ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ನಟಿ ರೇಖಾ ಮತದಾನ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 5: ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಇಂದು ಸಂಜೆ 7 ಗಂಟೆಯ ಹೊತ್ತಿಗೆ ಫಲಿತಾಂಶವೂ ಲಭ್ಯವಾಗಲಿದೆ.

ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎನ್ ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರನ್ನು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಎದುರಿಸಲಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯ ಮಹತ್ವದ ಅಪ್ ಡೇಟ್ಸ್ 'ಒನ್ ಇಂಡಿಯಾ'ದಲ್ಲಿ ನಿಮಗಾಗಿ ಲಭ್ಯ...

1:00 : ರಾಜ್ಯ ಸಭಾ ಸದಸ್ಯರಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ನಟಿ ರೇಖಾ, ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿ, ಸಂಸದೆ ಡಿಂಪಲ್ ಯಾದವ್ ಮತದಾನ

12:05: ಉಪರಾಷ್ಟ್ರಪತಿ ಚುನಾವಣೆಯಲ್ಲಿಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತಚಲಾಯಿಸಿದರು. ಈ ಸಮಯದಲ್ಲಿ ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಸಹ ಉಪಸ್ಥಿತರಿದ್ದರು.

11:45: ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ಮತದಾನ

11:15 : ರಾಜ್ಯ ಸಭಾ ಸದಸ್ಯೆ, ಬಾಕ್ಸರ್ ಮೇರಿ ಕೋಮ್ , ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಕಾಂಗ್ರೆಸ್ ಮುಖ್ಯಸ್ಥ ಜೈರಾಮ್ ರಮೇಶ್ ಮುಂತಾದವರು ಮತ ಚಲಾಯಿಸಿದರು.

11:00 : ಸಂಸತ್ತಿನಲ್ಲಿ ಮತಚಲಾಯಿಸುವುದಕ್ಕೆ ಮೂರು ಸಾಲುಗಳನ್ನು ಮಾಡಲಾಗಿತ್ತು. ಒಂದು ಸಾಲಿನಲ್ಲಿ ಲೋಕಸಭಾ ಸದಸ್ಯರು, ಒನ್ನೊಂದು ಸಾಲಿನಲ್ಲಿ ರಾಜ್ಯಸಭಾ ಸದಸ್ಯರು ಮತ್ತು ಮೂರನೇ ಸಾಲಿನಲ್ಲಿ ಮಹಿಳಾ ಸಂಸದರಿದ್ದರು.

10:25 : ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ವೋಟಿಂಗ್ ಹಾಲ್ ತೆರೆಯುವವ ಕೆಲವು ಹೊತ್ತು ಬಾಗಿಲಿನಲ್ಲೇ ನಿಂತಿದ್ದರು. ನಂತರ ಸಾಲಿನಲ್ಲೇ ನಿಂತು ಮತದಾನ ಮಾಡಿದರು.

9:50 : ಉಪರಾಷ್ಟ್ರಪತಿ ಚುನಾವಣೆಗೆ ಮತಚಲಾಯಿಸಲು ಪಾರ್ಲಿಮೆಂಟಿಗೆ ಬಂದಿಳಿದ ವೆಂಕಯ್ಯ ನಾಯ್ಡು. ವೆಂಕಯ್ಯ ನಾಯ್ಡು ಎನ್ ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ

9:55 : ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಸ್ಪರ್ಧಿಸುತ್ತಿಲ್ಲ, ಭಾರತದ ಉಪರಾಷ್ಟ್ರಪತಿ ಹುದ್ದೆಗಾಗಿ ಸ್ಪರ್ಧಿಸಿದ್ದೇನೆ ಅಷ್ಟೆ: ಮಾಧ್ಯಮಕ್ಕೆ ವೆಂಕಯ್ಯ ನಾಯ್ಡು ಹೇಳಿಕೆ

ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎನ್ ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರನ್ನು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಎದುರಿಸಲಿದ್ದಾರೆ.

ಹಾಲಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಅವರ ಅಧಿಕಾರಾವಧಿ ಆಗಸ್ಟ್ 10 ರಂದು ಮುಗಿಯಲಿದ್ದು, ಉಪರಾಷ್ಟ್ರಪತಿ ಚುನಾವಣೆಗೆ ಯಾವುದೇ ಪಕ್ಷಗಳೂ ವಿಪ್ ಜಾರಿಮಾಡುವಂತಿಲ್ಲ.

ಉಪರಾಷ್ಟ್ರಪತಿಯವರನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Vice President of India: Voting starts at 10 am on Aug 5th

ಇಂದು ಸಂಜೆ 7 ಗಂಟೆಯ ಹೊತ್ತಿಗೆ ಭಾರತದ ಮುಂದಿನ ಉಪರಾಷ್ಟ್ರಪತಿ ಯಾರು ಎಂಬ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Voting for next vice president of India will be taking place on August 5th at 10 am. NDA's Venkaiah Naidu will face UPA's Gopalakrishna Gandhi in the election.
Please Wait while comments are loading...