Vande Bharat express: ಅಯೋಧ್ಯೆ-ಆನಂದ ವಿಹಾರ್ ಮಧ್ಯೆ ವಾರದಲ್ಲಿ 6 ದಿನ ರೈಲು ಸಂಚಾರ

ಲಖನೌ, ಡಿಸೆಂಬರ್ 29: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಶನಿವಾರ ಡಿಸೆಂಬರ್ 30ರಂದು ದೇಶದ ವಿವಿಧ ರಾಜ್ಯಗಳಲ್ಲಿ ಸಂಪರ್ಕ ಕಲ್ಪಿಸುವ ಕೆಲವು ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express Train) ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ 'ಅಯೋಧ್ಯೆ ಜಂಕ್ಷನ್-ಆನಂದ ವಿಹಾರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸಹ ಕಾರ್ಯಾಚರಣೆ ಆರಂಭವಾಗಲಿದೆ.

ಭಾರತೀಯ ರೈಲ್ವೇ ಇಲಾಖೆ ಮೂಲಗಳು ತಿಳಿಸಿರುವ ಪ್ರಕಾರ, ಲಕ್ನೋದ ಚಾರ್ಬಾಗ್ ನಿಲ್ದಾಣದ ಮೂಲಕ ವಾರದಲ್ಲಿ 6 ದಿನ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ. ರೈಲುಗಳ ಉದ್ಘಾಟನೆಯ ಹಿಂದಿನ ದಿನವಾದ ಡಿಸೆಂಬರ್ 29 ರ ಶುಕ್ರವಾರದಂದು ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಆಗಲಿದೆ.

Vande Bharat Express Train Run 6 days A Week in Between Ayodhya to Anand Vihar from Dec 30th

ವಂದೇ ಭಾರತ್‌ ರೈಲುಗಳು ಸುಮಾರು 6 ಗಂಟೆಗೆ ಆನಂದ್ ವಿಹಾರ್ ಟರ್ಮಿನಲ್‌ನಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಅಯೋಧ್ಯೆ ಜಂಕ್ಷನ್‌ಗೆ ತಲುಪಲಿದೆ ಎಂದು ತಾತ್ಕಾಲಿಕ ವೇಳಾಪಟ್ಟಿ ಮಾಹಿತಿ ನೀಡಿದೆ.

ಈ ನೂತನ 'ವಿಬಿ' ಅಯೋಧ್ಯೆಗೆ ತೆರಳುವ ಮೊದಲು ಕಾನ್‌ಪುರದ ಸೆಂಟ್ರಲ್ ಮತ್ತು ಚಾರ್ಬಾಗ್‌ ನಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ. ನಂತರ ಮಧ್ಯಾಹ್ನ 3 ಗಂಟೆಗೆ ಅಯೋಧ್ಯೆ ಜಂಕ್ಷನ್‌ನಿಂದ ಹೊರಟು ತಡರಾತ್ರಿಯ ವೇಳೆಗೆ ಆನಂದ್ ವಿಹಾರ್ ತಲುಪುವ ನಿರೀಕ್ಷೆ ಇದೆ. ಈ ರೈಲು ಚಾರ್ಬಾಗ್, ಕಾನ್ಪುರ ಸೆಂಟ್ರಲ್ ಹಾಗೂ ಅಲಿಗಢದಲ್ಲಿ ನಿಲುಗಡೆ ನೀಡಲಿದೆ. ಇದರಿಂದ ಈ ಭಾಗದ ಸಾವಿರಾರು ಪ್ರಯಾಣಿಕರು ಅನುಕೂಲವಾಗಲಿದೆ.

ಐದು ವಂದೇ ಭಾರತ ರೈಲು ಆರಂಭ

ಹಗಲಿನಲ್ಲಿ, ದೆಹಲಿ-ಅಮೃತಸರ, ದೆಹಲಿ-ಕತ್ರಾ, ಜಲ್ನಾ-ಮುಂಬೈ, ಕೊಯಮತ್ತೂರು-ಬೆಂಗಳೂರು ಮತ್ತು ಬೆಂಗಳೂರು-ಮಡಗಾನ್ ಮಾರ್ಗಗಳನ್ನು ಒಳಗೊಂಡಂತೆ ದೇಶದಾದ್ಯಂತ ಐದು ವಂದೇ ಭಾರತ್ ರೈಲುಗಳನ್ನು ಪ್ರಧಾನ ಮಂತ್ರಿಯವರು ಫ್ಲ್ಯಾಗ್ ಆಫ್ ಮಾಡಲು ನಿರ್ಧರಿಸಿದ್ದಾರೆ.

ಈ ವರ್ಷಾಂತ್ಯಕ್ಕೆ ಉದ್ಘಾಟನೆಗೊಳ್ಳುವ ದೇಶ ಒಟ್ಟು ವಂದೇ ಭಾರತ್ ಸೇವೆಗಳ ಸಂಖ್ಯೆ 80 ಕ್ಕೆ ಹೆಚ್ಚಾಗಲಿದೆ. ಅಯೋಧ್ಯೆ ಜಂಕ್ಷನ್‌ನಿಂದ ದರ್ಭಾಂಗಕ್ಕೆ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಿಸಲಿದ್ದಾರೆ.

Vande Bharat Express Train Run 6 days A Week in Between Ayodhya to Anand Vihar from Dec 30th

ಆಧುನಿಕ-ಐಶಾರಾಮಿ ಸೌಲಭ್ಯ

ಅಮೃತ್ ಭಾರತ್ ರೈಲುಗಳು ಅತ್ಯಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಇವು ಪ್ರಯಾಣಿಕರಿಗೆ ಐಶಾರಾಮಿ ಮತ್ತು ಆರಾಮದಾಯಕ ಅನುಭವ ನೀಡಲಿದೆ. ಈ ರೈಲಿನ ಆಸನ ಹಾಗೂ ಸ್ಲೀಪರ್ ಸೌಲಭ್ಯಗಳನ್ನು ಹೊಂದಿರುವ ಸಂಪೂರ್ಣ ನಾನ್-ಎಸಿ ವ್ಯವಸ್ಥೆ ಹೊಂದಿವೆ. 'ಅಮೃತ್ ಭಾರತ್ ಎಕ್ಸ್‌ಪ್ರೆಸ್‌'ನ ಮೊದಲ ನಿಯಮಿತ ಸೇವೆಯು ದೆಹಲಿ ಮತ್ತು ದರ್ಭಾಂಗ ಮಧ್ಯೆ ಲಭ್ಯವಾಗಲಿದೆ.

1 ಗಂಟೆಯಲ್ಲಿ ದೆಹಲಿ-ಅಯೋಧ್ಯೆ ಮಧ್ಯೆ ಪ್ರಯಾಣ

ನಾಳೆ ಶನಿವಾರ ಡಿಸೆಂಬರ್ 30ರಂದು ಪ್ರಧಾನಿ ಮೋದಿಯವರು 1450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಅಯೋಧ್ಯೆಯಲ್ಲಿನ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ದೆಹಲಿಯಿಂದ ಸುಮಾರು 180 ಪ್ರಯಾಣಿಕರೊಂದಿಗೆ ಮೊದಲ ವಾಣಿಜ್ಯ ಕಾರ್ಯಚರಣೆ ಇಲ್ಲಿಗೆ ಆರಂಭವಾಗಲಿದೆ.

ಶನಿವಾರ ಮಧ್ಯಾಹ್ನ 3 ಗಂಟೆಗೆ ಈ ನೂತನ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲಿದೆ. 680 ಕಿಮೀ ದೂರವನ್ನು ಒಂದು ಗಂಟೆ 20 ನಿಮಿಷಗಳಲ್ಲಿ ಕ್ರಮಿಸುತ್ತದೆ. ಮರಳಿ ದೆಹಲಿಗೆ ಅಯೋಧ್ಯೆಯಿಂದ ಮಧ್ಯಾಹ್ನ 3,40 ಕ್ಕೆ ವಿಮಾನವು ನಭಕ್ಕೆ ಜಿಗಿಯಲಿದೆ. ಅಲ್ಲಿಂದ ಸಂಜೆ 4.55ಕ್ಕೆ ದೆಹಲಿ ತಲುಪುತ್ತದೆ. ಈ ವಿಮಾನ ನಿಲ್ದಾಣದ ಉದ್ಘಾಟನೆಯ ದಿನದಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮತ್ತಿತರರ ಉಪಸ್ಥಿತಿ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+