SWR: ವಾಸ್ಕೋಡಗಾಮ ರೈಲು ಸಂಚಾರ ಮೂಲ ಮಾರ್ಗದಲ್ಲಿ ಮತ್ತೆ ಕಾರ್ಯಾಚರಣೆ, ವೇಳಾಪಟ್ಟಿ

ಬೆಂಗಳೂರು, ಆಗಸ್ಟ್ 13: ದಕ್ಷಿಣ ಮಧ್ಯೆ ರೈಲ್ವೆಯು ವಾಸೋಡ ಗಾಮ-ಜಸಿದಿಹ್-ವಾಸೋಡ ಗಾಮ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17321/17322) ಅನು ಅದರ ಮೂಲ ಮಾರ್ಗದಲ್ಲಿ ಪುನಃ ಆರಂಭಿಸಲು ರೈಲ್ವೆ ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೂ ಮೊದಲು, ಈ ರೈಲನ್ನು ತಾತ್ಕಾಲಿಕವಾಗಿ ಚಾರ್ಲಪಲ್ಲಿ, ಮೌಲಾ ಅಲಿ ಮತ್ತು ಸಿಕಂದರಾಬಾದ್ ಬದಲಿಗೆ ಚಾರ್ಲಪಲ್ಲಿ, ಮೌಲಾಲಿ ಸಿ ಕ್ಯಾಬಿನ್, ಮೌಲಾಲಿ ಜಿ ಕ್ಯಾಬಿನ್, ಅಮುಗುಡ, ಮತ್ತು ಸನತ್‌ನಗರ ಮೂಲಕ ತಿರುಗಿಸಲಾಗಿತ್ತು. ಇದರಿಂದಾಗಿ ಸಿಕಂದರಾಬಾದ್ ನಿಲ್ದಾಣವನ್ನು ಬೈಪಾಸ್ ಮಾಡಲಾಗಿತ್ತು. ಇದೀಗ ಇದೇ ರೈಲು ಮೂಲ ಮಾರ್ಗದಲ್ಲಿ ಮತ್ತೆ ಸಂಚಾರ ಮಾಡಲಿದೆ. ವೇಳಾಪಟ್ಟಿ ಇಲ್ಲಿದೆ ನೋಡಿದೆ.

ವಾಸೋ ಡ ಗಾಮ-ಜಸಿದಿಹ್ ರೈಲು (17321) ಸೆಪ್ಟೆಂಬರ್ 12 ರಿಂದ ಮತ್ತು ಜಸಿದಿಹ್-ವಾಸೋ ಡ ಗಾಮ ರೈಲು ಸಂಖ್ಯೆ (17322) ಸೆಪ್ಟೆಂಬರ್ 15 ರಿಂದ ಪ್ರಯಾಣ ಆರಂಭವಾಗುವ ದಿನಾಂಕದಿಂದ ತಮ್ಮ ಮೂಲ ಮಾರ್ಗದಲ್ಲಿ ಸಂಚರಿಸಲಿವೆ. ಈ ಮೂಲಕ ಸಿಕಂದರಾಬಾದ್ ನಿಲ್ದಾಣದ ಮೂಲಕ ಹಾದು ಹೋಗಲಿದೆ. ಈ ನಿಲ್ದಾಣಗಳಲ್ಲಿ ಇಳಿಯುವ ಹಾಗೂ ಹತ್ತುವ ಪ್ರಯಾಣಿಕರಿಗೆ ನೇರ ಸಂಪರ್ಕ ಮತ್ತೆ ದೊರಕಲಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

Vasco da Gama Jasidih Weekly Express to Resume Original Route via Secunderabad

ರೈಲ್ವೆ ಅಧಿಕಾರಿಗಳು ವೇಳಾಪಟ್ಟಿ ಪ್ರಕಾರ, ರೈಲು ಸಂಖ್ಯೆ 17321 (ವಾಸ್ಕೋ ಡ ಗಾಮಾ-ಜಸಿದಿಹ್) ಸಿಕಂದರಾಬಾದ್‌ಗೆ 23:15 ಗಂಟೆಗೆ ಆಗಮಿಸಿತ್ತದೆ. ನಂತರ ಅಲ್ಲಿಂದ 23:20 ಗಂಟೆಗೆ ಹೊರಡಲಿದೆ. ಅದೇ ರೀತಿ ರೈಲು ಸಂಖ್ಯೆ 17322 (ಜಸಿದಿಹ್ - ವಾಸೋ ಡ ಗಾಮಾ) ಸಿಕಂದರಾಬಾದ್‌ಗೆ 18:35 ಗಂಟೆಗೆ ತಲುಪಿ ಅಲ್ಲಿಂದ 18:40 ಗಂಟೆಗೆ ಹೊರಡಲಿದೆ. ಇತರ ನಿಲ್ದಾಣಗಳಲ್ಲಿ ಆಗಮನ ಮತ್ತು ನಿರ್ಗಮನದ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೈನಂದಿನ ರೈಲಿಗೆ ಬೇಡಿಕೆ

ಇತ್ತೀಚೆಗೆ ದಕ್ಷಿಣ ಮಧ್ಯ ರೈಲು ಗಣೇಶೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ 2025 ಸಂಬಂಧ ಸಿಕಂದರಾಬಾದ್ -ಅಶೋಕ್ ಪುರಂಗೆ ರೈಲು ಬಿಡಲಾಗಿದೆ. ಈ ರೈಲನ್ನು ಬೀದರ್ ಮತ್ತು ಕಲಬುರಗಿ ಮಾರ್ಗವಾಗಿ ದೈನಂದಿನ ರೈಲಾಗಿ ಪರಿವರ್ತಿಸುವಂತೆ, ಈ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರಿಗೆ ಕರ್ನಾಟಕ ರೈಲು ಬಳಕೆದಾರರು ಆಗ್ರಹಿಸಿದ್ದಾರೆ.

ಕೇಂದ್ರ ರೈಲ್ವೆ ಇಲಾಖೆಯು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ನಿರ್ಲಕ್ಷ್ಯ ಮಾಡಿದ್ದಾರೆ. ರೈಲ್ವೆ ಅಧಿಕಾರಿಗಳು ತಡ ಮಾಡದೇ ಕರ್ನಾಟಕದ ಗಡಿ ಮಾರ್ಗದ ಜಿಲ್ಲೆಗಳ ಅನುಕೂಲಕ್ಕಾಗಿ ಕೂಡಲೇ ಈ ಬೇಡಿಕೆ ಈಡೇರಿಸಬೇಕೆಂದು ರೈಲು ಬಳಕೆದಾರರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+