Sankarshan Thakur: ದಿ ಟೆಲಿಗ್ರಾಫ್‌ನ ಸಂಪಾದಕ ಸಂಕರ್ಷಣ್ ಠಾಕೂರ್ (63) ನಿಧನ

ಬೆಂಗಳೂರು, ಸೆಪ್ಟಂಬರ್ 09: ಹಿರಿಯ ಪತ್ರಕರ್ತ, ದಿ ಟೆಲಿಗ್ರಾಫ್‌ನ ಸಂಪಾದಕ ಸಂಕರ್ಷಣ್ ಠಾಕೂರ್ ಅವರು ಸೋಮವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 63ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ದೇಶದ ಅತ್ಯುತ್ತಮ ಸಾಹಿತ್ಯ ಪತ್ರಕರ್ತರಲ್ಲಿ ಒಬ್ಬರಾದ ಸಂಕರ್ಷಣ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಪಲಕಾರಿಯಾಗಲಿಲ್ಲ. ಇವರು 1962 ರಂದು ಜುಲೈ 13 ಪಾಟ್ನಾದಲ್ಲಿ ಜನಿಸಿದರು. ಇಲ್ಲಿನ ಸೇಂಟ್ ಕ್ಸೇವಿಯರ್ಸ್ ಮತ್ತು ದೆಹಲಿಯ ಸೇಂಟ್ ಕ್ಸೇವಿಯರ್ಸ್‌ನಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಬಿಎ ಪದವಿ ಹೊಂದಿದ್ದರು.

Veteran Journalist Sankarshan Thakur Passes Away at 63

ಕೆಲ ಸಮಯದ ನಂತರ 1984 ರಲ್ಲಿ ಭಾನುವಾರ ನಿಯತಕಾಲಿಕೆ ಜೊತೆಗೆ ತಮ್ಮ ಪತ್ರಿಕೋದ್ಯಮ ವೃತ್ತಿ ಬದುಕು ಆರಂಭಿಸಿ ಅವರು, ಎಕ್ಸ್‌ಪ್ರೆಸ್, ತೆಹಲ್ಕಾ ಮತ್ತು ಥರ್ಡ್ ಐ ಟಿವಿಯಲ್ಲಿ ಕೆಲಸ ಮಾಡಿದ್ದಾರೆ. ಬಳಿಕ 2009 ರಲ್ಲಿ ತಮ್ಮ ಎರಡನೇ ಅವಧಿಗೆ ದಿ ಟೆಲಿಗ್ರಾಫ್‌ಗೆ ಮರಳಿದರು. ಅವರ ಬರವಣಿಗೆ, ವಿಷಯಗಳ ಒಳನೋಟಗಳು ದಶಕಗಳಿಂದ ಭಾರತೀಯ ಪತ್ರಿಕೋದ್ಯಮ ಶ್ರೀಮಂತಗೊಳಿಸಿವೆ. ರಾಜಕಾರಣಗಳಿ ಪೈಕಿ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರ ನಿರ್ಣಾಯಕ ರಾಜಕೀಯ ಜೀವನಚರಿತ್ರೆಗಳು ಮತ್ತು ಕಾರ್ಗಿಲ್ ಯುದ್ಧ ಸೇರಿ ಹಲವಾರು ವಿಷಯಗಳ ಬಗ್ಗೆ ಪುಸ್ತಗಳನ್ನು ಹೊರ ತಂದಿದ್ದಾರೆ.

ವೃತ್ತಿ ಬದುಕಿಗೆ ಸಿಕ್ಕ ಗೌರವಗಳು

ನಿರ್ಭೀತ ವರದಿಗಾರರಾಗಿದ್ದ ಸಂಕರ್ಷಣ್ ಠಾಕೂರ್ ಕಾರ್ಗಿಲ್ ಯುದ್ಧದ ಮುಂಚೂಣಿ, ಇಂದಿರಾ ಗಾಂಧಿಯವರ ಹತ್ಯೆ, ಭೋಪಾಲ್ ದುರಂತ, 1984ರ ಸಿಖ್ ವಿರೋಧಿ ಗಲಭೆಗಳು ಹಾಗೂ ಕಾಶ್ಮೀರದ ಸಂಗತಿಗಳು, ಶ್ರೀಲಂಕಾದ ಅಂತರ್ಯುದ್ಧ, ಪಾಕಿಸ್ತಾನದಲ್ಲಿನ ಸಾಮಾಜಿಕ-ರಾಜಕೀಯ ಪ್ರವಾಹ ಇನ್ನಿತರ ದೇಶ ನಿರ್ಣಾಯಕ ಘಟನೆಗಳಿಗೆ ಜೀವ ತುಂಬಿದ್ದರು.

ಅವರ ವೃತ್ತಿ ಸೇವಾ ಕೊಡುಗೆ ಹಾಗೂ ರಾಜಕೀಯ ಪತ್ರಿಕೋದ್ಯಮದಲ್ಲಿನ ಶ್ರೇಷ್ಠತೆಗಾಗಿ ಪ್ರೇಮ್ ಭಾಟಿಯಾ ಪ್ರಶಸ್ತಿ (2001) ಮತ್ತು ಅಪ್ಪನ್ ಮೆನನ್ ಫೆಲೋಶಿಪ್ (2003) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮವಾರ ಸೆ.8ರಂದು ಅವರು ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+