ವಿಡಿಯೋ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಹೃದಯಾಘಾತ: ಪ್ರಾಣ ಉಳಿಸಿದ 'ದೇವರು'

ಸಾಮಾನ್ಯವಾಗಿ ಆರೋಗ್ಯ ತೀವ್ರ ಹದಗೆಟ್ಟಾಗ ವೈದ್ಯರು ಜೀವ ಕಾಪಾಡುವ ದೇವರಾಗುತ್ತಾರೆ. ಆದರೆ ಘಟನೆಯೊಂದರಲ್ಲಿ ಸಿಐಎಸ್ಎಫ್ ಸಬ್ ಇನ್ಸ್‌ಪೆಕ್ಟರ್ ರೋಗಿಯ ಪ್ರಾಣ ಉಳಿಸುವ ಮೂಲಕ ದೇವರಾಗಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾದ ಹಿರಿಯ ನಾಗರಿಕರಿಗೆ ಸಿಐಎಸ್ಎಫ್ ನೆರವಾಗಿದ್ದಾರೆ. ಸಮಯ ಪ್ರಜ್ಞೆ ತೋರಿ ವೈದ್ಯರಂತೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಮೂರು-ನಾಲ್ಕು ಕಾನ್‌ಸ್ಟೆಬಲ್‌ಗಳು ಹೃದಯಾಘಾತದಿಂದ ವಿಮಾನ ನಿಲ್ದಾಣದಲ್ಲಿ ಬಿದ್ದ ಪ್ರಯಾಣಿಕರಿಗೆ ತಕ್ಷಣವೇ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಚಿಕಿತ್ಸೆ ನೀಡಿದ್ದಾರೆ. ಇದರ ಸುಮಾರು 53 ಸೆಕೆಂಡುಗಳ ವಿಡಿಯೊವನ್ನು ಟ್ವೀಟ್ ಮಾಡುವ ಮೂಲಕ ಸಿಐಎಸ್ಎಫ್ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಯೋಧರು ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಪ್ರಯಾಣಿಕ ಜೀವ ಉಳಿಸಿದ ಸಿಐಎಸ್‌ಎಫ್ ಯೋಧ

ಪ್ರಯಾಣಿಕ ಜೀವ ಉಳಿಸಿದ ಸಿಐಎಸ್‌ಎಫ್ ಯೋಧ

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಟ್‌ನ (ಸಿಐಎಸ್‌ಎಫ್) ಯೋಧ ಮಾನವೀಯತೆಗೆ ಮಾದರಿಯಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ಹಿರಿಯ ನಾಗರಿಕರ ಪ್ರಾಣ ಉಳಿಸುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಸಿಐಎಸ್ಎಫ್ ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆ ಮತ್ತು ಸಿಪಿಆರ್ ಚಿಕಿತ್ಸೆಯಿಂದಾಗಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಅಮೂಲ್ಯವಾದ ಜೀವ ಉಳಿದಿದೆ.

ಪ್ರಯಾಣಿಕನಿಗೆ ಸಿಪಿಆರ್ ಚಿಕಿತ್ಸೆ

ಪ್ರಯಾಣಿಕನಿಗೆ ಸಿಪಿಆರ್ ಚಿಕಿತ್ಸೆ

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಿಪಿಆರ್ ಚಿಕಿತ್ಸೆ ಮತ್ತು ಪ್ರಯಾಣಿಕರ ಜೀವ ಉಳಿಸಿದ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ. ವಿಡಿಯೋದಲ್ಲಿ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಆಗಿದ್ದೇನು ಅಂದರೆ ಹಿರಿಯ ನಾಗರಿಕ ಪ್ರಯಾಣಿಕರು ಹೃದಯಾಘಾತದಿಂದ ವಿಮಾನ ನಿಲ್ದಾಣದಲ್ಲಿ ಕುಸಿದು ಬೀಳುತ್ತಾರೆ. ಅಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿ ಕೂಡಲೇ ಸ್ಥಳದಲ್ಲೇ ಸಿಪಿಆರ್ ಚಿಕಿತ್ಸೆ ನೀಡಲು ಆರಂಭಿಸುತ್ತಾರೆ. ಎದೆಯ ಮೇಲೆ ಒತ್ತಡ ನೀಡಿ, ಹಿರಿಯ ನಾಗರೀಕನಿಗೆ ಪ್ರಜ್ಞೆ ಬರಿಸಲು ಪ್ರಯತ್ನಿಸುತ್ತಾರೆ.

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂಧಿಯ ಮುಂದೆ 65 ವರ್ಷದ ನಾರಾಯಣ ಚೌಧರಿ ಎಂಬ ಪ್ರಯಾಣಿಕ ಕುಸಿದು ಬಿದ್ದಿದ್ದಾರೆ ಎಂದು ಎಕ್ಸ್‌ಪ್ರೆಸ್ ವರದಿ ಮಾಡಿದೆ. ಚೌಧರಿ ತಮ್ಮ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು. ಅವರು ಅಸ್ವಸ್ಥತೆಯ ಬಗ್ಗೆ ದೂರಿದರು ಮತ್ತು ಸ್ವಲ್ಪ ಸಮಯದ ನಂತರ ಕುಸಿದುಬಿದ್ದರು ಎಂದು ತಿಳಿದು ಬಂದಿದೆ.

ಕಪಿಲ್ ರಾಘವ್ ಸಮಯ ಪ್ರಜ್ಞೆಗೆ ಮೆಚ್ಚುಗೆ

ಪ್ರಯಾಣಿಕರ ಆರೋಗ್ಯ ಹದಗೆಟ್ಟಾಗ ಆವರಣದಲ್ಲಿದ್ದ ಸಿಐಎಸ್‌ಎಫ್ ಸಬ್ ಇನ್‌ಸ್ಪೆಕ್ಟರ್ ಕಪಿಲ್ ರಾಘವ್ ಅವರಿಗೆ ಮಾಹಿತಿ ನೀಡಲಾಯಿತು. ರಾಘವ್ ಅವರು 65 ವರ್ಷದ ನಾರಾಯಣ್ ಚೌಧರಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ನೀಡಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ತುರ್ತು ವಿಧಾನವು ವ್ಯಕ್ತಿಯ ಉಸಿರಾಟ ಅಥವಾ ಹೃದಯ ಬಡಿತ ನಿಲ್ಲದೇ ಇರಲು ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ.

ಚೌಧರಿ ಆರೋಗ್ಯದಲ್ಲಿ ಸುಧಾರಣೆ

ಚೌಧರಿ ಆರೋಗ್ಯದಲ್ಲಿ ಸುಧಾರಣೆ

ಚೌಧರಿ ಅವರು ಹೈದರಾಬಾದ್‌ಗೆ ತೆರಳುತ್ತಿದ್ದರು ಎಂದು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪೋಸ್ಟ್ ಮಾಡಲಾದ ಮೂಲಗಳು ತಿಳಿಸಿವೆ. ವಿಮಾನಕ್ಕಾಗಿ ಕಾಯುತ್ತಿದ್ದ ಚೌಧರಿ ಅವರು ಬೆಳಿಗ್ಗೆ 8 ಗಂಟೆ ಸುಮಾರಿಗೆ ಹೃದಯ ನೋವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ನಂತರ ಅವರಿಗೆ ಹೃದಯಾಘಾತವಾಯಿತು. ಸಿಐಎಸ್ಎಫ್ ಅಧಿಕಾರಿ ಸಮಯ ಪ್ರಜ್ಞೆಯಿಂದ ಅವರಿಗೆ ಸಹಾಯ ಮಾಡಿದರು. ಸಿಐಎಸ್ಎಫ್ ಸಿಬ್ಬಂದಿ ವೈದ್ಯಕೀಯ ನೆರವು ಪಡೆಯುವವರೆಗೂ ಪ್ರಯಾಣಿಕನೊಂದಿಗೆ ಇದ್ದರು. ನಂತರ ಪ್ರಯಾಣಿಕ ಚೌಧರಿ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+