ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯರ ಜಗಳದಲ್ಲಿ ಕೂಸು ಸತ್ತೋಯ್ತು! ರಾಜಸ್ಥಾನದಲ್ಲೊಂದು ಹೇಯಕೃತ್ಯ!

|
Google Oneindia Kannada News

Recommended Video

Gorakhpur Tragedy Repeats : 61 children lost their lives in 72 hours | Oneindia Kananda

ಜೋದ್ಪುರ, ಆಗಸ್ಟ್ 30: ಒಂಬತ್ತು ತಿಂಗಳು ಗರ್ಭದಲ್ಲಿ ಕಾಪಿಟ್ಟುಕೊಂಡಿದ್ದ ಮುದ್ದು ಕಂದನನ್ನು ನೋಡುವ ತಾಯಿಯ ತವಕ, ಮನೆಗೆ ನಲ್ಮೆಯ ಪುಟಾಣಿಯೊಬ್ಬನ್ನು ಬರಮಾಡಿಕೊಳ್ಳುವ ಕುಟುಂಬಸ್ಥರ ಉತ್ಸಾಹ ಎಲ್ಲ ಆಸೆಗಳೂ ಸೂತಕದ ಸುದ್ದಿಯೊಂದಿಗೆ ಸತ್ತುಹೋಗಿವೆ!

72 ಗಂಟೆಗಳಲ್ಲಿ 61 ಮಕ್ಕಳ ಸಾವು: ಗೋರಖ್ ಪುರದಲ್ಲಿ ಮತ್ತೆ ಮರಣಮೃದಂಗ!72 ಗಂಟೆಗಳಲ್ಲಿ 61 ಮಕ್ಕಳ ಸಾವು: ಗೋರಖ್ ಪುರದಲ್ಲಿ ಮತ್ತೆ ಮರಣಮೃದಂಗ!

ಮಗು ಹುಟ್ಟಿದ ಸಿಹಿ ಸುದ್ದಿ ನೀಡಬೇಕಿದ್ದ ವೈದ್ಯರೇ ವೈಯಕ್ತಿಕ ಜಗಳದಿಂದಾಗಿ ಮಗುವನ್ನೇ ಸಾಯಿಸಿದ ಹೇಯ ಘಟನೆ ರಾಜಸ್ಥಾನದ ಜೋದ್ಪುರದ ಆಸ್ಪತ್ರೆಯೊಂದರಲ್ಲಿ ನಡೆದಿದೆ! ಜೋದ್ಪುರದಲ್ಲೇ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದ್ದ ಉಮೈದ್ ಆಸ್ಪತ್ರೆಯ ಅಸಲಿ ಬಣ್ಣವನ್ನು ವಿಡಿಯೋವೊಂದು ಬಯಲುಮಾಡಿದ್ದು, ಅಹಂಕಾರದೆದುರು ಮಾನವೀಯತೆ ಸಾವಿಗೀಡಾಗುವ ವಿಷಾದನೀಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

Verbal figth between 2 doctors kills a baby in Jodhpur Umaid hospital

ಹೆರಿಗೆಗೆಂದು ಬಂದಿದ್ದ ಮಹಿಳೆಯೊಬ್ಬರನ್ನು ಉಮೈದ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಗರ್ಭದಲ್ಲಿರುವ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಸಿಸೆರಿಯನ್ ಮಾಡುತ್ತಿದ್ದ ವೈದ್ಯರುಗಳು ಇದ್ದಕ್ಕಿಂದ್ದಂತೇ ವೈಯಕ್ತಿಕ ನಿಂದನೆ ಆರಂಭಿಸಿದ ಪರಿಣಾಮ ತುರ್ತು ಶಸ್ತ್ರ ಚಿಕಿತ್ಸೆಯ ಬಗೆಗಿನ ಗಮನವೇ ಇಲ್ಲದಂತಾಗಿದೆ!

ಇಬ್ಬರು ವೈದ್ಯರ ಮಾತಿನ ಚಕಮಕಿಯ ನಡುವಲ್ಲಿ ನರ್ಸ್ ಗಳೆಲ್ಲ ಮೌನಸಾಕ್ಷಿಯಾಗಿ ನಿಂತಿರುವ ವಿಡಿಯೋವನ್ನು ಅನಾಮಿಕ ವ್ಯಕ್ತಿಯೊಬ್ಬರು ಚಿತ್ರೀಕರಿಸಿ ಮಾಧ್ಯಮಕ್ಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳೆಲ್ಲ ಹರಿದಾಡುತ್ತ, ವೈದ್ಯಲೋಕದ ಕುರಿತು ಜನಸಾಮಾನ್ಯನಲ್ಲಿ ಅಸಹ್ಯಭಾವವೊಂದನ್ನು ಮೂಡಿಸುತ್ತಿದೆ.

ಸಿಸೆರಿಯನ್ ಮಾಡುವ ಬದಲು ಜಗಳದಲ್ಲಿ ಮೈಮರೆತು ಒಬ್ಬ ಅಮಾಯಕ ಮಗುವನ್ನು ಕೊಂದ ಡಾ ನೈನ್ವಾಲ್ ಮತ್ತು ಡಾ ತಾಕ್ ಅವರನ್ನು ಕೆಲಸದಿಂದ ಉಚ್ಚಾಟಿಸಲಾಗಿದೆ.

ಇಂಥವರನ್ನು ಮೊದಲು ಜೈಲಿಗಟ್ಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ರುಚ್ಚಿಗೆದ್ದಿದ್ದಾರೆ.

English summary
Doctors in Umaid hospital in Jodhpur, Rajasthan fight while operating on a pregnant woman, the woman lost her baby. The video of verbal fight between two doctors is becoming viral now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X