• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುರಂತಕ್ಕೆ ಸಂತಾಪ ಆದರೆ..ವಂದೇ ಭಾರತ್ ಮಿಷನ್ ನಿಲ್ಲಲ್ಲ!

|
Google Oneindia Kannada News

ಕ್ಯಾಲಿಕಟ್, ಆ.7: ಕೊರೊನಾವೈರಸ್ ಭೀತಿ ನಡುವೆ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತೀಯ ಸರ್ಕಾರವು ವಂದೇ ಭಾರತ್ ಮಿಷನ್ ಹಮ್ಮಿಕೊಂಡಿರುವುದು ಗೊತ್ತಿರಬೇಕಲ್ಲ. ಇದೇ ಮಿಷನ್ ನಲ್ಲಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX 1344 ಇಲ್ಲಿನ ಕರಿಪುರ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿದೆ.

   Kerala Flight Crash ನಂತರ ಮತ್ತೆ ನೆನಪಾಯ್ತು Mangalore ದುರಂತ | Oneindia Kannada

   ವಂದೇ ಭಾರತ್ ಕಾರ್ಯಾಚರಣೆಯಲ್ಲಿ ಏರ್ ಇಂಡಿಯಾ, ನಾಗರಿಕ ವಿಮಾನಯಾನ ಸಚಿವಾಲಯ, ಕೇರಳ ಸರ್ಕಾರ, ಯುಎಇ ರಾಯಭಾರ ಕಚೇರಿ ಎಲ್ಲವೂ ಸಂಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ವಿಮಾನ ವಿಳಂಬ, ಸೌಲಭ್ಯ ಕೊರತೆ, ಆರೋಗ್ಯ ಸಂರಕ್ಷಣೆ ಶಿಸ್ತು ಪಾಲನೆ ಇಲ್ಲ ಎಂಬ ದೂರುಗಳನ್ನು ಬಿಟ್ಟರೆ ಕಳೆದ 4 ಹಂತದಲ್ಲಿ ಇದು ಯಶಸ್ವಿ ಕಾರ್ಯಾಚರಣೆಯಾಗಿದೆ.

   ಏರ್ ಇಂಡಿಯಾ ವಿಮಾನ ದುರಂತ: 14 ಸಾವು, 123ಕ್ಕೂ ಹೆಚ್ಚು ಮಂದಿ ಗಾಯಏರ್ ಇಂಡಿಯಾ ವಿಮಾನ ದುರಂತ: 14 ಸಾವು, 123ಕ್ಕೂ ಹೆಚ್ಚು ಮಂದಿ ಗಾಯ

   5ನೇ ಹಂತದ ಕಾರ್ಯಾಚರಣೆಯ ಮಧ್ಯಭಾಗದಲ್ಲಿ ಏರ್ ಇಂಡಿಯಾಕ್ಕೆ ಇಂದು ಹಿನ್ನಡೆಯಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ವಂದೇ ಭಾರತ್ ಮಿಷನ್ ಎಂದಿನಂತೆ ಸಾಗಲಿದೆ ಎಂದು ಸ್ಪಷ್ಟನೆ ನೀಡಿದೆ.

   ಯುಎಇಯಿಂದ ಕೇರಳದ ಕ್ಯಾಲಿಕಟ್(Kozhikode) ಕರಿಪುರದ ಟೇಬಲ್ ಟಾಪ್ ರನ್ ವೇ ಏರ್ ಇಂಡಿಯಾ ವಿಮಾನ ಆಗಸ್ಟ್ 2 ಹಾಗೂ 5 ರಂದು ಬಂದಿಳಿದು ಹೋಗಿದೆ. ಪ್ರತಿ ಬಾರಿ ಸರಾಸರಿ 177 ಪ್ಲಸ್ ಪ್ರಯಾಣಿಕರನ್ನು ಹೊತ್ತು ತಂದಿದೆ.

   ಆಗಸ್ಟ್7 ಅಲ್ಲದೆ 9, 12, 14, 16, 19, 21,23, 26, 28, 30ರ ತನಕ ವೇಳಾಪಟ್ಟಿ ನಿಗದಿಯಾಗಿದೆ. ದುಬೈನಲ್ಲಿ 13:30ಕ್ಕೆ ಹೊರಟು ಕರಿಪುರಕ್ಕೆ 19:10ಕ್ಕೆ ಬರಬೇಕಾಗುತ್ತದೆ.

   ಕರಿಪುರ್ ವಿಮಾನ ದುರಂತ: ಸಂತ್ರಸ್ತರಿಗೆ ಸಹಾಯವಾಣಿ ಪ್ರಕಟಕರಿಪುರ್ ವಿಮಾನ ದುರಂತ: ಸಂತ್ರಸ್ತರಿಗೆ ಸಹಾಯವಾಣಿ ಪ್ರಕಟ

   ಆದರೆ, ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಆಗಸ್ಟ್ 9, 12 ರ ತನಕ ವಿಮಾನಯಾನ ಕಷ್ಟಕರವಾಗಲಿದೆ.

   ಪರಿಸ್ಥಿತಿ ಹೀಗಿದ್ದರೂ, ಇಂದು ದುರಂತ ಸಂಭವಿಸಿದರೂ ವಂದೇ ಭಾರತ್ ಮಿಷನ್ ನಿಲ್ಲಿಸಲ್ಲ, ಇಂದಿನ ಅಪಘಾತಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಏರ್ ಕ್ರಾಫ್ಟ್ ವಿಟಿ ಜಿಎಚ್ ಕೆ, ಐಎಕ್ಸ್ 1344 ಡಿಎಕ್ಸ್ ಬಿ ಸಿಸಿಜೆ ಕ್ರಾಶ್ ಲ್ಯಾಂಡಿಂಗ್ ಆಗಿದೆ. ನಮ್ಮ ಜಾಲಕ್ಕೆ ತೊಂದರೆಯಾದರೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

   English summary
   We regret that there has been an incident regarding our aircraft VT GHK, operating IX 1344 DXB CCJ. Due to crash landing of the flight, it may affect the network but Vande Bharat Mission continues: Air India Express
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X