ಪಕ್ಷ ತೊರೆಯುವ ವದಂತಿ: ಪ್ರಿಯಾಂಕ ಜೊತೆಗಿನ ಫೋಟೋ ಪೋಸ್ಟ್ ಮಾಡಿದ ವಿಜೇಂದರ್
ನವದೆಹಲಿ, ಏಪ್ರಿಲ್ 26: ವೃತ್ತಿಪರ ಬಾಕ್ಸರ್ ಮತ್ತು ರಾಜಕಾರಣಿ ವಿಜೇಂದರ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆ ಎಂಬ ವದಂತಿಗಳು ನಡೆಯುತ್ತಿದೆ. ಈ ವದಂತಿಗಳಿಗೆ ತೆರೆ ಎಳೆಯುವಂತೆ ಕಾಂಗ್ರೆಸ್ ಮುಖಂಡ ವಿಜೇಂದರ್ ಸಿಂಗ್, ಪ್ರಿಯಾಂಕ ಗಾಂಧಿ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಸೋಮವಾರ, ಏಪ್ರಿಲ್ 25 ರಂದು, ವೃತ್ತಿಪರ ಬಾಕ್ಸರ್ ಮತ್ತು ರಾಜಕಾರಣಿ ವಿಜೇಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆಯುವ ಸಾಧ್ಯತೆಯಿದೆ ಎಂಬ ವರದಿಗಳು ಹೊರಹೊಮ್ಮಿದೆ. ಹಾಗೆಯೇ ಹರಿಯಾಣದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗೆ ಸೇರುತ್ತಾರೆ ಎಂಬ ವದಂತಿಗಳಿವೆ. ಈ ಬೆನ್ನಲ್ಲೇ ಪ್ರಿಯಾಂಕ ಗಾಂಧಿ ಜೊತೆಗಿನ ಚಿತ್ರವನ್ನು ವಿಜೇಂದರ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
36 ವರ್ಷದ ವಿಜೇಂದರ್ ಸಿಂಗ್ ಉತ್ತರ ಪ್ರದೇಶದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿನ ಚಿತ್ರವನ್ನು ಸೋಮವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಈ ವದಂದಿಗೆ ಅಂತ್ಯ ಹಾಡಿದ್ದಾರೆ.

"ಯುವಜನರ ಒಳಿತಿಗಾಗಿ ತುಂಬಾ ಪ್ರಯತ್ನಗಳನ್ನು ಮಾಡುತ್ತಿರುವ ಕ್ರಿಯಾತ್ಮಕ ನಾಯಕ ಪ್ರಿಯಾಂಕಾಗಾಂಧಿ ಜೀ ಅವರೊಂದಿಗೆ ಸಂಭಾಷಣೆ ನಡೆಸುವುದು ಅತ್ಯುತ್ತಮವಾದ ಕಾರ್ಯವಾಗಿದೆ. ಅವರ ಪ್ರಗತಿಪರ ವಿಧಾನವು ನಮಗೆ ಹೊಸ ಉನ್ನತಿಗೆ ಸಹಾಯ ಮಾಡಲಿದೆ," ಎಂದು ಪ್ರಿಯಾಂಕ ಗಾಂಧಿ ಫೋಟೋ ಜೊತೆಗೆ ವಿಜೇಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ವಿಜೇಂದರ್ ಸಿಂಗ್ 2019 ರ ಸಾರ್ವತ್ರಿಕ ಚುನಾವಣೆಗೆ ಮುಂಚೆಯೇ ರಾಜಕೀಯಕ್ಕೆ ದುಮುಕಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ್ದರು, ಆದರೆ ಅವರು ವಿಜಯಶಾಲಿಯಾಗಲಿಲ್ಲ. ಅವರು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅನೇಕ ಇತರ ಪದಕಗಳನ್ನು ಗೆದ್ದಿದ್ದಾರೆ.












Click it and Unblock the Notifications