ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಎಷ್ಟು ತಿಂಗಳುಗಳ ಕಾಲ ಸೋಂಕಿನಿಂದ ರಕ್ಷಣೆ ನೀಡಬಲ್ಲದು?

|
Google Oneindia Kannada News

ನವದೆಹಲಿ, ಮಾರ್ಚ್ 22: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಈಗಾಗಲೇ ಶುರುವಾಗಿದೆ. ಮತ್ತೆ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಇದರ ಜತೆ ಜತೆಗೆ ಲಸಿಕೆ ನೀಡುವ ಪ್ರಕ್ರಿಯೆಯೂ ಕೂಡ ಮುಂದುವರೆದಿದೆ.

ಹಾಗಾದರೆ ಒಂದು ಕೊರೊನಾ ಲಸಿಕೆಎಷ್ಟು ತಿಂಗಳುಗಳ ಕಾಲ ಸೋಂಕಿನಿಂದ ರಕ್ಷಣೆ ನೀಡಬಲ್ಲದು ಎನ್ನುವ ಪ್ರಶ್ನೆಯೂ ಕೂಡ ಹರಿದಾಡುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊರೊನಾ ಎರಡನೇ ಅಲೆಯಿಂದ ತಪ್ಪಿಸಿಕೊಳ್ಳಲು ನೀವು ಮಾಡಬೇಕಾಗಿದ್ದೇನು?ಕೊರೊನಾ ಎರಡನೇ ಅಲೆಯಿಂದ ತಪ್ಪಿಸಿಕೊಳ್ಳಲು ನೀವು ಮಾಡಬೇಕಾಗಿದ್ದೇನು?

ಮಹಾರಾಷ್ಟ್ರ, ಗುಜರಾತ್ ಪಂಜಾಬ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಾರಕ ಕೊರೊನಾ ವೈರಸ್ ಅಟ್ಟಹಾಸ ಮತ್ತೆ ತಾರಕ್ಕೇರಿದ್ದು, ಮತ್ತೆ ಕೊರೊನಾ ಆರಂಭಿಕ ದಿನಗಳನ್ನು ನೆನಪಿಸುವಂತೆ ನಿತ್ಯ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಇದರ ನಡುವೆ ಕೋವಿಡ್ ಲಸಿಕೆಗಳ ಮೇಲಿನ ಬೇಡಿಕೆ ಕೂಡ ಕ್ರಮೇಣ ಹೆಚ್ಚಾಗುತ್ತಿದೆ.

ಪ್ರತಿಯೊಬ್ಬ ನಾಗರಿಕನಿಗೂ ಕೊರೊನಾ ಲಸಿಕೆ

ಪ್ರತಿಯೊಬ್ಬ ನಾಗರಿಕನಿಗೂ ಕೊರೊನಾ ಲಸಿಕೆ

ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನೀತಿ ಆಯೋದ ಸದಸ್ಯ (ಆರೋಗ್ಯ) ವಿಕೆ ಪಾಲ್ ಅವರು, ಕೊರೋನ ಸೋಂಕು ಪ್ರಸರಣ ಸರಪಳಿಯನ್ನು ನಿಲ್ಲಿಸಬೇಕಾಗಿದೆ ಎಂದು ಹೇಳಿದ್ದಾರೆ. ಕೋವಿಡ್ ನಿಯಮಾವಳಿಗಳನ್ನು ಅನುಸರಿಸದಿರುವುದು ಮತ್ತು ನಿಯಮಾವಳಿ ಸಡಿಲತೆಯು ಕೂಡ ಸೋಂಕು ಉಲ್ಬಣಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಹೆಚ್ಚಿನ ಜನರಿಗೆ ಲಸಿಕೆ ನೀಡುವ ಪ್ರಶ್ನೆಗೆ ಉತ್ತರಿಸಿದ ಪಾಲ್, ಲಸಿಕೆಗಳು ಸೀಮಿತವಾಗಿವೆ ಮತ್ತು ಅದಕ್ಕಾಗಿಯೇ ಆದ್ಯತೆ ಮೇರೆಗೆ ನೀಡಲಾಗುತ್ತಿದೆ. ಒಂದು ವೇಳೆ ಲಸಿಕೆಗಳು ಅನಿಯಮಿತವಾಗಿ ದೊರೆತರೆ ಖಂಡಿತಾ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಲಸಿಕೆ ನೀಡುತ್ತೇವೆ ಎಂದು ಹೇಳಿದರು.

ಕೊರೊನಾ ಉಲ್ಬಣಕ್ಕೆ ಕಾರಣವೇನು?

ಕೊರೊನಾ ಉಲ್ಬಣಕ್ಕೆ ಕಾರಣವೇನು?

ಇದೇ ವೇಳೆ ದೇಶದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣ ನೀಡಿದ ಗುಲೇರಿಯಾ ಅವರು, ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಅನೇಕ ಕಾರಣಗಳಿವೆ. ಅದರಲ್ಲಿ ದೊಡ್ಡ ಹಾಗೂ ಪ್ರಮುಖ ಕಾರಣವೆಂದರೆ ಸಾಂಕ್ರಾಮಿಕ ರೋಗವು ಮುಗಿದಿದೆ ಎಂದು ಜನರು ಭಾವಿಸುತ್ತಿರುವುದು. ಭಯವೇ ಇಲ್ಲದಂತೆ ಜನ ರಾಜಾರೋಷವಾಗಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ತಿರುಗಾಡುತ್ತಿದ್ದಾರೆ. ಇದೂ ಕೂಡ ಸೋಂಕಿತರ ಸಂಖ್ಯೆ ಉಲ್ಬಣಕ್ಕೆ ಕಾರಣ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂಬೈ ಪಾಲಿಕೆಯ ಹೊಸ ಮಾರ್ಗಸೂಚಿಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂಬೈ ಪಾಲಿಕೆಯ ಹೊಸ ಮಾರ್ಗಸೂಚಿ

ಕೊರೊನಾ ಲಸಿಕೆ 8 ರಿಂದ 10 ತಿಂಗಳುಗಳ ಕಾಲ ರಕ್ಷಣೆ ನೀಡಬಹುದು

ಕೊರೊನಾ ಲಸಿಕೆ 8 ರಿಂದ 10 ತಿಂಗಳುಗಳ ಕಾಲ ರಕ್ಷಣೆ ನೀಡಬಹುದು

ಐಪಿಎಸ್ (ಕೇಂದ್ರ) ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಲೇರಿಯಾ ಅವರು, 'ಲಸಿಕೆಯ ಯಾವುದೇ ಪ್ರಮುಖ ಅಡ್ಡಪರಿಣಾಮಗಳು ದಾಖಲಾಗಿಲ್ಲ ಎಂದು ಹೇಳಿರುವ ಅವರು, ಕೋವಿಡ್ ಲಸಿಕೆ ಎಂಟು ರಿಂದ ಹತ್ತು ತಿಂಗಳವರೆಗೆ ಸೋಂಕಿನಿಂದ ಉತ್ತಮ ರಕ್ಷಣೆ ನೀಡಲು ಸಾಧ್ಯವಾಗುತ್ತದೆ ಮತ್ತು ಈ ಅವಧಿ ಇನ್ನೂ ಹೆಚ್ಚಿನದಾಗಿರಬಹುದು ಎಂದು ಹೇಳಿದ್ದಾರೆ.

"ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸಹಕಾರ ಅಗತ್ಯ"

ಆದರೆ ಈ ಕೋವಿಡ್ ಲಸಿಕೆಗಳು ಎಷ್ಟು ಸಮಯದವರೆಗೆ ಸೋಂಕಿನಿಂದ ರಕ್ಷಣೆ ನೀಡಬಲ್ಲದು. ಈ ಪ್ರಶ್ನೆಗೆ ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ. ಗುಲೇರಿಯಾ ಅವರು ಅಭಿಪ್ರಾಯಪಟ್ಟಿರುವಂತೆ ಕೋವಿಡ್ -19 ಲಸಿಕೆಗಳು ಎಂಟು ರಿಂದ ಹತ್ತು ತಿಂಗಳಕಾಲ ಸೋಂಕಿನಿಂದ ಉತ್ತಮ ರಕ್ಷಣೆ ನೀಡುತ್ತವೆ ಎಂದು ಹೇಳಿದ್ದಾರೆ.

Recommended Video

ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡುತ್ತೆ !! | Kumaraswamy | Oneindia Kannada
ಅನಿವಾರ್ಯವಲ್ಲದ ಪ್ರಯಾಣವನ್ನು ನಿರ್ಬಂಧಿಸಬೇಕು

ಅನಿವಾರ್ಯವಲ್ಲದ ಪ್ರಯಾಣವನ್ನು ನಿರ್ಬಂಧಿಸಬೇಕು

ಕೆಲವು ಸಮಯದವರೆಗೆ ಅನಿವಾರ್ಯವಲ್ಲದ ಜಾಗಗಳಿಗೆ ಪ್ರಯಾಣಿಸುವುದನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿಕೊಂಡ ಗುಲೇರಿಯಾ ಅವರು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದನ್ನು ಯಾವುದೇ ಕಾರಣಕ್ಕೂ ಜನ ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗುವುದರ ಹಿಂದಿನ ಗುಟ್ಟುಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗುವುದರ ಹಿಂದಿನ ಗುಟ್ಟು

English summary
The COVID-19 vaccine should be able to give good protection from the infection for eight to ten months, AIIMS director Randeep Guleria said . He also said that no major side-effect of the vaccine has been recorded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X