Vande Bharat Express: ಬೆಂಗಳೂರು-ಕೊಯಮತ್ತೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ
ಬೆಂಗಳೂರು, ಫೆಬ್ರವರಿ 27: ಕರ್ನಾಟಕ ರಾಜ್ಯದಿಂದ ನೆರೆಯ ತಮಿಳುನಾಡು ರಾಜ್ಯಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train)ಅತ್ಯುತ್ತಮ ಪ್ರಯಾಣ ಸೇವೆ ನೀಡುತ್ತಿದೆ. ಇದರ ಸಂಚಾರ ವೇಳಾಪಟ್ಟಿ ಕುರಿತು ಪ್ರಯಾಣಿಕರಲ್ಲಿದ್ದ ಅಸಮಾಧಾನ ಇದೀಗ ದೂರವಾಗಿದೆ. ರೈಲ್ವೆ ಇಲಾಖೆಯು ಖುಷಿ ಸುದ್ದಿ ನೀಡಿದೆ.
ಕೊಯಮತ್ತೂರು- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಗುರುವಾರ ಒಂದು ದಿನ ಹೊರತುಪಡಿಸಿ ಎಲ್ಲಾ ದಿನಗಳು ಸಂಚಾರ ನಡೆಸುತ್ತದೆ. ಈ ರೈಲಿನ ಪ್ರಯಾಣ ಸಮಯದಿಂದ ಪ್ರಯಾಣಿಕರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸಲಾಗಿದೆ. ಅದಕ್ಕಾಗಿ ರೈಲು ಸೇವೆಯ ಪ್ರಯಾಣದ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬದಲಾದ ಸಮಯದಲ್ಲಿ ಬೆಳಗ್ಗೆ 7:25 ಕ್ಕೆ ಕೊಯಮತ್ತೂರಿನಿಂದ ಹೊರಡಲಿದೆ. ಈ ಹಿಂದೆ ಕೊಯಮತ್ತೂರಿನಿಂದ ಬೆಳಗ್ಗೆ 5 ಗಂಟೆಗೆ ಹೊರಡುತ್ತಿತ್ತು. ಸಮಯದ ಬದಲಾವಣೆಯು ಪ್ರಯಾಣಿಕರಿಗೆ ದೊಡ್ಡ ಸಮಾಧಾನ ತಂದಿದೆ.
ಈ ಹಿಂದೆ ಬೆಳಗಿನ ಸಮಯ ರೈಲು ಏರಲು ತೊಂದರೆ ಅನುಭವಿಸಿದ್ದರು. ಇದೀಗ ರೈಲ್ವೆ ಇಲಾಖೆ ಈ ನಿರ್ಧಾರವನ್ನು ಅನೇಕ ಪ್ರಯಾಣಿಕರು ಸ್ವಾಗತಿಸಿದ್ದಾರೆ. ಅನೇಕ ಪ್ರಯಾಣಿಕರು, ವಿಶೇಷವಾಗಿ ವೃದ್ಧರು, ಬೆಳಗ್ಗೆ 5 ಗಂಟೆಗೆ ಹೊರಡುವ ಸಮಯಕ್ಕೆ ನಿಲ್ದಾಣವನ್ನು ತಲುಪುವುದು ಸವಾಲಿನ ಸಂಗತಿ ಆಗಿತ್ತು. ಇದೀಗ ಆ ಸಮಸ್ಯೆಗಳಿಗೆ ಮುಕ್ತ ಸಿಕ್ಕಿದೆ.

ಈ ವಂದೇ ಭಾರತ್ ರೈಲಿನ ವಿವರ
* ಕೊಯಮತ್ತೂರಿನಿಂದ- ಬೆಂಗಳೂರಿಗೆ ಪ್ರಯಾಣ ಸುಮಾರು ಆರೂವರೆ ಗಂಟೆಗಳಲ್ಲಿ ಕ್ರಮಿಸುತ್ತದೆ.
* ರೈಲು ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.
* ಹಿಂದಿರುಗುವ ಪ್ರಯಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ಕಂಟೋನ್ಮೆಂಟ್‌ನಿಂದ ಮಧ್ಯಾಹ್ನ 2:20 ಕ್ಕೆ ಹೊರಡಲಿದೆ.
* ರೈಲು ರಾತ್ರಿ 8:45ಕ್ಕೆ ಕೊಯಮತ್ತೂರು ತಲುಪಲಿದೆ.
* ರೈಲು ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
* ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಕಳೆದ ವರ್ಷ ಡಿಸೆಂಬರ್ 30 ರಿಂದ ಉದ್ಘಾಟನೆಗೊಂಡು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತು.
* ಸಮಯ ಬದಲಾವಣೆಗು ಮುನ್ನ ಅಧಿಕಾರಿಗಳು ಮುಂಜಾನೆ ಹೊರಡುವ ಸಮಯದ ಬಗ್ಗೆ ಪ್ರಯಾಣಿಕರಿಂದ ಟೀಕೆಗಳನ್ನು ಎದುರಿಸಿದ್ದರು.
* ಮುಂಜಾನೆಯಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳ ಕೊರತೆಯ ಬಗ್ಗೆಯೂ ದೂರುಗಳು ಸಲ್ಲಿಕೆ ಆಗಿದ್ದವು.
* ಹೆಚ್ಚುವರಿಯಾಗಿ, ಮುಂಜಾನೆ ಸಮಯದಲ್ಲಿ ಕ್ಯಾಬ್ ಸವಾರಿಯ ವೆಚ್ಚವು ದುಬಾರಿ ಆಗಿದೆ ಎಂದು ಪ್ರಯಾಣಿಕರು ಗೋಳು ಹೇಳಿಕೊಂಡಿದ್ದರು.











Click it and Unblock the Notifications