ಮೋದಿ ಸಂಪುಟಕ್ಕೆ ಕರ್ನಾಟಕದಿಂದ ಯಾರು ಆಯ್ಕೆ?

Posted By:
Subscribe to Oneindia Kannada

ನವದೆಹಲಿ, ಜುಲೈ 04: ನರೇಂದ್ರ ಮೋದಿ ಅವರು ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಸಂಪುಟ ವಿಸ್ತರಣೆ, ಪುನರ್ ರಚನೆ ಕಾರ್ಯಗಳನ್ನು ಪೂರೈಸಲು ಸಿದ್ಧರಾಗಿದ್ದಾರೆ. ಸದ್ಯಕ್ಕೆ ಮಂಗಳವಾರ ಬೆಳಗ್ಗೆ ಎನ್ಡಿಎ ಸಂಪುಟ ಮತ್ತೊಮ್ಮೆ ವಿಸ್ತರಣೆಗೊಳ್ಳಲು ಮುಹೂರ್ತ ನಿಗದಿಪಡಿಸಲಾಗಿದೆ. ಸದ್ಯದ ಮಾಹಿತಿಯಂತೆ ಉತ್ತರ ಕರ್ನಾಟಕದಿಂದ ದಲಿತ ಮುಖಂಡರಾಗಿರುವ ರಮೇಶ್ ಜಿಗಜಿಣಗಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ವಿಜಯಪುರ(ಬಿಜಾಪುರ)ದಿಂದ ಐದು ಬಾರಿ ಸಂಸದರಾಗಿರುವ ರಮೇಶ್ ಜಿಗಜಿಣಗಿ ಅವರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.[ಎನ್ ಡಿಎ ಸಂಪುಟ ವಿಸ್ತರಣೆ, ಡಿವಿಎಸ್ ಸೇಫ್, ದೇಕಾಗೆ ಚಾನ್ಸ್]

ಇನ್ನೊಂದೆಡೆ ಕಾನೂನು ಸಚಿವ ಡಿವಿ ಸದಾನಂದ ಗೌಡ ಅವರು ಸೇಫ್ ಆಗಿದ್ದಾರೆ ಎಂಬ ಮಾಹಿತಿ ಇದ್ದರೂ, ಅವರ ಸ್ಥಾನ ಭದ್ರವಾಗಿಲ್ಲ. ಸದಾನಂದ ಗೌಡರನ್ನು ಕೆಳಗಿಳಿಸಿ ಆ ಸ್ಥಾನದಲ್ಲಿ ಜಿಗಜಿಣಗಿ ಅವರನ್ನು ಕೂರಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಖಾಲಿ ಇರುವ ಎರಡು ಸ್ಥಾನಗಳು ಈಗಾಗಲೇ ಉತ್ತರ ಪ್ರದೇಶದವರಿಗೆ ಮೀಸಲಿಡಲಾಗಿದೆ. ಹೀಗಾಗಿ, ಹೊಸಬರನ್ನು ಸೇರಿಸಿಕೊಳ್ಳಬೇಕಾದರೆ ಹಾಲಿ ಸಚಿವರು ಸ್ಥಾನ ಬಿಟ್ಟು ಕೊಡಬೇಕಾಗುತ್ತದೆ.[ಗ್ಯಾಲರಿ : ಮೋದಿ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ]

Ramesh Jigajinagi in PM Narendra Modi ministry

ಜೋಶಿ, ಶೆಟ್ಟರ್ ಮನವಿ: ಹಿರಿಯ ನಾಯಕ ರಮೇಶ್ ಜಿಗಜಿಣಗಿ (64) ಅವರನ್ನು ಮೋದಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮನವಿ ಸಲ್ಲಿಸಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಎಸ್ ಸಿ ಹಾಗೂ ಎಸ್ ಟಿ ಮತಗಳನ್ನು ಸೆಳೆಯಬಹುದು ಎಂಬುದು ಈ ಇಬ್ಬರು ನಾಯಕರ ಲೆಕ್ಕಾಚಾರ.

ಮನವಿಗೆ ಸ್ಪಂದಿಸಿರುವ ಅಮಿತ್ ಶಾ, ಸದ್ಯದ ಸಂಪುಟ ವಿಸ್ತರಣೆಯಲ್ಲಿ 10ಸ್ಥಾನಗಳಿಗೆ ಮಾತ್ರ ಅವಕಾಶವಿದೆ. ಮುಂದಿನ ಸಂಪುಟ ವಿಸ್ತರಣೆಯ ಸಮಯದಲ್ಲಿ ರಮೇಶ್ ಅವರ ಹೆಸರು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Will veteran leader from Vijayapura, Karnataka and five-time Member of Parliament Ramesh Jigajinagi make it to the Union cabinet on July 5, 2016?. BJP President Amit Shah invited him have talk about it.
Please Wait while comments are loading...