್ತಿಯಾದ ಹಿನ್ನೆಲೆ ಅನರ್ಹಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್.. ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.

"ಇಂದಿನ ಈ ಹಿನ್ನೆಡೆ ನೋವುಂಟು ಮಾಡಿದೆ. ನಾನು ಅನುಭವಿಸುತ್ತಿರುವ ಹತಾಶೆಯ ಭಾವನೆಯನ್ನು ಪದಗಳು ವ್ಯಕ್ತಪಡಿಸಬಹು ಎಂದು ನಾನು ಬಯಸುತ್ತೇನೆ. ಅದೇ ಸಮಯದಲ್ಲಿ, ನೀವು ಸ್ಥಿತಿಸ್ಥಾಪಕತ್ವವನ್ನು ಪ್ರತಿನಿಧಿಸುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವ ಆಗಿದೆ. ಬಲವಾಗಿ ಹಿಂತಿರುಗಿ.. ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ," ಎಂದು ಬರೆದುಕೊಳ್ಳುವ ಮೂಲಕ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.
ನಿಗದಿಗಿಂತ 2 ಕೆ.ಜಿ. ಹೆಚ್ಚಿದ್ದ ವಿನೇಶ್, ತೂಕ ಇಳಿಕೆ ಮಾಡಿಕೊಳ್ಳಲು ಸೈಕ್ಲಿಂಗ್, ಸ್ಕಿಪ್ಪಿಂಗ್ ಕೂಡ ಮಾಡಿದ್ದರು.ಅಷ್ಟೇ ಅಲ್ಲದೆ, ತನ್ನ ತಲೆ ಕೂದಲು ಮತ್ತು ಉಗುರುಗಳನ್ನು ಕೂಡ ಕತ್ತರಿಸಿಕೊಂಡಿದ್ದರು ಹಾಗೂ ತನ್ನ ದೇಹದ ರಕ್ತವನ್ನು ಸಹ ಹೊರತೆಗೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ಮಂಗಳವಾರ (ಆಗಸ್ಟ್ 06) ರಾತ್ರಿ ಪರೀಕ್ಷಿಸಿದಾಗ ವಿನೇಶ್ ಫೋಗಟ್ ಅವರ ತೂಕ 2 ಕೆಜಿ ಹೆಚ್ಚಳ ಆಗಿತ್ತು. ಆದ್ದರಿಂದ ತೂಕ ಇಳಿಸಲು ವಿನೇಶ್ ಇಡೀ ರಾತ್ರಿ ನಿದ್ರೆ ಮಾಡದೆ ಶ್ರಮಿಸಿದ್ದಾರೆ. ಇನ್ನು ಸೆಮಿ-ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಅವರ ತೂಕ 52 ಕೆ.ಜಿ. ಇತ್ತು. ಬಳಿಕ 2 ಕೆಜಿಯಷ್ಟು ತೂಕ ಕಡಿಮೆ ಮಾಡಲು ರಾತ್ರಿಯಿಡೀ ಶ್ರಮಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಅವರ ಕೇವಲ 1 ರಾತ್ರಿಯಲ್ಲಿ 1 ಕೆ.ಜಿ. 850 ಗ್ರಾಂ ತೂಕ ಕಡಿಮೆ ಇಳಿಸಿಸಿಕೊಂಡಿದ್ದಾರೆ. ಆದರೆ ನಿಗದಿತ ತೂಕಕ್ಕಿಂತ ಕೇವಲ 150 ಗ್ರಾಂ ಹೆಚ್ಚಿದ್ದರಿಂದ ಫೈನಲ್ ಪ್ರವೇಶಿಸಿದ ಅವರನ್ನು ಅನರ್ಹಗೊಳಿಸಿದ್ದು, ಇದರ ಬೆನ್ನಲ್ಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಯಾವುದೇ ಕ್ರೀಡಾಪಟು ಆಗಲಿ ಕೊನೇ ಹಂತ ತಲುಪಿ ಯಾವುದೋ ಒಂದು ಕಾರಣದಿಂದ ಕ್ರೀಡೆಯಿಂದ ಹೊರಬಿದ್ದರೆ, ವರ್ಷಪೂರ್ತಿ ಪಟ್ಟ ಕಷ್ಟ ಮಣ್ಣುಪಾಲಾದಾಂತಾಗುತ್ತದೆ. ಅಲ್ಲದೆ ಮನಸ್ಸಿಗೂ ಕೂಡ ತುಂಬಾ ನೋವುಂಟು ಮಾಡುತ್ತದೆ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಈ ರೀತಿ ಘಟನೆಗಳು ಸಂಭವಿಸಿದರೆ, ಇಡೀ ಕ್ರೀಡಾಪಟುವಿನ ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರುತ್ತದೆ.
ಇದೀಗ ಭಾರತದ ಪರವಾಗಿ 50 ಪ್ಯಾರಿಸ್ ಒಲಿಂಪಿಕ್ಸ್ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿ ಅನರ್ಹಗೊಂಡ ಅನರ್ಹಗೊಂಡ ಘಟನೆ ನಡೆದಿದೆ. ಇನ್ನೂ ಈ ವೇಳೆ ವಿನೇಶ್ ಫೋಗಟು ಕಣ್ಣೀರಿಟ್ಟಿದ್ದು, ಅವರಿಗೆ ಧೈರ್ಯ ತುಂಬುವ ಕೆಲಸವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.












Click it and Unblock the Notifications