Vande Bharat Sleeper: ಬೆಂಗಳೂರು - ಕರ್ನಾಟಕದ ಜನರಿಗೆ ನವೆಂಬರ್ 1ಕ್ಕೆ ಭರ್ಜರಿ ಗುಡ್‌ನ್ಯೂಸ್, ಹೊಸ ಅಪ್ಡೇಟ್ಸ್‌

ಭಾರತೀಯ ರೈಲ್ವೆ ಇಲಾಖೆಯು ಕರ್ನಾಟಕ ಹಾಗೂ ಬೆಂಗಳೂರಿಗೆ ವಂದೇ ಭಾರತ್ ರೈಲು ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಈಗಾಗಲೇ ಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸಪ್ರೆಸ್ ರೈಲು ವಿಚಾರಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಕೊಡಲಾಗಿದೆ. ಇದರೊಂದಿಗೆ ವಿವಿಧ ರೈಲುಗಳ ವಿಚಾರದಲ್ಲೂ ಭರ್ಜರಿ ಅಪ್ಡೇಟ್ಸ್‌ ಕೊಡಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಭಾರತೀಯ ರೈಲ್ವೆ ಇಲಾಖೆಯು ಪ್ರೀಮಿಯಂ ರಾತ್ರಿ ಸೇವೆಗಳನ್ನು ವಿಸ್ತರಿಸಲು ಸಿದ್ಧತೆ ನಡೆಸಿದೆ. ದೆಹಲಿಯನ್ನು ವಾರಣಾಸಿ ಮತ್ತು ಮುಂಬೈಯನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಎರಡು ವಂದೇ ಭಾರತ್ ಸ್ಲೀಪರ್ ರೈಲುಗಳು ಸಂಚರಿಸುತ್ತಿವೆ. ಇದೀಗ ಮುಂಬೈ-ಬೆಂಗಳೂರು ಸೇವೆಯನ್ನು ನವೆಂಬರ್ 1 ರಂದು ಪ್ರಾರಂಭಿಸಲು ನಿರ್ಧರಿಸಲಾಗಿದೆ, ಆದರೆ ದೆಹಲಿ-ವಾರಣಾಸಿ ರೈಲು ಸೇವೆಯು ಅಕ್ಟೋಬರ್ 31ರ ವೇಳೆಗೆ ಸಂಚಾರ ಪ್ರಾರಂಭವಾಗುವ ಸಾಧ್ಯತೆ ಇದೆ.

Vande Bharat Sleeper Big News for Bengaluru and Karnataka on November 1 Latest Update

ಈ ಹೊಸ ವಂದೇ ಭಾರತ್ ರೈಲು ಸೇವೆಗಳಿಂದ ಬೆಂಗಳೂರಿನಿಂದ ವಿವಿಧ ರೈಲು ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೊಸ ರೈಲು ಸೇವೆಗಳು ಎರಡೂ ಮಾರ್ಗಗಳಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿವೆ. ದೆಹಲಿ-ವಾರಣಾಸಿ ವಂದೇ ಭಾರತ್ ಸ್ಲೀಪರ್ ರೈಲು ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಲು ಸುಮಾರು 12 ಗಂಟೆ ಆಗಲಿದೆ. ಇದೇ ಪ್ರಯಾಣ ವಂದೇ ಭಾರತ್‌ನಲ್ಲಿ ಸುಮಾರು 9.2 ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಮುಂಬೈ-ಬೆಂಗಳೂರು ರೈಲು ಸುಮಾರು 16 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ. ಈಗ ಸಾಮಾನ್ಯವಾಗಿ ಈ ಮಾರ್ಗದಲ್ಲಿ ಸಂಚರಿಸಲು 22 ಗಂಟೆಗಳು ಬೇಕಾಗುತ್ತದೆ.

ಆದಾಗ್ಯೂ, ಕೆಲವು ರೈಲು ಸಮಯ, ನಿಲುಗಡೆಗಳು ಮತ್ತು ಕಾರ್ಯಾಚರಣೆಯ ವಿವರಗಳು ತಾತ್ಕಾಲಿಕವಾಗಿ ಇರಲಿವೆ. ಅಲ್ಲದೆ ಕೆಲವೊಂದು ನಿರ್ದಿಷ್ಟ ಮಾರ್ಗಗಳಲ್ಲಿ ಸಂಚರಿಸಲಿರುವ ರೈಲುಗಳ ಬಗ್ಗೆ ಇನ್ನಷ್ಟೇ ಅಧಿಕೃತ ದೃಢೀಕರಣದ ಅವಶ್ಯಕತೆ ಇದೆ.

ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಸೇವೆಯು ಕರ್ನಾಟಕ ರಾಜ್ಯೋತ್ಸವದಂದು ನವೆಂಬರ್ 1 ರಂದು ಪ್ರಾರಂಭವಾಗಲಿದೆ. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ ಈ ಸೇವೆಯನ್ನು ಉದ್ಘಾಟಿಸುವುದಾಗಿ ಘೋಷಿಸಿದ್ದಾರೆ. ಈ ಸೇವೆಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಿಗೆ "ದೀಪಾವಳಿ ಉಡುಗೊರೆ" ಎಂದು ಬಿಜೆಪಿ ಹೇಳಿದೆ.

ವಿ.ಸೋಮಣ್ಣ ಅವರ ಪ್ರಕಾರ, ರೈಲು ಸುಮಾರು 16 ಗಂಟೆಗಳಲ್ಲಿ 1,118 ಕಿ.ಮೀ ಮಾರ್ಗವನ್ನು ಕ್ರಮಿಸಲಿದ್ದು, ಪ್ರಯಾಣದ ಸಮಯವನ್ನು ಸುಮಾರು ಎಂಟು ಗಂಟೆಗಳಷ್ಟು ಕಡಿಮೆ ಮಾಡಲಿದೆ. ದೆಹಲಿ-ವಾರಣಾಸಿ ವಂದೇ ಭಾರತ್ ಸ್ಲೀಪರ್ ಸಹ ಅಕ್ಟೋಬರ್ 31 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಅಂತಿಮ ಉಡಾವಣಾ ವಿವರಗಳು ಮತ್ತು ನಿಯಮಿತ ಕಾರ್ಯಾಚರಣೆಯ ವೇಳಾಪಟ್ಟಿ ಬಗ್ಗೆ ಇನ್ನಷ್ಟೇ ಅಧಿಕೃತ ದೃಢೀಕರಣ ಬರಬೇಕಾಗಿದೆ.

ದೆಹಲಿ-ವಾರಣಾಸಿ ವಂದೇ ಭಾರತ್ ಸ್ಲೀಪರ್ ವೇಳಾಪಟ್ಟಿ

ದೆಹಲಿ -ವಾರಣಾಸಿ ರೈಲು ಸೇವೆಯ ಪ್ರಸ್ತಾವಿತ ವೇಳಾಪಟ್ಟಿಯಂತೆ, ಸಂಜೆ ರೈಲು ಹೊರಟು ಮರುದಿನ ಬೆಳಿಗ್ಗೆ ತಲುಪಲಿದೆ.

ವಾರಣಾಸಿಯಿಂದ ನವದೆಹಲಿಗೆ: ರೈಲು ಸಂಖ್ಯೆ 27421

ವಾರಣಾಸಿಯಿಂದ ನಿರ್ಗಮನ: ರಾತ್ರಿ 8.50

ಪ್ರಯಾಗ್‌ರಾಜ್ ಜಂಕ್ಷನ್‌ಗೆ ಆಗಮನ: ರಾತ್ರಿ 10.35

ಪ್ರಯಾಗ್‌ರಾಜ್ ಜಂಕ್ಷನ್‌ನಿಂದ ಆಗಮನ: ರಾತ್ರಿ 10.40

ಕಾನ್ಪುರ್ ಸೆಂಟ್ರಲ್‌ಗೆ ಆಗಮನ: ಬೆಳಿಗ್ಗೆ 12.40

ನವದೆಹಲಿಯಿಂದ ವಾರಣಾಸಿಗೆ: ರೈಲು ಸಂಖ್ಯೆ 27422

ನವದೆಹಲಿಯಿಂದ ನಿರ್ಗಮನ: ರಾತ್ರಿ 9.40

ಪ್ರಯಾಗ್‌ರಾಜ್ ಜಂಕ್ಷನ್‌ಗೆ ಆಗಮನ: ಮರುದಿನ ಬೆಳಿಗ್ಗೆ 4.45

ಪ್ರಯಾಗ್‌ರಾಜ್ ಜಂಕ್ಷನ್‌ನಿಂದ ನಿರ್ಗಮನ: ಬೆಳಿಗ್ಗೆ 4.50

ವಾರಣಾಸಿಗೆ ಆಗಮನ: ಬೆಳಿಗ್ಗೆ 6.45

ಪ್ರಸ್ತಾಪಿತ ನಿಲ್ದಾಣಗಳು

ಪ್ರಸ್ತಾಪಿತ ವೇಳಾಪಟ್ಟಿಯು ಪ್ರಯಾಗ್‌ರಾಜ್ ಜಂಕ್ಷನ್ ಅನ್ನು ಐದು ನಿಮಿಷಗಳ ನಿಲ್ದಾಣವೆಂದು ಪಟ್ಟಿ ಮಾಡಲಾಗಿದೆ. ಕಾನ್ಪುರ್ ಸೆಂಟ್ರಲ್‌ನಲ್ಲಿ ನಿಲುಗಡೆ ಅವಧಿಯನ್ನು ಲಭ್ಯವಿರುವ ವೇಳಾಪಟ್ಟಿಯಲ್ಲಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಈ ಸಮಯ, ರೈಲು ಸಂಖ್ಯೆಗಳು ಮತ್ತು ನಿಲುಗಡೆಗಳು ತಾತ್ಕಾಲಿಕವಾಗಿದ್ದು, ಭಾರತೀಯ ರೈಲ್ವೆಯಿಂದ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಪ್ರಯಾಣ ಯೋಜನೆಗಳನ್ನು ಮಾಡುವ ಮೊದಲು ಪ್ರಯಾಣಿಕರು ಅಂತಿಮ ವೇಳಾಪಟ್ಟಿಯನ್ನು ಪರಿಶೀಲಿಸಿಕೊಂಡು ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ.

ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ವೇಳಾಪಟ್ಟಿ ಮತ್ತು ಮಾರ್ಗ

ಮುಂಬೈ- ಬೆಂಗಳೂರು ಸೇವೆಯು 27651 ಮತ್ತು 27652 ರೈಲು ಸಂಖ್ಯೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ, ಆದಾಗ್ಯೂ ಈ ಸಂಖ್ಯೆಗಳು ದೃಢೀಕರಿಸಲ್ಪಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+