ವಿಡಿಯೊ: 52ರ ವಧುವಿನೊಂದಿಗೆ 21ರ ವರನ ಮದುವೆ- ಶಾಕ್ ಆದ ಮಂದಿ
ಪ್ರೀತಿಗೆ ವಯಸ್ಸು ಮತ್ತು ಮಿತಿಯಿಲ್ಲ. ಒಬ್ಬ ವ್ಯಕ್ತಿಯು ಯಾರನ್ನಾದರೂ ಪ್ರೀತಿಸಿದಾಗ, ಆ ವ್ಯಕ್ತಿಯು ಎಲ್ಲವನ್ನೂ ಮರೆತುಬಿಡುತ್ತಾನೆ. ಅಂಥದ್ದೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ 21 ವರ್ಷದ ಯುವಕ ತನ್ನ ಚಿಕ್ಕಮ್ಮನ ವಯಸ್ಸಿನ ಮಹಿಳೆಯನ್ನು ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.
ತನಗಿಂತ 31 ವರ್ಷ ದೊಡ್ಡವಳನ್ನು ಮದುವೆಯಾಗಲು ಹುಡುಗ ವೇದಿಕೆಯ ಮೇಲೆ ನಿಂತಿರುವ ವಿಡಿಯೋ ವೈರಲ್ ಆಗಿದೆ. ಈ ವೈರಲ್ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಈ ಫೋಟೋ ಕಂಡು ಜನ ಹೆಣ್ಣಿನ ಸೌಂದರ್ಯಕ್ಕೆ ಹುಡುಗ ಮಾರು ಹೋಗಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮಹಿಳೆ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾಳೆ.

ಪ್ರೀತಿಗೆ ವಯಸ್ಸಿಲ್ಲ
ಈ ವಿಶಿಷ್ಟ ಜೋಡಿಯ ವಿವಾಹದ ವೈರಲ್ ವಿಡಿಯೊದಲ್ಲಿ, ವ್ಯಕ್ತಿಯೊಬ್ಬ 21 ವರ್ಷದ ವರನನ್ನು 'ನಿಜವಾಗಿಯೂ ನೀವು ಹೆಚ್ಚು ವಯಸ್ಸಾದ ಮಹಿಳೆಯನ್ನು ಮದುವೆಯಾಗಿದ್ದೀರಾ?' ಎಂದು ಕೇಳಿದಾಗ, ವರನು ಪ್ರೀತಿಗೆ ವಯಸ್ಸಿಲ್ಲ ಎಂದು ಉತ್ತರಿಸಿದ್ದಾನೆ. ಪ್ರೀತಿಯಲ್ಲಿ ಹೃದಯ ಮಾತ್ರ ಕಾಣುತ್ತದೆ ಎಂದು ಹುಡುಗ ಹೇಳಿದ್ದಾನೆ.

ಕೆಂಪು ಸೀರೆಯುಟ್ಟ 53ರ ವಧು
ವೇದಿಕೆಯ ಮೇಲೆ ನಿಂತಿರುವ ಮದುಮಗ ಮತ್ತು ಅವನ ಪಕ್ಕದಲ್ಲಿ ಅವನ ತಾಯಿಯ ವಯಸ್ಸಿನ ಮಹಿಳೆ ನಿಂತಿರುವುದನ್ನು ಕಾಣಬಹುದು. ಮಹಿಳೆ ಕೆಂಪು ಸೀರೆಯುಟ್ಟು ಸರಳವಾಗಿ ವಧುವಿನಂತೆ ಕಾಣಿಸುತ್ತಾರೆ. ಬಾಲಕ ಮತ್ತು ಮಹಿಳೆ ಇಬ್ಬರೂ ಕೊರಳಿಗೆ ಹೂ ಮಾಲೆಯನ್ನು ಹಾಕಿಕೊಂಡಿದ್ದಾರೆ. 52 ವರ್ಷದ ಮಹಿಳೆಯನ್ನು ಮದುವೆಯಾಗುವ ಮೂಲಕ ನೀವು ಸರಿಯಾದ ಕೆಲಸವನ್ನು ಮಾಡಿದ್ದೀರಾ? ಎಂಬ ಪ್ರಶ್ನೆಗೆ ಯುವಕ, ತುಂಬಾ ವರ್ಷಗಳ ನಂತರ ನಾನು ನಿಜವಾದ ಪ್ರೀತಿಯನ್ನು ಕಂಡುಕೊಂಡೆ ಎಂದಿದ್ದಾನೆ.

ಪ್ರೀತಿ ಕುರುಡು
ಈ ಮದುವೆಯಿಂದ ನಿಮಗೆ ಸಂತೋಷವಾಗಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಿಳೆ, 'ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ. ನಾವು ಮೂರು ವರ್ಷಗಳಿಂದ ಪರಸ್ಪರ ತಿಳಿದಿದ್ದೇವೆ. ನಾನು ನನಗಿಂತ ಹೆಚ್ಚಾಗಿ ಅವರನ್ನು ನಂಬುತ್ತೇನೆ. ನಾನು ಅವನನ್ನು ಮೂರು ವರ್ಷಗಳಿಂದ ನೋಡಿದ್ದೇನೆ, ಬಹಳ ವರ್ಷಗಳ ನಂತರ ನಾನು ಅವನಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಂಡೆ' ಎಂದಿದ್ದಾರೆ.

30 ಸಾವಿರಕ್ಕೂ ಹೆಚ್ಚು ವೀಕ್ಷಣೆ
ಅಮಿತ್ ಚತುರ್ವೇದಿ ಎಂಬ ಫೇಸ್‌ಬುಕ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, 'ಮಹಿಳೆಗೆ ಮಾಲೆ ಹಾಕಿದ ತಕ್ಷಣ ಕಲಿಯುಗದ ಕೊನೆಯ ಹಂತ ಪ್ರಾರಂಭವಾಯಿತು'. ಈ ವಿಡಿಯೊ ಇದುವರೆಗೆ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.












Click it and Unblock the Notifications