Vande Bhart Train Restaurant: ಐಶಾರಾಮಿ ಕೋಚ್ ರೆಸ್ಟೋರೆಂಟ್ ಆರಂಭ: ಎಲ್ಲಿ, ಆಹಾರ ಪಟ್ಟಿ, ವಿಶೇಷತೆ ತಿಳಿಯಿರಿ

ನವದೆಹಲಿ, ನವೆಂಬರ್ 13: ಭಾರತಿ ರೈಲ್ವೆಗಳ ಕೋಚ್ ರೆಸ್ಟೋರೆಂಟ್ ಮೂಲಕ ವಿವಿಧ ಬಗೆಯ ಊಟ-ತಿಂಡಿ ಒದಗಿಸುವುದು ಹೊಸತೇನಲ್ಲ. ಈ ಭಾರಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಕೋಚ್‌ನಲ್ಲಿ 'ರೆಸ್ಟೋರೆಂಟ್' (Vande Bharat Train Restaurant) ಹೌರಾ ರೈಲು ನಿಲ್ದಾಣದಲ್ಲಿ ಆರಂಭವಾಗಿದೆ.

ಹೌದು, ಪಶ್ಚಿಮ ಬಂಗಾಳ ರಾಜ್ಯದ ಹೌರಾ ರೈಲು ನಿಲ್ದಾಣದಲ್ಲಿ ನೀವು ದೂರದಿಂದ ನೋಡಿದರೆ ಅಲ್ಲಿ ವಂದೇ ಭಾರತ್ ರೈಲು ನಿಂತಿರುವಂತೆ ಕಾಣುತ್ತದೆ. ಹತ್ತಿರ ಹೋದರೆ ಇದೊಂದು ಐಶಾರಾಮಿ ರೈಲಾಗಿದ್ದು, ಇದರ ಕೋಚ್‌ನಲ್ಲಿ ರೆಸ್ಟೋರೆಂಟ್ ತೆರೆದಿರುವುದು ನಿಮಗೆ ಕಂಡು ಬರುತ್ತದೆ.

Vande Bharat Restaurant started in Howrah Railway Station,Check Menu List, Know the Coach Speciality

ಈ ವಂದೇ ಭಾರತ್‌ ರೈಲ್ವೆ ಕೋಚ್ ರೆಸ್ಟೊರೆಂಟ್‌ನಲ್ಲಿ ರುಚಿಕರವಾದ ಸಸ್ಯಹಾರಿ (ವೆಜ್) ಮತ್ತು ಮಾಂಸಹಾರ (ನಾನ್ ವೆಜ್) ತಿನಿಸುಗಳು ಸಿಗುತ್ತವೆ. ಹಾಗಾದರೆ ಯಾರೆಲ್ಲ ಈ ರೆಸ್ಟೋರೆಂಟ್ ಬಳಸಬಹುದು, ಇಲ್ಲಿ ತಿನ್ನಲು ಟಿಕೆಟ್ ಕಡ್ಡಾಯವೇ, ಇದು ಪ್ರಯಾಣಿಕರಿಗೇ ಮಾತ್ರವಾ? ಎಂದು ಇಲ್ಲಿ ತಿಳಿಯೋಣ.

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ರೈಲು ಪ್ರಮಾಣಿಕರಲ್ಲಿನ ಉತ್ಸಾಹ ಹೆಚ್ಚಾಗಿದೆ. 2019 ರಲ್ಲಿ ದೇಶದಲ್ಲಿ ಈ ಐಶಾರಾಮಿ ರೈಲು ಸಂಪರ್ಕ ಸೇವೆ ಪ್ರಾರಂಭವಾದಾಗಿನಿಂದ 35 ಕ್ಕೂ ಹೆಚ್ಚು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳನ್ನು ವಿವಿಧ ಮಾರ್ಗಗಳಲ್ಲಿ ಸೇವೆ ನೀಡುತ್ತಿವೆ.

ರೈಲು ಪ್ರಯಾಣಿಕರ ಈ ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು ಹೌರಾ ನಿಲ್ದಾಣದ ಆವರಣದಲ್ಲಿರುವ ರೈಲು ಕೋಚ್‌ನಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದ ಕುರಿತು ಇನ್‌ ಇನ್‌ಫಾರ್ಮಲ್ ನ್ಯೂಸ್ ವರದಿ ಮಾಡಿದೆ.

ವಂದೇ ಭಾರತ್ ಕೋಚ್ ರೆಸ್ಟೋರೆಂಟ್ ನಲ್ಲಿ ಏನೇನಿದೆ?

ಹೌರಾ ನಿಲ್ದಾಣದ ಹೊಸ ಸಂಕೀರ್ಣದ ಮುಂಭಾಗದಲ್ಲಿ ವಂದೇ ಭಾರತ್ ಮಾದರಿ ರೈಲಿನ ಕೋಚ್‌ನಲ್ಲಿ ತೆರೆಯಲಾದ ಈ ರೆಸ್ಟೋರೆಂಟ್ ಇತ್ತೀಚೆಗಷ್ಟೇ ಆರಂಭಿಸಲಾಗಿದೆ. ಈ ರೆಸ್ಟೋರೆಂಟ್ ಅನ್ನು ನವೆಂಬರ್ 10ರಂದು ಶುಕ್ರವಾರ ಕೇಂದ್ರ ಖಾತೆ ರಾಜ್ಯ ಸಚಿವ ಶಾಂತನು ಠಾಕೂರ್ ಅವರು ಉದ್ಘಾಟಿಸಿದರು.

ಈ ರೆಸ್ಟೋರೆಂಟ್ ಹೌರಾ ನಿಲ್ದಾಣದ ಮುಂದಿನ ಹೂಗ್ಲಿ ನದಿಯ (ಗಂಗಾ) ದಡದ 'ಬಾಪು ಉದ್ಯಾನ'ದಲ್ಲಿ ಆರಂಭಿಸಲಾಗಿದೆ. ಗಂಗೆ ನದಿ ನೀರಿನ ತಾಗಿ ಬಾರುವ ತಂಪು ಗಾಳಿ ಆನಂದಿಸುತ್ತಾ ಜನರು ಈ ರೆಸ್ಟೋರೆಂಟ್‌ನಲ್ಲಿ ಇಷ್ಟದ ಆಹಾರ ಸವಿಯಲು ಅವಕಾಶ ಇದೆ. ಎಸಿ-ನಾನ್ ಎಸಿ ಆಸನಕ್ಕೂ ವ್ಯವಸ್ಥೆ ಮಾಡಲಾಗಿದೆ. ಇಷ್ಟದ ಆಸನಗಳಲ್ಲಿ ಕೂತು ಆಹಾರ ಆನಂದಿಸಬಹುದು.

'ಐಶಾರಾಮಿ ರೈಲ್ ಕೋಚ್ ರೆಸ್ಟೋರೆಂಟ್'

ಹೌರಾ ನಿಲ್ದಾಣದ ಮುಂಭಾಗದಲ್ಲಿರುವ ಈ ರೆಸ್ಟೋರೆಂಟ್ ಅನ್ನು 'ರೈಲ್ ಕೋಚ್ ರೆಸ್ಟೋರೆಂಟ್' ಎಂದು ಕರೆಯಲಾಗುತ್ತದೆ. ಇದರ ಸುತ್ತಲೂ ಹಸರು ವಾತಾವರಣ ಇದೆ. ಇಲ್ಲಿನ ಪ್ರದೇಶ ಮರ-ಗಿಡಗಳಿಂದ ತುಂಬಿದೆ. ಇದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತದೆ.

ಮುಖ್ಯವಾಗಿ ರೈಲ್ ಕೋಚ್ ರೆಸ್ಟೋರೆಂಟ್ ಅನ್ನು ದೂರದಿಂದ ನೋಡಿದರೆ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನೀಲಿ-ಬಿಳಿ ಬಣ್ಣದ ಕೋಚ್ ಅಲ್ಲಿ ನಿಂತಿರುವಂತೆ ಕಾಣುತ್ತದೆ. ನಿಂತಿದ್ದ ಐಸಿಎಫ್ ರೈಲು ಕೋಚ್‌ ಅನ್ನು ನವೀಕರಣ ಮಾಡಿ, ಐಷಾರಾಮಿ ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದೆ. ಅತ್ಯಾಕರ್ಷಕವಾಗಿ ಕೋಚ್‌ ರೆಸ್ಟೋರೆಂಟ್ ಅಲಂಕರಿಸಲಾಗಿದೆ. ಪ್ರಯಾಣಿಕರಿಗೆ ಥ್ರೀಲ್ ನೀಡುವ ಸಲುವಾಗಿ ಇದಕ್ಕೆ ವಂದೇ ಭಾರತ್ ರೈಲು ಕೋಚ್‌ ನಂತೆ ನವೀಕರಿಸಲಾಗಿದೆ.

ಗ್ರಾಹಕರಿಗೆ ಟಿಕೆಟ್ ಕಡ್ಡಾಯವೇ?

ಈ ರೈಲ್ವೆ ಕೋಚ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ರೈಲ್ವೇ ಪ್ರಯಾಣಿಕರಾಗಿರಬೇಕೆಂದಿಲ್ಲ. ಹೀಗಾಗಿ ರೈಲ್ವೆ ಟೀಕೆಟ್ ಕಡ್ಡಾಯವಲ್ಲ ಎಂದು ಐಆರ್‌ಸಿಟಿಸಿ ತಿಳಿಸಿದೆ. ರೈಲ್ ಕೋಚ್ ರೆಸ್ಟೋರೆಂಟ್‌ಗೆ ಭೇಟಿ ನೀಡಬೇಕಾದರೆ ನೀವು ಹೌರಾ ನಿಲ್ದಾಣದ ನ್ಯೂ ಕಾಂಪ್ಲೆಕ್ಸ್ ಗೆ ತೆರಳಿ ಒಂದು ಭಾರಿಯಾದರೂ ಇಲ್ಲಿನ ಆಹಾರ, ಆನಂದ ಸವೀಯಬೇಕೆನ್ನುಷ್ಟರ ಮಟ್ಟಿಗೆ ಸುಂದರವಾಗಿ ಕೋಚ್ ನವೀಕರಿಸಲಾಗಿದೆ. ಇಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟ ಸವಿಯಬಹುದಾಗಿದೆ.

ರೆಸ್ಟೋರೆಂಟ್ ಮೆನು ಪಟ್ಟಿ ತಿಳಿಯಿರಿ

ಇಲ್ಲಿ ಊಟಕ್ಕೆಂದು ತೆರಳಿಂದರೆ ಕೊಚ್‌ನಲ್ಲಿ ಕುಳಿತು ಹೌರಾದ ಐತಿಹಾಸಿಕ ಸೇತುವೆ, ಹೌರಾ ರೈಲ್ವೆ ನಿಲ್ದಾಣ ಮತ್ತು ಸಂಜೆ ಗಂಗಾ ನದಿಯಲ್ಲಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಆಹಾರ ಮತ್ತು ತಂದೂರಿ, ಕಾಂಟಿನೆಂಟಲ್ ಮತ್ತು ಚೈನೀಸ್‌ನಂತಹ ಭಕ್ಷ್ಯಗಳು ಇಲ್ಲಿನ ಮೆನು ಪಟ್ಟಿಗೆ ಸೇರಿವೆ. ಈ ರೆಸ್ಟೊರೆಂಟ್‌ನಿಂದ ಜನರಿಗೆ ಕೈಗೆಟಕುವ ದರದಲ್ಲಿ ರುಚಿಕರವಾದ ಆಹಾರ ದೊರೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+