Vijay And Trisha: ನಟ ವಿಜಯ್‌ - ನಟಿ ತ್ರಿಶಾ ಫೋಟೋ ಲೀಕ್ ಹಿಂದೆ ಆ ಪಕ್ಷದ ಕೈವಾಡ !

ತಮಿಳುನಾಡಿನಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್‌ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ಫೋಟೋ ವಿಚಾರವು ತೀವ್ರ ಚರ್ಚೆಗೆ ಕಾರಣವಾಗಿದೆ. ವಿಜಯ್‌ ಅವರು ತಮಿಳು ಸಿನಿಮಾದಲ್ಲಿ ಈಗಾಗಲೇ ಸಾಲು ಸಾಲು ಹಿಟ್‌ ಮೂವಿಗಳನ್ನು ಕೊಟ್ಟಿದ್ದಾರೆ. ಈಗಲೂ ಅವರ ಮಾರ್ಕೆಟ್ ಹಾಗೂ ಕ್ರೇಜ್ ಕಡಿಮೆ ಆಗಿಲ್ಲ. ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ವಿಜಯ್‌ ಅವರು ಈಚೆಗೆ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಪ್ರಾರಂಭಿಸಿದ್ದಾರೆ.

ಈ ಪಕ್ಷಕ್ಕೆ ತಮಿಳುನಾಡಿನಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಪಕ್ಷದ ಉದ್ಘಾಟನೆ ಸಮಾರಂಭಕ್ಕೆ ಲಕ್ಷಾಂತರ ಜನ ಸೇರಿದ್ದರು. ಇದರ ಬೆನ್ನಲ್ಲೇ ವಿಜಯ್‌ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ಫೋಟೋಗಳು ವೈರಲ್‌ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಈ ಫೋಟೋಗಳನ್ನು ಆಡಳಿತರೂಢ ಡಿಎಂಕೆಯೇ (ದ್ರಾವಿಡ ಮುನ್ನೇತ್ರ ಕಳಗಂ) ಲೀಕ್ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

Vijay and Trisha photos together leaked Annamalai accuses DMK

ನಟ ವಿಜಯ್‌ ಮತ್ತು ನಟಿ ತ್ರಿಶಾ ಕೃಷ್ಣನ್ ಅವರು ಆನ್‌ಸ್ಕ್ರೀನ್‌ನಲ್ಲಿ ಬೆಸ್ಟ್‌ ಜೋಡಿ. ಸೂಪರ್‌ ಡೂಪರ್‌ ಹಿಟ್‌ ಮೂವಿಗಳನ್ನು ಇವರು ಕೊಟ್ಟಿದ್ದಾರೆ. ಇವರಿಬ್ಬರು ಜೊತೆಯಾಗಿ ನಟಿಸಿರುವ ಹಲವು ಸಿನಿಮಾಗಳು ಸಕ್ಸಸ್ ಆಗಿವೆ. ಆಫ್‌ ಸ್ಕ್ರೀನ್‌ನಲ್ಲೂ ಇವರಿಬ್ಬರು ಅತ್ಯುತ್ತಮ ಗೆಳೆಯರು. ಆದರೆ, ಕಳೆದ ಎರಡು ವರ್ಷಗಳಿಂದ ಕೆಲವೊಂದು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವರಿಬ್ಬರ ಆತ್ಮೀಯತೆಯ ಬಗ್ಗೆ ಹಲವು ಅನುಮಾನಗಳು ಶುರುವಾಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಆದರೆ, ಶೂಟಿಂಗ್‌ ಸಮಯದಲ್ಲಿ ತೆಗೆದ ಫೋಟೋಗಳನ್ನು ಉದ್ದೇಶ ಪೂರ್ವಕವಾಗಿ ಅಲ್ಲಿನ ಕೆಲವು ಪಕ್ಷಗಳೇ ವೈರಲ್ ಮಾಡುತ್ತಿವೆ ಎನ್ನುವ ಆರೋಪವೂ ಇದೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಇದೀಗ ವಿಮಾನ ನಿಲ್ದಾಣದ ಫೋಟೋಗಳು ಲೀಕ್ ಆಗಿವೆ.

Vijay and Trisha photos together leaked Annamalai accuses DMK

ತಮಿಳುನಾಡಿನಲ್ಲಿ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಪಕ್ಷ ಪ್ರಾರಂಭವಾದ ಬೆನ್ನಲ್ಲೇ ಕೋಟ್ಯಾಂತರ ಜನ ಈ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ವಿಜಯ್‌ ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತರೆ ಪಕ್ಷಕ್ಕೆ ಕೆಟ್ಟ ಹೆಸರು ಹಾಗೂ ಪ್ರಾರಂಭದಲ್ಲೇ ಹಿನ್ನಡೆಯಾಗಲಿದೆ ಎನ್ನುವ ಲೆಕ್ಕಾಚಾರದಿಂದ ಅವರು ಸ್ಪರ್ಧೆ ಮಾಡಿರಲಿಲ್ಲ.

ಅಲ್ಲದೆ, ವಿಜಯ್‌ ಅಭಿಮಾನಿ ಸಂಘಗಳ ಮೂಲಕವೇ ಅವರು ತಮ್ಮ ರಾಜಕೀಯ ಪಕ್ಷಕ್ಕೆ ಭದ್ರ ಬುನಾದಿಯನ್ನು ಹಾಕಿಕೊಂಡಿದ್ದಾರೆ. 2026ನೇ ಸಾಲಿನಲ್ಲಿ ನಡೆಯುಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅವರು ಮೂರು ವರ್ಷ ಇರುವಾಗಲೇ ಪಕ್ಷ ಕಟ್ಟಿ, ಅಧಿಕಾರಕ್ಕೆ ಬರಲೇಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ನಟ ವಿಜಯ್‌ ಹಾಗೂ ತ್ರಿಶಾ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಹಾಗೂ ತಮಿಳುನಾಡಿನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

Vijay and Trisha photos together leaked Annamalai accuses DMK

ಅಣ್ಣಾಮಲೈ ಗಂಭೀರ ಆರೋಪ: ಇನ್ನು ಇವರಿಬ್ಬರ ಫೋಟೋಗಳು ವೈರಲ್ ಆಗುತ್ತಿರುವ ಬಗ್ಗೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಗಂಭೀರ ಆರೋಪ ಮಾಡಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಜಯ್ ಹಾಗೂ ನಟಿ ತ್ರಿಶಾ ಅವರ ಫೋಟೋಗಳನ್ನು ತಮಿಳುನಾಡಿನ ಗುಪ್ತಚರ ಇಲಾಖೆ ತೆಗೆದಿದೆ. ಆ ಫೋಟೋಗಳನ್ನು ಡಿಎಂಕೆ ಐಟಿ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಜಯ್ ಮತ್ತು ತ್ರಿಷಾ ಅವರು ಭದ್ರತಾ ತಪಾಸಣೆಗೆ ಒಳಗಾಗುತ್ತಿರುವ ಖಾಸಗಿ ವೀಡಿಯೊವನ್ನು ರಾಜ್ಯ ಗುಪ್ತಚರ ಇಲಾಖೆಯಿಂದ ಕಳುಹಿಸಲಾಗಿದೆ ಎನ್ನುವ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ. ಈ ವಿಚಾರ ಇದೀಗ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚನಕ್ಕೆ ಕಾರಣವಾಗಿದೆ.

ಫೋಟೋ ವೈರಲ್: ಗೋವಾದಲ್ಲಿ ನಡೆದ ನಟಿ ಕೀರ್ತಿ ಸುರೇಶ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸ ವಿಜಯ್ ಮತ್ತು ತ್ರಿಶಾ ಅವರು ಖಾಸಗಿ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು ಎನ್ನಲಾದ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+