ನಟಿ ಸೋನಿಕಾ ಸಾವು, ನಟ ವಿಕ್ರಮ್ ಬಂಧನ
ಕೋಲ್ಕತ್ತಾ, ಜುಲೈ 07:ನಟಿ, ರೂಪದರ್ಶಿ ಸೋನಿಕಾ ಚೌಹಾಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಂ ಚಟರ್ಜಿ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಸೋನಿಕಾ ಚೌಹಾಣ್ ಹಾಗೂ ವಿಕ್ರಂ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಮಾಡೆಲ್ ಸೋನಿಕಾ ಚೌಹಾಣ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಕಾರು ಅಪಘಾತವಾದಾಗ ವಿಕ್ರಮ್ ಕುಡಿದ ಮತ್ತಿನಲ್ಲಿದ್ದರು, ನಿರ್ಲಕ್ಷ್ಯದಿಂದ ಕಾರು ಓಡಿಸಿದ್ದರು ಎಂದು ಆರೋಪಿಸಲಾಗಿದೆ. 29 ವರ್ಷ ವಯಸ್ಸಿನ ನಟ ವಿಕ್ರಮ್ ರನ್ನು ಕೋರ್ಟಿಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಟಾಲಿಗಂಜ್ ಪೊಲೀಸರು, ಕಸ್ಬಾದ ಆಕ್ರೋಪೊಲೀಸ್ ಮಾಲ್ ಬಳಿ ಇದ್ದ ನಟ ವಿಕ್ರಮ್ ರನ್ನು ಗುರುವಾರ ತಡರಾತ್ರಿ ವಶಕ್ಕೆ ಪಡೆದರು. ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದ ವಿಕ್ರಮ್ ಅವರನ್ನು ಅಲಿಪೂರ್ ಕೋರ್ಟಿಗೆ ಹಾಜರುಪಡಿಸಲಾಗಿದೆ.












Click it and Unblock the Notifications