Vijay: ಮುಗುವಿನಂತೆ ಬಂದು ನಟ ಅಜಿತ್ ಕುಮಾರ್‌ಗೆ ಆತ್ಮೀಯ ಅಪ್ಪುಗೆ ಕೊಟ್ಟ ಸಿಎಂ ವಿಜಯ್, ಕುಚಿಕು ಫೋಟೋ ವೈರಲ್ - ತ್ರಿಷಾ ಸಾಥ್!

ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಮಗುವಿನಂತ ಓಡೋಡಿ ಬಂದು, ಚಿತ್ರರಂಗದ ಗೆಳೆಯ, ಕುಚಿಕು ನಟ ಅಜಿತ್ ಕುಮಾರ್ ಅವರನ್ನು ತಬ್ಬಿಕೊಂಡು ಆತ್ಮೀಯ ಅಪ್ಪುಗೆ ಕೊಟ್ಟಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ತಮಿಳು ಚಿತ್ರರಂಗದಲ್ಲಿ ನಟರಾದ ವಿಜಯ್ ಹಾಗೂ ಅಜಿತ್ ಕುಮಾರ್ ಅವರು ಭಾರೀ ಖ್ಯಾತಿ ಗಳಿಸಿದ್ದಾರೆ. ತಲಾ ಅಜಿತ್ Vs ದಳಪತಿ ವಿಜಯ್ ಎನ್ನುವಂತೆಯೇ ಸಿನಿಮಾ ರಂಗದಲ್ಲೂ, ಅವರ ಅಭಿಮಾನಿಗಳಲ್ಲೂ ಭಾವನೆ ಇದೆ. ಅಜಿತ್ ಹಾಗೂ ವಿಜಯ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲೂ ಆಗ್ಗಾಗ್ಗೆ ವೈಮನಸ್ಸು ಮೂಡುವುದು ಇದೆ. ಆದರೆ, ಈ ಇಬ್ಬರು ನಟರು ಪರಸ್ಪರ ಪ್ರೀತಿಯಿಂದ ತಬ್ಬಿಕೊಂಡಿರುವುದು ಇಬ್ಬರೂ ನಟರು ಹಾಗೂ ಖುದ್ದು ತಮಿಳುನಾಡಿನ ಮುಖ್ಯಮಂತ್ರಿ ಸಹ ಆಗಿರುವ ವಿಜಯ್ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿಯನ್ನುಂಟು ಮಾಡಿದೆ. ಆದರೆ ಈ ಸಂದರ್ಭದಲ್ಲಿ ನಟಿ ತ್ರಿಷಾ ಸಹ ಕಾಣಿಸಿಕೊಂಡಿದ್ದಾರೆ!

ಹೌದು ಸಿಲ್ವರ್‌ಸ್ಟೋನ್ (Silverstone) ಯುಕೆಯಲ್ಲಿರುವ ವಿಶ್ವಪ್ರಸಿದ್ಧ ಮೋಟಾರ್ ರೇಸಿಂಗ್ ಸರ್ಕ್ಯೂಟ್‌ನಲ್ಲಿ ನಟ ಅಜಿತ್ ಕುಮಾರ್, ನಟ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಆತ್ಮೀಯ ಅಪ್ಪುಗೆಗೆ ಸಾಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಟಿ ತ್ರಿಷಾ ಅವರು ಸಹ ಹಾಜರಿದ್ದರು. ಸಿಲ್ವರ್‌ಸ್ಟೋನ್‌ನಲ್ಲಿ ಅಜಿತ್ ಕುಮಾರ್ ಮತ್ತು ವಿಜಯ್ ಭೇಟಿಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಸಂಭ್ರಮ ಮೂಡಿಸಿದೆ. ಈ ವೇಳೆ ನಟಿ ತ್ರಿಷಾ ಕೂಡ ಅಲ್ಲಿ ಕಾಣಿಸಿಕೊಂಡರು.

Vijay CM Runs to Hug Ajith Kumar at Silverstone Heartwarming Photo Goes Viral Trisha Joins

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿಜಯ್, Michelin Le Mans Cup ರೇಸ್ ಗೆ ಚಾಲನೆ ನೀಡಲು ಸಿಲ್ವರ್‌ಸ್ಟೋನ್‌ಗೆ ಆಗಮಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಅಜಿತ್ ಕೂಡ ಭಾಗವಹಿಸಿದ್ದರು. ಈ ವೇಳೆ ಹಲವು ವರ್ಷಗಳ ಸಹೋದ್ಯೋಗಿಗಳಾದ ಅಜಿತ್ ಮತ್ತು ವಿಜಯ್ ಆತ್ಮೀಯವಾಗಿ ಭೇಟಿಯಾಗಿ ಪರಸ್ಪರ ಅಪ್ಪಿಕೊಂಡರು. ಈ ಅಪರೂಪದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಯಿತು.

ಮಗುವಿನಂತೆ ಓಡೋಡಿ ಬಂದ ವಿಜಯ್!

ನಟ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಆಗಿರುವ ವಿಜಯ್ ಅವರು ಅಜಿತ್ ಕುಮಾರ್ ಅವರನ್ನು ನೋಡುತ್ತಿದ್ದಂತೆಯೇ ಅಕ್ಷರಶಃ ಮಗುವಿನಂತೆಯೇ ಓಡೋಡಿ ಬಂದು ಅಜಿತ್ ಅವರನ್ನು ತಬ್ಬಿಕೊಂಡಿದ್ದಾರೆ. ಭುಜಕ್ಕೆ ಮುತ್ತಿಟ್ಟು ಖುಷಿಪಟ್ಟಿದ್ದಾರೆ. ಇಬ್ಬರೂ ಪರಸ್ಪರ ಆತ್ಮೀಯವಾಗಿ ನಡೆದುಕೊಂಡು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಅಭಿಮಾನಿಗಳಿಗೂ ಅಚ್ಚರಿ!

ಇನ್ನು ಈ ಬೆಳವಣಿಗೆಯು ವಿಜಯ್ ಹಾಗೂ ಅಜಿತ್ ಅವರ ಅಭಿಮಾನಿಗಳಲ್ಲೂ ಭಾರೀ ಅಚ್ಚರಿಯನ್ನುಂಟು ಮಾಡಿದೆ. ಈ ಇಬ್ಬರು ನಟರನ್ನು ಇವರ ಅಭಿಮಾನಿಗಳು ಬದ್ಧ ವೈರಿಗಳು ಅಥವಾ ಪರಸ್ಪರ ಎದುರಾಳಿಗಳಂತೆ ನೋಡಿದ್ದೇ ಹೆಚ್ಚು. ವಿಜಯ್ ಅವರು ಅಧಿಕಾರಕ್ಕೆ ಬರುವುದಾಗಿ ಘೋಷಿಸಿದ್ದಾಗಲೂ ಅಜಿತ್ ಅವರ ಕೆಲವು ಅಭಿಮಾನಿಗಳು ವ್ಯಂಗ್ಯ, ಹಾಸ್ಯ ಭರಿತ ಟ್ರೋಲ್ ಮಾಡಿದ್ದರು. ಅಭಿಮಾನಿಗಳು ಬಹಳ ಹಿಂದಿನಿಂದಲೂ ಇಬ್ಬರು ನಟರನ್ನು ಪ್ರತಿಸ್ಪರ್ಧಿಗಳಾಗಿ ನಿಲ್ಲುತ್ತಿದ್ದರೆ ಎನ್ನುವಂತೆಯೇ ನೋಡಿದ್ದರು. ಆದರೆ ಶನಿವಾರದ ಬೆಳವಣಿಗೆಯು ವಿಶೇಷವಾಗಿದೆ. ತಮಿಳು ಚಿತ್ರರಂಗದ ಇಬ್ಬರು ದೊಡ್ಡ ತಾರೆಯರಾಗಿದ್ದರೂ, ಅಜಿತ್ ಕುಮಾರ್ ಮತ್ತು ವಿಜಯ್ ಎರಡು ದಶಕಗಳಿಗೂ ಹೆಚ್ಚು ಕಾಲ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ.

ನಟನಾ ವೃತ್ತಿಜೀವನದ ಜೊತೆಗೆ ಮೋಟಾರ್‌ಸ್ಪೋರ್ಟ್ ಹವ್ಯಾಸವನ್ನೂ ಸಹ ಅಜಿತ್ ಕುಮಾರ್ ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ತಮ್ಮ ರೇಸಿಂಗ್ ಬದ್ಧತೆಯ ಭಾಗವಾಗಿ ಸಿಲ್ವರ್‌ಸ್ಟೋನ್ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಫ್ರೆಂಚ್ ಚಾಲಕ ರೊಮೈನ್ ವೋಜ್ನಿಯಾಕ್ ಜೊತೆಗೆ ಅಜಿತ್ ರೆಡ್‌ಆಂಟ್ ಬೈ ವಿರಾಜ್‌ಗಾಗಿ LMP3 ಪ್ರೊ/ಆಮ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಗ್ರಿಡ್‌ನಲ್ಲಿ ಅಖಿಲ ಭಾರತೀಯ ಜೋಡಿಯೂ ಇರಲಿದೆ, ಮಾಜಿ ಫಾರ್ಮುಲಾ ಒನ್ ಚಾಲಕ ನರೇನ್ ಕಾರ್ತಿಕೇಯನ್ ಮತ್ತು ಆದಿತ್ಯ ಪಟೇಲ್ LMP3 ತರಗತಿಯಲ್ಲಿ ಅಜಿತ್ ರೆಡ್‌ಆಂಟ್ ರೇಸಿಂಗ್‌ಗಾಗಿ ಸ್ಪರ್ಧಿಸಲಿದ್ದಾರೆ ಎನ್ನುವುದು ವಿಶೇಷವಾಗಿದೆ.

ವಿಜಯ್ ಬಗ್ಗೆ ಮೆಚ್ಚಿಕೊಂಡ ಅಜಿತ್ ಕುಮಾರ್

ಇನ್ನು ನಟ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಭೇಟಿಯ ಬಗ್ಗೆ ಮಾತನಾಡಿದ ಅಜಿತ್ ಕುಮಾರ್ ಅವರು, "ಸಿ ಜೋಸೆಫ್ ವಿಜಯ್ ಅವರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡು ಸಿಲ್ವರ್‌ಸ್ಟೋನ್‌ನಲ್ಲಿ ನಮ್ಮನ್ನು ಭೇಟಿ ಮಾಡಲು ಬಂದಿದ್ದು ತುಂಬಾ ಖುಷಿಯಾಗಿದೆ. ನಾವು ಕಳೆದ 34 ವರ್ಷಗಳಿಂದ ಚಲನಚಿತ್ರೋದ್ಯಮದಲ್ಲಿ ಸಹೋದ್ಯೋಗಿಗಳಾಗಿದ್ದೇವೆ. ಈಗ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷವಾಗಿದೆ' ಅಂತ ಅಜಿತ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+