Vande Sadharan Express Train: ದೇಶಾದ್ಯಂತ 'ಹೊಸ ರೈಲು' ಕಾರ್ಯಾಚರಣೆಗೆ ದಿನಗಣನೆ, ವಿಶೇಷತೆ, ಮಾರ್ಗದ ಮಾಹಿತಿ

ನವದೆಹಲಿ, ನವೆಂಬರ್ 14: ದೇಶದ ರೈಲ್ವೆ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡಲು ಕಾರ್ಯನಿರತವಾಗಿರುವ ಭಾರತೀಯ ರೈಲ್ವೆ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ ನಂತರ ದೇಶಕ್ಕೆ 'ಒಂದೇ ಸಾಧಾರಣ್ ಎಕ್ಸ್‌ಪ್ರೆಸ್ ರೈಲು' (Vande Sadharan Express Rail) ಅನ್ನು ಪರಿಚಯಿಸಲಿದೆ. ಈಗಾಗಲೇ ಈ ರೈಲು ಪ್ರಯೋಗಿಕ ಸಂಚಾರ ಪೂರ್ಣಗೊಳಿಸಿದೆ.

ಹೌದು, ಭಾರತ ಸರ್ಕಾರದ ಉದ್ದೇಶಿತ ಈ 'ಒಂದೇ ಸಾಧಾರಣ್' ಎಕ್ಸ್‌ಪ್ರೆಸ್ ರೈಲು ಕಳೆದ ಅಕ್ಟೋಬರ್ 29ರಂದು ಮುಂಬೈಗೆ ಆಗಮಿಸಿದೆ. ಇಲ್ಲಿ ರೈಲ್ವೆ ಅಧಿಕಾರಿಗಳು ಈ ರೈಲಿನ ಪ್ರಾಯೋಗಿಕ ಕಾರ್ಯಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.

vande-sadharan-express-train

ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಸಿದ ವಂದೇ ಸಾಧಾರಣ್ ರೈಲು ಅಲ್ಲಿಂದ ಅಹಮದಾಬಾದ್‌ಗೆ ಕಳೆದ ನೆವೆಂಬರ್ 8ರಂದು ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿತು. ಮುಂದಿನ ಕೆಲವೇ ದಿಗನಳಲ್ಲಿ ಈ ರೈಲು ಸೇವೆ ದೇಶದ ಜನರು ಪಡೆದುಕೊಳ್ಳಲಿದ್ದಾರೆ.

ಗಂಟೆಗೆ 130 ಕಿಮೀ ವೇಗದಲ್ಲಿ ರೈಲು ಸಂಚಾರ

ಮೂಲಗಳ ಪ್ರಕಾರ ಇದೇ ವರ್ಷ ವಂದೇ ಸಾಧಾರಣ್ ರೈಲು ಪ್ರಯಾಣಿಕರ ಸೇವೆ ಮುಕ್ತವಾಗುವ ಸಾಧ್ಯತೆಗಳು ಇವೆ ಎಂದು ತಿಳಿದು ಬಂದಿದೆ. ಈ ರೈಲು ಪ್ರತಿ ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. 500 ಕೀಲೋ ಮೀಟರ್ ಗಿಂತಲೂ ದೂರದ ಪ್ರದೇಶಗಳಿಗೆ ಪ್ರಯಾಣ ಸೇವೆ ಒದಗಿಸಲು ಈ ರೈಲುಗಳು ಬಳಕೆ ಆಗಲಿದೆ.

ಕಡಿಮೆ ಬೆಲೆಯಲ್ಲಿ ನಾಗರಿಕರಿಗೆ ಉತ್ತಮ ಸೇವೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರಲ್ಲಿ ಎಸಿ ಮತ್ತು ಸ್ವಯಂ ಚಾಲಿತ ಬಾಗಿಲುಗಳು ಇಲ್ಲ ಎನ್ನಲಾಗಿದೆ. ಉಳಿದಂತೆ ಎಲ್ಲ ವ್ಯವಸ್ಥೆಗಳು ಆಧುನಿಕವಾಗಿದೆ. ರೈಲಿನಲ್ಲಿ ಸಿಸಿಟಿವಿ ಇರಲಿದ್ದು, ಜನರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಈ ರೈಲಿನಲ್ಲಿ ಸಾರ್ವಜನಿಕರು ಆರಾಮದಾಯಕ ಪ್ರಯಾಣವನ್ನು ಆನಂದಿಸಬಹುದಾಗಿದೆ.

ರೈಲುಗಳ ವಿಶೇಷತೆಗಳು

ಒಟ್ಟು 22 ಬೋಗಿಗಳನ್ನು ಒಳಗೊಂಡಿರುವ ಈ ವಿಶೇಷ ರೈಲಿನಲ್ಲಿ 14 ಸ್ಲಿಫರ್ ಬೋಗಿಗಳು, ಎಂಟು ಸಾಮಾನ್ಯ ಬೋಗಿಗಳು, ಎರಡು ಲೋಕೊಮೋಟಿವ್ ಎಂಜಿನ್ ಇದ್ದು, 1500ಕ್ಕೂ ಹೆಚ್ಚು ಜನ ಒಂದೇ ಭಾರಿಗೆ ಈ ರೈಲಿನ ಮೂಲಕ ತಮ್ಮ ಗಮ್ಯ ಸ್ಥಳಗಳನ್ನು ತಲುಪಬಹುದಾಗಿದೆ.

vande-sadharan-express-train

ಆದಷ್ಟು ಶೀಘ್ರವೇ ಈ ರೈಲು ದೇಶದ ಮುಂಬೈ-ಅಹ್ಮದಾಬಾದ್ ಹೊರತಾಗಿಯು, ಹೌರಾ-ದೆಹಲಿ, ದೆಹಲಿ-ಮುಂಬೈ, ಪಾಟ್ನಾ-ನವದೆಹಲಿ, ಹೈದರಾಬಾದ್-ನವದೆಹಲಿ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆ ಇದೆ. ಸದ್ಯ ಭಾರತೀಯ ರೈಲ್ವೆ ಇಲಾಖೆಯು ಈ ವಂದೇ ಸಾಧಾರಣ್ ರೈಲನ್ನು ದೇಶದ 30 ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲು ಪ್ಲಾನ್ ಮಾಡಿಕೊಂಡಿದೆ.

ಕರ್ನಾಟಕದಲ್ಲಿ ಓಡಿಸಲು ಬೇಡಿಕೆ

ಅಂದಾಜು 400 ರೈಲುಗಳು ಚೆನ್ನೈ ರೈಲ್ವೆ ಕೋಚ್ ಇಂಟಿಗ್ರೆಟೆಡ್ ಕಾರ್ಖಾನೆಯಲ್ಲಿ ತಯಾರಾಗುತ್ತಿವೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ದೇಶ ಬೇರೆ ಬೇರೆ ಮಾರ್ಗಗಳಂತೆ ಕರ್ನಾಟಕದ ಬೆಂಗಳೂರು-ಬೆಳಗಾವಿ, ಬೆಂಗಳೂರು-ಕಲಬುರಗಿ, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಬೇಕೆಂಬ ಬೇಡಿಕೆ ಇದೆ. ಇದೆಲ್ಲದ್ದಕ್ಕೂ ಆದಷ್ಟು ಶೀಘ್ರವೇ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+