ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?

By: ವಿಕಾಸ್ ನಂಜಪ್ಪ
Subscribe to Oneindia Kannada

ಸಖತ್ ಸಾಲ ಮಾಡಿಕೊಂಡಿರುವ ವಿಜಯ್ ಮಲ್ಯ ಬ್ಯಾಂಕ್ ಗಳು, ಸುಪ್ರೀಂ ಕೋರ್ಟ್ ಮತ್ತು ಜನರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. 2004ರಲ್ಲಿ 1.57 ಕೋಟಿ ಹಣ ಕೊಟ್ಟು ಟಿಪ್ಪು ಸುಲ್ತಾನ್ ಖಡ್ಗ ತಂದ ಮಲ್ಯ, ಜನತಾ ಪಕ್ಷ ಕಟ್ಟಿ ರಾಜಕೀಯ ಆಖಾಡಕ್ಕೂ ಧುಮುಕಿದ್ದ ಮಲ್ಯ, ಕ್ಯಾಲೆಂಡರ್ ಗಳಲ್ಲೇ ಹೆಸರು ಮಾಡಿದ್ದ ಮಲ್ಯ ಇಂದು ದೇಶದಲ್ಲಿಲ್ಲ.

ಟಿಪ್ಪು ಸುಲ್ತಾನ್ ಕಾಲದ ವಸ್ತುಗಳನ್ನೆಲ್ಲ ಸೇರಿಸಿ ಮಲ್ಯ ವಸ್ತು ಸಂಗ್ರಹಾಲಯವೊಂದನ್ನು ಮಾಡಬೇಕು ಎಂದು ಅಂದುಕೊಂಡಿದ್ದರು. ಇಂಥ ಕ್ರಮಗಳ ಮೂಲಕ ಜನರಿಂದ ಮತ ಕದಿಯಬಹುದು ಎಂಬ ಇಂಗಿತವನ್ನು ಮಲ್ಯ ಇಟ್ಟುಕೊಂಡಿದ್ದರು.[ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಹಾರಿದ್ದು ಹೇಗೆ?]

ಮಲ್ಯ ಪಕ್ಷ ಕಟ್ಟಿ ಪ್ರಚಾರ ನಡೆಸುತ್ತಿದ್ದ ಕಾಲದ ವೈಭವವನ್ನು ಪತ್ರಕರ್ತ ಮಿತ್ರರೊಬ್ಬರು ಹಂಚಿಕೊಂಡಿದ್ದಾರೆ. ಹಾಗಾದರೆ ಮಲ್ಯರ ಗತಕಾಲದ ವೈಭವವನ್ನು ಅವರ ಮಾತುಗಳಲ್ಲೇ ಕೇಳಿಕೊಂಡು ಬರೋಣವೇ?

ಖಾಸಗಿ ವಿಮಾನ

ಖಾಸಗಿ ವಿಮಾನ

ಮಲ್ಯ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದದ್ದು ತಮ್ಮ ಖಾಸಗಿ ವಿಮಾನದಲ್ಲಿಯೇ. ಎಷ್ಟೋ ಸಾರಿ ಒಬ್ಬರಿಗಾಗಿ ಒಂದು ವಿಮಾನ ಹಾರಿದ ದಾಖಲೆ ಇದೆ.

ನೀರಿನಂತೆ ಹಣ ಖರ್ಚು

ನೀರಿನಂತೆ ಹಣ ಖರ್ಚು

ಮಲ್ಯ ನೆಲಕ್ಕೆ ಇಳಿಯುತ್ತಿರಲಿಲ್ಲ. ಆತನ ಹಿಂಬಾಲಕರು ಹಣವನ್ನು ನೀರಿನಂತೆ ವ್ಯಯಿಸುತ್ತಿದ್ದರು.

ಕೋಝಿಕೋಡ್ ಕ್ಯಾಂಪೇನ್

ಕೋಝಿಕೋಡ್ ಕ್ಯಾಂಪೇನ್

ಕರ್ನಾಟಕ ಮತ್ತು ಕೇರಳದಲ್ಲಿ ಮಲ್ಯ ತಮ್ಮ ಜನತಾ ಪಾರ್ಟಿಯನ್ನು ಕಟ್ಟಿ ನಿಲ್ಲಿಸಲು ಶ್ರಮ ವಹಿಸುತ್ತಿದ್ದರು.

ಬೆಂಗಳೂರಿಂದ ವಿಮಾನ

ಬೆಂಗಳೂರಿಂದ ವಿಮಾನ

ಸುದ್ದಿ ಸಂಗ್ರಹ ಮಾಡಲು ಪತ್ರಕರ್ತರನ್ನು ಮಲ್ಯ ಕರೆದುಕೊಂಡು ಹೋಗುತ್ತಿದ್ದ ಬಗೆಯನ್ನೇ ವರ್ಣಿಸಬೇಕು. ಪತ್ರಕರ್ತರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿ ಕೋಳಿಕೋಡ್ ಗೆ ಕರೆದುಕೊಂಡುಹೋದ ದಾಖಲೆಯಿದೆ.

ಕುಡಿತದ ಬಗ್ಗೆ ಹೇಳಲ್ಲ

ಕುಡಿತದ ಬಗ್ಗೆ ಹೇಳಲ್ಲ

ಮಲ್ಯ ವಿಲಾಸಿ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಹೇಳದಿರುವುದೇ ಒಳಿತು.

ಕಂಪನಿ ಅಧಿಕಾರಿ ರಾಜಕೀಯ ಮುಖಂಡ

ಕಂಪನಿ ಅಧಿಕಾರಿ ರಾಜಕೀಯ ಮುಖಂಡ

ಮಲ್ಯ ಕಂಪನಿಯ ವಿವಿಧ ಅಧಿಕಾರಿಗಳು ರಾಜಕೀಯ ಮುಖಂಡರಾಗಿ ಬದಲಾಗಿದ್ದರು. ಇದು ಮಲ್ಯ ಅಧೋಗತಿಗೆ ಅಂದೇ ಮುನ್ಸೂಚನೆಯನ್ನು ನೀಡಿತ್ತು.

ಜನಪರ ಕಾಳಜಿಇಲ್ಲದೇ ಚೆಲ್ಲಿದ ಹಣ

ಜನಪರ ಕಾಳಜಿಇಲ್ಲದೇ ಚೆಲ್ಲಿದ ಹಣ

ಮಲ್ಯ ಯಾಕೆ ಅಷ್ಟು ಪ್ರಚಾರವನ್ನು ಇಷ್ಟಪಡುತ್ತಿದ್ದರೋ ತಿಳಿಯದು. ಕೋಳಿಕೋಡ್ ನ ಕಾರ್ಯಕ್ರಮವೊಂದಕ್ಕೆ ಕೋಟ್ಯಂತರ ರು. ಹಣ ವ್ಯಯಿಸಿದ್ದರು.

ಯಾವಾಗಲೂ ಲೇಟ್

ಯಾವಾಗಲೂ ಲೇಟ್

ಮಲ್ಯ ಸಾಮಾನ್ಯವಾಗಿ ತಮ್ಮದೇ ಕಾರ್ಯಕ್ರಮಕ್ಕೆ ಒಂದು ಗಂಟೆ ತಡವಾಗಿ ಬರುತ್ತಿದ್ದರು. ಜನರು ಬಿಸಿಲಿನಿಂದ ಬಸವಳಿಯುತ್ತಿದ್ದರೂ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ರಾಜ್ಯಸಭಾ ಸದಸ್ಯರಾದರು

ರಾಜ್ಯಸಭಾ ಸದಸ್ಯರಾದರು

ಅಂತಿಮವಾಗಿ ಮಲ್ಯ ರಾಜಕೀಯ ಬದುಕು ಆರಂಭವಾಗಿದ್ದು ರಾಜ್ಯಸಭಾ ಸದಸ್ಯರಾಗಿ. ಎಲ್ಲ ಪಕ್ಷಗಳ ಸಹಕಾರದಲ್ಲಿ ಮಲ್ಯ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರು.

ಕಾರ್ಟೂನ್ ನೋಡಿ

ಕಾರ್ಟೂನ್ ನೋಡಿ

ಮಲ್ಯರ ಇಂದಿನ ಸ್ಥಿತಿಯನ್ನು ಈ ವ್ಯಂಗ್ಯ ಚಿತ್ರ ಎಷ್ಟು ವಿವರವಾಗಿ ಹೇಳುತ್ತಿದೆ.. ಒಂದು ಸಲ ನಿಧಾನವಾಗಿ ನೋಡಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It was with much fanfare that Vijay Mallya the former chairman of the UB group had bought the sword of Tipu Sultan. I want to restore the legacy of Tipu, Mallya said at a crowded press conference at Bengaluru in 2004. Following which he announced that he had paid Rs 1.57 crore for the sword which is several centuries old.
Please Wait while comments are loading...